ಮುಖ್ಯ ಪುಟಮನರಂಜನೆ » ಬಾಲಿವುಡ್ » ಸುದ್ದಿ/ಗಾಸಿಪ್ » ಐಶ್‌ಗೆ ಏನೂ ಆಗಿಲ್ಲ; ಮಾಧ್ಯಮಗಳ ವಿರುದ್ಧ ಬಿಗ್ ಬಿ ಕೆಂಡ
(Aishwarya Rai | Amitabh Bachchan | TB | Stomach Tuberculosis)
ಸೊಸೆ ಐಶ್ವರ್ಯಾ ರೈಗೆ ಉದರದ ಕ್ಷಯರೋಗವಿದೆ, ಇದರಿಂದಾಗಿಯೇ ಆಕೆ ಗರ್ಭಿಣಿಯಾಗಿಲ್ಲ ಮತ್ತು ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂಬ ಕುರಿತ ಮಾಧ್ಯಮ ವರದಿಗಳಿಗೆ ಕೆಂಡ ಕಾರಿರುವ ಬಿಗ್ ಬಿ ಅಮಿತಾಭ್ ಬಚ್ಚನ್, ಈ ವರದಿಗಳೆಲ್ಲವೂ ಸುಳ್ಳು, ತನ್ನ ಮನೆಯ ಮಹಿಳೆಯರಿಗೆ ಅವಮಾನ ಮಾಡುವುದನ್ನು ತಾನೆಂದಿಗೂ ಸಹಿಸಲಾರೆ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.
PTI
ಐಶ್ವರ್ಯಾ ನನ್ನ ಸೊಸೆಯಲ್ಲ, ಮಗಳೇ ಆಗಿದ್ದಾಳೆ. ಅವಳ ವಿರುದ್ಧವಾಗಲೀ, ಅಥವಾ ನಮ್ಮ ಕುಟುಂಬದವರ ಯಾವುದೇ ಸ್ತ್ರೀಯರ ಮೇಲಾಗಲೀ ಕೆಟ್ಟ ಹೆಸರು ತರುವ ಪ್ರಯತ್ನಗಳ ವಿರುದ್ಧ ಕೊನೆಯುಸಿರು ಇರುವವರೆಗೂ ಹೋರಾಡುವುದಾಗಿ ಬಚ್ಚನ್ ಹೇಳಿದ್ದಾರೆ.
ಈ ಬಗ್ಗೆ ವರದಿ ಪ್ರಕಟಿಸಿದ ಮುಂಬೈ ಮಿರರ್ ಪತ್ರಿಕೆಗೆ ಸ್ವತಃ ಐಶ್ವರ್ಯಾ ರೈ ಅವರೇ ಪತ್ರವನ್ನೂ ಬರೆದಿದ್ದು, ಈ ಸುಳ್ಳು ಸುದ್ದಿಯಿಂದ ಆಘಾತವಾಗಿರುವುದಾಗಿ ತಿಳಿಸಿದ್ದಾರೆ.
ಟ್ವಿಟ್ಟರಿನಲ್ಲಿ ಐಶ್ವರ್ಯಾ ಪತಿ ಅಭಿಷೇಕ್ ಬಚ್ಚನ್ ಕೂಡ ಕೆಂಡ ಕಾರಿದ್ದು, ನನ್ನ ಬಗ್ಗೆ ಮಾಧ್ಯಮಗಳು ಪ್ರಕಟಿಸಿದ ಊಹಾಪೋಹದ ಸುದ್ದಿಗಳಿಗೆ ನಾನೆಂದಿಗೂ ಪ್ರತಿಕ್ರಿಯಿಸಿಲ್ಲ. ಆದರೆ ಮನೆಯ ಹೆಂಗಸರ ಬಗ್ಗೆ ಬರೆದಿರುವುದು ಮಿತಿಯನ್ನು ಮೀರಿದಂತಾಗಿದೆ ಎಂದು ಆಕ್ರೋಶದಿಂದ ಬರೆದಿದ್ದಾರೆ.