ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಅಭಿಷೇಕ್, ಫರ್ಹಾನ್‌ಗೆ ಕನ್ನಡ ಕಲಿಸಿದ ದೀಪಿಕಾ ಪಡುಕೋಣೆ! (Abhishek Bachchan | Deepika Padukone | Kannada | Aishwarya | Farhan Akthar)
ಸುದ್ದಿ/ಗಾಸಿಪ್
Bookmark and Share Feedback Print
 
Deepika Padukone
IFM
ದೀಪಿಕಾ ಪಡುಕೋಣೆ ಎಂಬ ಕನ್ನಡತಿ ಮುಂಬೈಗೆ ಹಾರಿ ಅಲ್ಲೇ ಬಾಲಿವುಡ್ಡಿನಲ್ಲಿ ನೆಲೆಯೂರಿದ್ದು ಗೊತ್ತೇ ಇದೆ. ಈ ದೀಪಿಕಾ ಪಡುಕೋಣೆ ಚಾನಲ್ಲುಗಳಲ್ಲಿ ತನ್ನ ಹೆಸರಿನ ಅಚ್ಚಕನ್ನಡದ ಪಡುಕೋಣೆ ಶಬ್ದವನ್ನು ಸ್ಟೈಲಾಗಿ ದೀಪಿಕಾ ಪಡುಕೋನ್ ಅಂತ ಹೇಳಿದ್ದನ್ನು ಕೇಳಿ ಕನ್ನಡಿಗರು ತಲೆ ಮೇಲೆ ಕೈಯಿಟ್ಟದ್ದೂ ಗೊತ್ತು. ಉಪೇಂದ್ರ ಜೊತೆಗೆ ಐಶ್ವರ್ಯಾ ಚಿತ್ರದಲ್ಲಿ ಮೊದಲ ಬಾರಿಗೆ ಸಿನಿಮಾ ರಂಗಕ್ಕೆ ಕಾಲಿಟ್ಟ ದೀಪಿಕಾ ಆಮೇಲೆ ಕನ್ನಡದತ್ತ ತಿರುಗಿ ನೋಡಲಿಲ್ಲ. ಆದರೆ ಬಾಲಿವುಡ್ಡಿಗೆ ಹಾರಿದ ದೀಪಿಕಾ ಕನ್ನಡ ಮರೆತಿಲ್ಲ ಎಂಬುದು ಸತ್ಯ!

ಹೌದು. ದೀಪಿಕಾ ಮೊನ್ನೆ ಖಾಸಗಿ ಚಾನಲ್‌ನ ಬಿಂಗೂ ಎಂಬ ಕಾರ್ಯಕ್ರಮದಲ್ಲಿ ಕನ್ನಡ ಟೀಚರ್ ಆಗಿದ್ದಾಳೆ. ಕಾರ್ಯಕ್ರಮದಲ್ಲಿ ನಿರ್ದೇಶಕ, ನಟ ಫರ್ಹಾನ್ ಅಖ್ತರ್ ಹಾಗೂ ನಮ್ಮ ತುಳುನಾಡ ಬೆಡಗಿ ಐಶ್ವರ್ಯಾ ರೈ ಗಂಡ, ನಟ ಅಭಿಷೇಕ್ ಬಚ್ಚನ್ ಅವರಿಗೆ ದೀಪಿಕಾ ಕನ್ನಡ ಪಾಠ ಮಾಡಿದ್ದಾಳೆ!!! ಅವರೂ ಕೂಡಾ ಶಿಸ್ತಾಗಿ ಟೀಚರ್ ಆಜ್ಞೆಯನ್ನು ಪಾಲಿಸಿದ್ದಾರೆ. ಈಗ ಅಭಿಷೇಕ್ ಹಾಗೂ ಫರ್ಹಾನ್‌ಗೆ 'ನನ್ದು ಹೆಸರು ಅಭಿಷೇಕ್', 'ನನ್ದು ಹೆಸರು ಫರ್ಹಾನ್' ಎಂದು ಹೇಳಲು ಬರುತ್ತದೆ. ಅಷ್ಟೇ ಅಲ್ಲ, ಅಭಿಷೇಕ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ 'ನನಗೆ ಮಿಲ್ಕ್ ಕೇಕ್ ತುಂಬಾ ಇಷ್ಟ' ಎಂದು ಹೇಳಲು ಕೂಡಾ ಕಲಿತಿದ್ದಾರೆ!

ಕಾರ್ಯಕ್ರಮದಲ್ಲಿ ದೀಪಿಕಾ, ಅಭಿಷೇಕ್ ಬಚ್ಚನ್ ಹಾಗೂ ಫರ್ಹಾನ್ ಭಾಗವಹಿಸಿದ್ದರು. ದೀಪಿಕಾಳನ್ನು ನೇರವಾಗಿ ಅಭಿಷೇಕ್ ಹಿಂದಿಯಲ್ಲಿ, 'ನಮಗೆ ಗೊತ್ತಿರುವ ಹಾಗೆ ನಿಮ್ಮ ಮೊದಲ ಚಿತ್ರ ಓಂ ಶಾಂತಿ ಓಂ ಅಲ್ಲ. ನೀವು ಅದಕ್ಕೂ ಮೊದಲು ಕನ್ನಡ ಭಾಷೆಯ ಚಿತ್ರದಲ್ಲಿ ನಟಿಸಿದ್ದೀರಿ. ಆ ಚಿತ್ರದ ಹೆಸರೇನು?' ಅಂತ ದೀಪಿಕಾಳಲ್ಲಿ ಕೇಳಿದರು ಅಭಿಷೇಕ್. ಆಗ ದೀಪಿಕಾ 'ಐಶ್ವರ್ಯಾ' ಅಂತ ಉತ್ತರ ನೀಡಿದ್ರು. 'ಹಾಂ, ಕೇಳಿಲ್ಲ ಇನ್ನೊಮ್ಮೆ ಹೇಳಿ..' ಅಂತ ಮತ್ತೆ ಅಭಿಷೇಕ್ ದೀಪಿಕಾಳಲ್ಲಿ ಕೇಳಿದಾಗ ದೀಪಿಕಾ ಜೋರಾಗಿ ನಗುತ್ತಾ ಮತ್ತೂ ಜೋರಾಗಿ 'ಐಶ್ವರ್ಯಾ..' ಎನ್ನುತ್ತಾಳೆ. ಎಲ್ಲರಲ್ಲೂ ನಗುವೋ ನಗು. ಕಾರಣ ಅಭಿಷೇಕ್ ಪತ್ನಿಯೂ ಐಶ್ವರ್ಯಾ ತಾನೇ?!

ಇಷ್ಟಾದ ಮೇಲೆ ದೀಪಿಕಾ ತನ್ನ ಕನ್ನಡ ತರಗತಿ ಶುರು ಮಾಡುತ್ತಾಳೆ. 'ನನ್ದು ಹೆಸರು ದೀಪಿಕಾ. ನನ್ದು ಹೆಸರು ಅಭಿಷೇಕ್' ಅಂತ ಪ್ರಥಮ ಪಾಥ ಶುರು ಮಾಡಿದಳು. ನಂತರ ಅಭಿಷೇಕ್‌ಗೆ ಮಿಲ್ಕ್ ಕೇಕ್ ಇಷ್ಟ ಅಂತ ಗೊತ್ತಾಗಿ, ಅಭಿಷೇಕ್‌ಗೆ, 'ನನಗೆ ಮಿಲ್ಕ್ ಕೇಕ್ ತುಂಬಾ ಇಷ್ಟ' ಅಂತ ಕನ್ನಡದಲ್ಲಿ ಹೇಳಿಕೊಡುತ್ತಾಳೆ.

ವಿಶೇಷವೆಂದರೆ, ಹೀಗೆ ದೀಪಿಕಾ ಹೇಳಿಕೊಟ್ಟಿದ್ದನ್ನು ಚಾಚೂ ತಪ್ಪದಂತೆ ಅಭಿಷೇಕ್ ಪುನರುಚ್ಛರಿಸುತ್ತಾರೆ, ಆದರೆ ದೀಪಿಕಾಗಿಂತಲೂ ಸ್ಪಷ್ಟ ಸುಂದರವಾಗಿ ಕನ್ನಡದಲ್ಲಿ ಹೇಳಿದರು ಅಂದರೂ ತಪ್ಪಿಲ್ಲ ಬಿಡಿ!
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಅಭಿಷೇಕ್ ಬಚ್ಚನ್, ದೀಪಿಕಾ ಪಡುಕೋಣೆ, ಕನ್ನಡ, ಫರ್ಹಾನ್ ಅಖ್ತರ್