ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಫಿಲಂಫೇರ್ ಪ್ರಶಸ್ತಿ ಕೊಳ್ಳೆಹೊಡೆದ 3 ಈಡಿಯಟ್ಸ್, ಬಿಗ್ ಬಿ ಶ್ರೇಷ್ಠ ನಟ! (Amitabh Bachchan | Vidya Bala | Filmfare awards | Paa | 3 Idiots)
ಸುದ್ದಿ/ಗಾಸಿಪ್
Bookmark and Share Feedback Print
 
IFM
2009ನೇ ಸಾಲಿನ ಶ್ರೇಷ್ಠ ನಟ ಫಿಲಂಫೇರ್ ಪ್ರಶಸ್ತಿ ಪ್ರಕಟಗೊಂಡಿದ್ದು, ಅಮೀರ್ ಖಾನ್ ಅಭಿನಯದ '3 ಈಡಿಯಟ್ಸ್' ವರ್ಷದ ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿದ್ದು, ಹಲವು ಪ್ರಶಸ್ತಿಗಳನ್ನು ಕೊಳ್ಳೆಹೊಡೆದಿದೆ. 55ನೇ ಸಾಲಿನ ಫಿಲಂಫೇರ್ ಪ್ರಶಸ್ತಿ ಸಮಾರಂಭದಲ್ಲಿ ಬಿಗ್ ಬಿ ತಮ್ಮ ಪಾ ಚಿತ್ರದ ಅಮೋಘ ನಟನೆಗೆ ಶ್ರೇಷ್ಠ ನಟ ಪ್ರಶಸ್ತಿ ಬಾಚಿಕೊಂಡರೆ, ನಟಿ ವಿದ್ಯಾ ಬಾಲನ್ ತಮ್ಮ ಪಾ ಚಿತ್ರದ ನಟನೆಗೆ ಶ್ರೇಷ್ಠ ನಟಿ ಪ್ರಶಸ್ತಿ ಗೆದ್ದುಕೊಂಡರು.

ಆದರೆ ಬಚ್ಚನ್ ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸದಿದ್ದುದರಿಂದ ಬಚ್ಚನ್ ಪ್ರಶಸ್ತಿಯನ್ನು ವಿದ್ಯಾ ಬಾಲನ್ ಅವರೇ ಬಚ್ಚನ್ ಪರವಾಗಿ ಸ್ವೀಕರಿಸಿದರು.

2009ನೇ ಸಾಲಿನ ಶ್ರೇಷ್ಠ ಚಿತ್ರವಾಗಿ 3 ಈಡಿಯಟ್ಸ್ ಹೊರಹೊಮ್ಮಿದರೆ, ಅದೇ ಚಿತ್ರದ ನಿರ್ದೇಶನಕ್ಕಾಗಿ ರಾಜ್ ಕುಮಾರ್ ಹಿರಾನಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನೂ ಗೆದ್ದುಕೊಂಡರು.

ಡೆಲ್ಲಿ 6 ಚಿತ್ರದ ಸಂಗೀತಕ್ಕಾಗಿ ಎ.ಆರ್. ರೆಹಮಾನ್ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿಗೆ ಭಾಜನರಾದರು. ಡೆಲ್ಲಿ 6ನ ಮಸಾಕಲಿ ಹಾಡಿಗಾಗಿ ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿಯನ್ನು ಮೋಹಿತ್ ಚೌಹಾಣ್ ಪಡೆದರೆ, ಅದೇ ಚಿತ್ರದ ಹಾಡಿಗಾಗಿ ರೇಖಾ ಭಾರದ್ವಾಜ್ ಹಾಗೂ ವೇಕ್ ಅಪ್ ಸಿದ್ ಚಿತ್ರದ ಹಾಡಿಗಾಗಿ ಕವಿತಾ ಸೇತ್ ಅತ್ಯುತ್ತಮ ಹಿನ್ನೆಲೆ ಗಾಯಕಿಯರಾಗಿ ಹೊರಹೊಮ್ಮಿದರು.
IFM


ಅತ್ಯುತ್ತಮ ಚಿತ್ರ- 3 ಈಡಿಯಟ್ಸ್ (ನಿರ್ಮಾಣ- ವಿಧು ವಿನೋದ್ ಛೋಪ್ರಾ)
ಅತ್ಯುತ್ತಮ ನಿರ್ದೇಶಕ- ರಾಜ್ ಕುಮಾರ್ ಹಿರಾನಿ (3 ಈಡಿಯಟ್ಸ್)
ಅತ್ಯುತ್ತಮ ನಟ- ಅಮಿತಾಬ್ ಬಚ್ಚನ್ (ಪಾ)
ಅತ್ಯುತ್ತಮ ನಟಿ- ವಿದ್ಯಾ ಬಾಲನ್ (ಪಾ)
ಅತ್ಯುತ್ತಮ ಪೋಷಕ ನಟ- ಬೋಮನ್ ಇರಾನಿ (3 ಈಡಿಯಟ್ಸ್)
ಅತ್ಯುತ್ತಮ ಪೋಷಕ ನಟಿ- ಕಲ್ಕಿ ಕೋಚ್ಲಿನ್ (ದೇವ್ ಡಿ)
ಅತ್ಯುತ್ತಮ ಚೊಚ್ಚಲ ನಿರ್ದೇಶಕ- ಆಯನ್ ಮುಖರ್ಜಿ (ವೇಕ್ ಅಪ್ ಸಿದ್)
ಅತ್ಯುತ್ತಮ ಚೊಚ್ಚಲ ನಿರ್ದೇಶಕಿ- ಝೋಯಾ ಅಖ್ತರ್ (ಲಕ್ ಬೈ ಚಾನ್ಸ್)
ಅತ್ಯುತ್ತಮ ಸಂಭಾಷಣೆಕಾರ- ರಾಜ್ ಕುಮಾರ್ ಹಿರಾನಿ ಹಾಗೂ ವಿಧು ವಿನೋದ್ ಛೋಪ್ರಾ (3 ಈಡಿಯಟ್ಸ್)
ಅತ್ಯುತ್ತಮ ಚಿತ್ರಕಥೆ- ರಾಜ್ ಕುಮಾರ್ ಹಿರಾನಿ, ವಿಧು ವಿನೋದ್ ಛೋಪ್ರಾ, ಅಭಿಜಿತ್ ಜೋಶಿ (3 ಈಡಿಯಟ್ಸ್)
ಅತ್ಯುತ್ತಮ ಕಥೆ- ಅಭಿಜಿತ್ ಜೋಷಿ, ರಾಜ್ ಕುಮಾರ್ ಹಿರಾನಿ (3 ಈಡಿಯಟ್ಸ್)
ಅತ್ಯುತ್ತಮ ವಿಮರ್ಶಾತ್ಮಕ ಚಿತ್ರ- ಫಿರಾಕ್ (ನಿರ್ದೇಶನ- ನಂದೀತಾ ದಾಸ್)
ಅತ್ಯುತ್ತಮ ಚೊಚ್ಚಲ ನಟಿ- ಮಾಹಿ ಗಿಲ್ (ದೇವ್ ಡಿ)
2009ರ ಅತ್ಯಪೂರ್ವ ಪ್ರದರ್ಶನ ನೀಡಿದ ಅತ್ಯುತ್ತಮ ನಟ- ರಣಬೀರ್ ಕಪೂರ್
ಅತ್ಯುತ್ತಮ ಸಂಗೀತ ನಿರ್ದೇಶನ- ಎ.ಆರ್.ರೆಹಮಾನ್ (ಡೆಲ್ಲಿ 6)
ಅತ್ಯುತ್ತಮ ಸಾಹಿತ್ಯ- ಇರ್ಶಾದ್ ಕಮಿಲ್ (ಲವ್ ಆಜ್ ಕಲ್)
ಅತ್ಯುತ್ತಮ ಹಿನ್ನೆಲೆ ಗಾಯಕಿ- ರೇಖಾ ಭಾರದ್ವಾಜ್ (ಡೆಲ್ಲಿ 6) ಹಾಗೂ ಕವಿತಾ ಸೇತ್ (ವೇಕ್ ಅಪ್ ಸಿದ್)
ಅತ್ಯುತ್ತಮ ಹಿನ್ನೆಲೆ ಗಾಯಕ- ಮೋಹಿತ್ ಚೌಹಾಣ್ (ಡೆಲ್ಲಿ 6)
ಆರ್ ಡಿ ಬರ್ಮನ್ ಸಂಗೀತ ಪ್ರಶಸ್ತಿ- ಅಮಿತ್ ತ್ರಿವೇದಿ
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಈಡಿಯಟ್ಸ್, ಪಾ, ಅಮಿತಾಬ್ ಬಚ್ಚನ್, ವಿದ್ಯಾ ಬಾಲನ್, ಫಿಲಂಫೇರ್