ಆಸ್ಕರ್ ಪ್ರಕಟ: ಅವತಾರ್‌ಗೆ 3 ಪ್ರಶಸ್ತಿ, ದಿ ಹರ್ಟ್ ಲಾಕರ್ ಅತ್ಯುತ್ತಮ ಚಿತ್ರ!
ಸೋಮವಾರ, 8 ಮಾರ್ಚ್ 2010( 12:29 IST )
PR
ಅಂತಾರಾಷ್ಟ್ರೀಯ ವಲಯದಲ್ಲಿ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯೆಂದೇ ಕರೆಸಿಕೊಳ್ಳುವ 82ನೇ ಸಾಲಿನ ಆಸ್ಕರ್ ಪ್ರಶಸ್ತಿ ಪ್ರಕಟವಾಗಿದೆ. ದಿ ಹರ್ಟ್ ಲಾಕರ್ ಎಂಬ ಹಾಲಿವುಡ್ ಚಿತ್ರ 2009ನೇ ಸಾಲಿನ ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿದ್ದು, ಇದು ಆರು ಪ್ರಶಸ್ತಿಗಳವನ್ನು ಬುಟ್ಟಿಗೆ ಹಾಕಿಕೊಂಡಿದೆ. ಟೈಟಾನಿಕ್ ಚಿತ್ರವನ್ನು ನಿರ್ದೇಶಿಸಿದ ಹೆಗ್ಗಳಿಕೆಯ ಹಾಗೂ ಭಾರತವೂ ಸೇರಿದಂತೆ ವಿಶ್ವದಾದ್ಯಂತ ಭಾರೀ ಪ್ರಚಾರ ಗಿಟ್ಟಿಸಿದ್ದ ಅವತಾರ್ ಚಿತ್ರ ಮೂರು ಆಸ್ಕರ್ ಪ್ರಶಸ್ತಿ ಗಳಿಸಲು ಶಕ್ತವಾಗಿದೆ.
ಮಹಿಳಾ ದಿನದಂದು ಪ್ರಶಸ್ತಿ ಪ್ರಕಟವಾಗಿದ್ದು, ವಿಶೇಷವೆಂಬಂತೆ ಅತ್ಯುತ್ತಮ ನಿರ್ದೇಶನ ವಿಭಾಗದಲ್ಲಿ ದಿ ಹರ್ಟ್ ಲಾಕರ್ ಚಿತ್ರದ ನಿರ್ದೇಶಕಿ ಕ್ಯಾಥರಿನ್ ಪ್ರಶಸ್ತಿಯನ್ನು ಬುಟ್ಟಿಗೆ ಹಾಕಿಕೊಂಡಿದ್ದು ಮಹಿಳೆಯರ ಸಾಧನೆಗೆ ಹಿಡಿದ ಕನ್ನಡಿಯಾಗಿ ಹೊರಹೊಮ್ಮಿದೆ. ಅತ್ಯುತ್ತಮ ನಾಯಕ ನಟನಾಗಿ ಇನ್‌ಗ್ಲೋರಿಯಸ್ ಬಾಸ್ಟರ್ಡ್ಸ್ ಚಿತ್ರದ ನಟನೆಗೆ ಜೆಫ್ ಬ್ರಿಡ್ಜಸ್ ಪಡೆದುಕೊಂಡರೆ, ಅತ್ಯುತ್ತಮ ನಾಯಕಿ ನಟಿಯಾಗಿ ದಿ ಬ್ಲೈಂಡ್ ಸೈಡ್ ಚಿತ್ರದ ಅಮೋಘ ನಟನೆಗಾಗಿ ಸಾಂದ್ರಾ ಬುಲ್ಲಕ್ ಬಾಚಿಕೊಂಡಿದ್ದಾರೆ.
ಕಳೆದ ಸಾಲಿನ ಆಸ್ಕರ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಎ.ಆರ್.ರೆಹಮಾನ್ ಎರಡು ಆಸ್ಕರ್‌ಗಳನ್ನು ಗೆದ್ದುಕೊಂಡು ಕೋಟಿ ಕೋಟಿ ಭಾರತೀಯ ಕಣ್ಣಲ್ಲಿ ಮಿಂಚು ಹರಿಸಿದ್ದರು. ಆದರೆ, ಬೇಸರವೆಂಬಂತೆ ಈ ಬಾರಿ ಭಾರತದ ಯಾವುದೇ ಚಿತ್ರವಾಗಲೀ, ಭಾರತೀಯರಾಗಲಿ ಆಸ್ಕರ್ ಪ್ರಶಸ್ತಿಯ ಅಂಚಿನವರೆಗೂ ತಲುಪಿರಲೇ ಇಲ್ಲ!
ಪ್ರಶಸ್ತಿ ವಿಜೇತ ಚಿತ್ರಗಳ ಪಟ್ಟಿ ಹೀಗಿದೆ.
ಅತ್ಯುತ್ತಮ ಚಿತ್ರ- ದಿ ಹರ್ಟ್ ಲಾಕರ್ ಅತ್ಯುತ್ತಮ ನಾಯಕ ನಟ- ಜೆಫ್ ಬ್ರಿಡ್ಜಸ್ (ಚಿತ್ರ- ಕ್ರೇಝಿ ಹಾರ್ಟ್) ಅತ್ಯುತ್ತಮ ಪೋಷಕ ನಟ- ಕ್ರಿಸ್ಟೋಫರ್ ವಾರ್ಟ್ಸ್ (ಚಿತ್ರ- ಇನ್‌ಗ್ಲೋರಿಯಸ್ ಬಾಸ್ಟರ್ಡ್ಸ್) ಅತ್ಯುತ್ತಮ ನಾಯಕಿ ನಟಿ- ಸಾಂದ್ರಾ ಬುಲ್ಲಕ್ (ಚಿತ್ರ- ದಿ ಬ್ಲೈಂಡ್ ಸೈಡ್) ಅತ್ಯುತ್ತಮ ಪೋಷಕ ನಟಿ- ಮೋನಿಕ್ (ಚಿತ್ರ- ಪ್ರೀಷಿಯಸ್) ಅತ್ಯುತ್ತಮ ಆನಿಮೇಟೆಡ್ ಚಿತ್ರ- ಅಪ್ ಅತ್ಯುತ್ತಮ ಕಲಾ ನಿರ್ದೇಶನ- ಅವತಾರ್ (ರಿಕ್ ಕಾರ್ಟರ್ ಹಾಗೂ ರಾಬರ್ಟ್ ಸ್ಟ್ರಾಂಬರ್ಗ್- ಕಲಾ ನಿರ್ದೇಶಕರು, ಕಿಮ್ ಸಿಂಕ್ಲೇರ್- ಸೆಟ್ ಅಲಂಕಾರ) ಅತ್ಯುತ್ತಮ ಛಾಯಾಗ್ರಹಣ- ಅವತಾರ್ (ಮಾರೋ ಫೋಯಿರ್) ಅತ್ಯುತ್ತಮ ವಸ್ತ್ರ ವಿನ್ಯಾಸ- ದಿ ಯಂಗ್ ವಿಕ್ಟೋರಿಯಾ (ಸ್ಯಾಂಡಿ ಪೋವೆಲ್) ಅತ್ಯುತ್ತಮ ನಿರ್ದೇಶನ- ದಿ ಹರ್ಟ್ ಲಾಕರ್ (ಕ್ಯಾಥರೀನ್ ಬಿಗೆಲೋ) ಅತ್ಯುತ್ತಮ ಸಾಕ್ಷ್ಯಚಿತ್ರ- ದಿ ಕೋವ್ (ಲೂಯಿ ಸೈಹೋಯಿಸ್ ಹಾಗೂ ಫಿಶರ್ ಸ್ಟೀವನ್ಸ್) ಅತ್ಯುತ್ತಮ ಕಿರು ಸಾಕ್ಷ್ಯಚಿತ್ರ- ಮ್ಯೂಸಿಕ್ ಬೈ ಪ್ರುಡೆನ್ಸ್ (ರೋಜರ್ ರಾಸ್ ವಿಲಿಯಮ್ಸ್ ಹಾಗೂ ಎಲಿನಾರ್ ಬರ್ಕೆಟ್) ಅತ್ಯುತ್ತಮ ಸಿನಿಮಾ ಸಂಕಲನ- ದಿ ಹರ್ಟ್ ಹಾಕರ್ (ಬಾಬ್ ಮುರಾವ್‌ಸ್ಕಿ ಹಾಗೂ ಕ್ರಿಸ್ ಇನ್ನಿಸ್) ಅತ್ಯುತ್ತಮ ವಿದೇಶೀ ಚಿತ್ರ- ದಿ ಸೀಕ್ರೆಟ್ ಇಂನ್ ದೆಯರ್ ಐಸ್ (ಅರ್ಜೆಂಟೈನಾದ ಚಿತ್ರ) ಅತ್ಯುತ್ತಮ ಮೇಕಪ್- ಸ್ಟಾರ್ ಟ್ರೆಕ್ (ಬರ್ನೀ ಬರ್ಮನ್, ಮಿಂಡೀ ಹಾಲ್ ಹಾಗೂ ಜೋಯಿಲ್ ಹಾರ್ಲೋ) ಅತ್ಯುತ್ತಮ ಸಂಗೀತ (ಒರಿಜಿನಲ್ ಸ್ಕೋರ್)- ಅಪ್ (ಮೈಕೆಲ್ ಗಿಯಾಚಿನೋ) ಅತ್ಯುತ್ತಮ ಸಂಗೀತ (ಒರಿಜಿನಲ್ ಸಂಗ್)- ಕ್ರೇಝಿ ಹಾರ್ಟ್ (ರಿಯಾನ್ ಬಿಂಗ್ಹಾಂ ಹಾಗೂ ಟಿ ಬೋನ್ ಬರ್ನೆಟ್) ಅತ್ಯುತ್ತಮ ಆನಿಮೇಟೆಡ್ ಕಿರು ಚಿತ್ರ- ಲೋಗೋರಮಾ (ನಿಕೋಲಸ್ ಶ್ಮೆರ್ಕಿನ್) ಅತ್ಯುತ್ತಮ ಕಿರು ಚಿತ್ರ (ಲೈವ್ ಆಕ್ಷನ್)- ದಿ ನ್ಯೂ ಟೆನೆಂಟ್ಸ್ (ಜೋಚಿಮ್ ಬ್ಯಾಕ್ ಹಾಗೂ ಟಿವಿ ಮಾಗ್ನೂಸನ್) ಅತ್ಯುತ್ತಮ ಸೌಂಡ್ ಎಡಿಟಿಂಗ್- ದಿ ಹರ್ಟ್ ಲಾಕರ್ (ಪೌಲ್ ಎನ್.ಜೆ.ಓಟ್ಟೋಸನ್) ಅತ್ಯುತ್ತಮ ಸೌಂಡ್ ಮಿಕ್ಸಿಂಗ್- ದಿ ಹರ್ಟ್ ಲಾಕರ್ (ಪೌಲ್ ಎನ್.ಜೆ.ಓಟ್ಟೋಸನ್, ರೇ ಬ್ಯಾಕೆಟ್) ಅತ್ಯುತ್ತಮ ವಿಶುವಲ್ ಎಫೆಕ್ಟ್- ಅವತಾರ್ (ಜೋ ಲೆಟ್ಟೆರಿ, ಸ್ಟೀಫನ್ ರೋಸನ್ಬಾಮ್, ರಿಚರ್ಡ್ ಬಾನೆಹ್ಯಾಂ, ಆಂಡ್ರ್ಯೂ ಆರ್.ಜೋನ್ಸ್) ಅತ್ಯುತ್ತಮ ಚಿತ್ರಕಥೆ (ಅಡಾಪ್ಟೆಡ್ ಸ್ಕ್ರೀನ್‌ಪ್ಲೇ)- ಪ್ರೀಶಿಯಸ್ (ಸಫೈರ್ ಅವರ ಪುಶ್ ಕಾದಂಬರಿ ಆಧಾರಿತ ಚಿತ್ರ) ಅತ್ಯುತ್ತಮ ಚಿತ್ರಕಥೆ (ಒರಿಜಿನಲ್ ಸ್ಕ್ರೀನ್‌ಪ್ಲೇ)- ದಿ ಹರ್ಟ್ ಲಾಕರ್ (ಮಾರ್ಕ್ ಬೋಲ್)