ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಗಂಡು ಮಗುವಿಗೆ ಜನ್ಮ ನೀಡಿದ ಕರೀಷ್ಮಾ ಕಪೂರ್ (Bollywood | Karishma Kapoor | Karena Kapoor | Samaira)
ಸುದ್ದಿ/ಗಾಸಿಪ್
Bookmark and Share Feedback Print
 
IFM
ಅಂದಿನ ಜನಪ್ರಿಯ ನಟಿ, ಕರೀನಾಳ ಅಕ್ಕ, ಕಪೂರ್ ಕುಡಿ ಕರೀಷ್ಮಾ ಕಪೂರ್ ಈಗ ಮತ್ತೊಂದು ಕುಡಿಗೆ ಜನ್ಮ ನೀಡಿದ್ದಾರೆ. ಹೌದು, ನಟಿ ಕರೀಷ್ಮಾ ಕಪೂರ್ ಮತ್ತೊಮ್ಮೆ ತಾಯಿಯಾಗಿದ್ದಾರೆ. ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕರೀಷ್ಮಾ ಕಪೂರ್ ಗಂಡುಮಗುವಿಗೆ ತಾಯಿಯಾಗುವ ಮೂಲಕ ಇದೀಗ ಇಬ್ಬರು ಮಕ್ಕಳ ಮುದ್ದಿನ ತಾಯಿಯಾಗಿದ್ದಾಳೆ.

ಶುಕ್ರವಾರ ಬೆಳಗಿನ ಜಾವ ಕರೀಷ್ಮಾ ಕಪೂರ್ ಹೆರಿಗೆಯಾಗಿದ್ದು, ಮಗು ಹಾಗೂ ತಾಯಿ ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ರಾಜಾ ಹಿಂದೂಸ್ತಾನಿ, ಹೀರೋ ನಂ.1, ದಿಲ್ ತೋ ಪಾಗಲ್ ಹೈ ಸೇರಿದಂತೆ ಹಲವು ಹಿಟ್ ಚಿತ್ರಗಳನ್ನು ನೀಡಿರುವ ಕರೀಷ್ಮಾ ಕಪೂರ್‌ಗೆ ಈಗಾಗಲೇ ಆರು ವರ್ಷದ ಮಗಳು ಸಮೈರಾ ಕೂಡಾ ಇದ್ದಾಳೆ. ಹಾಗಾಗಿ ಇದು ಎರಡನೇ ಮಗುವಾಗಿದೆ.

ಕರೀನಾಳ 85 ಲಕ್ಷದ ಗಿಫ್ಟ್!!!: ಕರೀಷ್ಮಾಗೆ ಮಗು ಜನನ ವಾಗುತ್ತಿದ್ದಂತೆ, ಬಾಲಿವುಡ್ಡಿನ ಘಟಾನುಘಟಿ ನಟ ನಟಿಯರು ಟ್ವಿಟರ್ ಮೂಲಕ ಕರೀಷ್ಮಾಗೆ ಶುಭ ಹಾರೈಸಿದ್ದಾರೆ. ಇನ್ನು ತನ್ನ ಪ್ರೀತಿಯ ಅಕ್ಕ ಗಂಡು ಮಗುವಿಗೆ ಜನ್ಮ ನೀಡಿದ್ದಕ್ಕೆ ಕರೀನಾಗಂತೂ ಸಿಕ್ಕಾಪಟ್ಟೆ ಖುಷಿಯಾಗಿದೆ. ಅಕ್ಕನ ಮಗಳು ಸಮೈರಾಳನ್ನು ಬಹುವಾಗಿ ಇಷ್ಟಪಡುವ ಕರೀನಾಗೆ ಈಗ ಮತ್ತೊಬ್ಬ ಪುಟ್ಟ ಮಗುವಿನ ಆಗಮನವಾಗಿದೆ. ಈಗಾಗಲೇ ಕರೀನಾ ಅಕ್ಕನ ಪುಟ್ಟ ಮಗನಿಗೆ ಭರ್ಜರಿ ಗಿಫ್ಟನ್ನೂ ಖರೀದಿಸಿದ್ದಾಳೆ. ಕರೀನಾ ಸದ್ಯ 85 ಲಕ್ಷ ರೂಪಾಯಿಯ ಐಷಾರಾಮಿ ಕಾರುಗಳನ್ನು ಖರೀದಿಸಿದ್ದು, ಒಂದು ತನಗಾಗಿ, ಹಾಗೂ ಇನ್ನೊಂದನ್ನು ತನ್ನ ಅಕ್ಕನ ಹೊಸ ಮಗುವಿಗೆ ಗಿಫ್ಟ್ ನೀಡಲಿದ್ದಾಳಂತೆ. ಅಬ್ಬಬ್ಬಾ, ಚಿಕ್ಕಮ್ಮನ ಪ್ರೀತಿಯೇ! ಯಾರಿಗುಂಟು ಯಾರಿಗಿಲ್ಲ!!!
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕರೀಷ್ಮಾ ಕಪೂರ್, ಕರೀನಾ ಕಪೂರ್, ಸಮೈರಾ, ಬಾಲಿವುಡ್