ಭಾರತದ ಪ್ರತಿಯೊಂದು ಬೀದಿ ಬೀದಿಯಲ್ಲೂ ಯಾರೂ ಇಲ್ಲದ ಅನಾಥರು ಬೇಕಾದಷ್ಟು ಮಂದಿ ಸಿಗುತ್ತಾರೆ. ಈ ಬೇಕಾದಷ್ಟು ಮಂದಿ ಅನಾಥರಲ್ಲಿ ಕೆಲವು ಏನಾದರೊಂದು ಸಾಧಿಸಿ ತೋರಿಸುತ್ತಾರೆ. ಜಶ್ನ್ ಚಿತ್ರದಲ್ಲಿ ಇದೇ ಸಾಲಿಗೆ ಸೇರುತ್ತಾನೆ ಆಕಾಶ್ ವರ್ಮಾ.
ಆಕಾಶ್ ಮರ್ವಾ (ಅದ್ಯಾಯನ್ ಸುಮನ್) ಒಬ್ಬ ಅನಾಥ. ತನ್ನ ಅಕ್ಕನಿಂದ ಹಣದ ಸಹಕಾರ ಪಡೆದು ದೊಡ್ಡ ವ್ಯಕ್ತಿಯಾಗಿ ಬೆಳೆಯುವ ಕಥೆಯೇ ಆಕಾಶ್‌ನದ್ದು.
ಅಂಜನಾ ಸುಖಾನಿ (ಸಾರಾ)- ಚಿತ್ರದಲ್ಲಿ ಸಾರಾ ಡೋಂಟ್ ಕೇರ್ ವ್ಯಕ್ತಿತ್ವದ ಹುಡುಗಿ. ಆಕೆಯ ಅಂತಹ ನಡವಳಿಕೆಗೇ ಆಕಾಶ್ ಮನಸೋಲುತ್ತಾನೆ. ಆಕೆ ಆಕಾಶ್ ಜತೆಯಾಗುತ್ತಾಳೆ. ಆತನ ಕಷ್ಟಗಳಲ್ಲಿ ಗಟ್ಟಿ ನಿಲ್ಲಲು ಊರುಗೋಲಾಗುತ್ತಾಳೆ.
ಸಹನಾ ಗೋಸ್ವಾಮಿ (ನಿಶಾ)- ಕರುಣೆ ಉಕ್ಕಿಸುವ ಪಾತ್ರ ನಿಶಾಳದ್ದು. ತನ್ನ ತಮ್ಮ ಗಂಡನಿಗೆ ಶತ್ರುವಾದರೆ ಅನುಭವಿಸುವ ತಳಮಳಗಳನ್ನು ಈಕೆಯೂ ಅನುಭವಿಸುತ್ತಾಳೆ.
IFM
ಹುಮಾಯುನ್ ಸಯೀದ್ (ಅಮನ್ ಬಜಾಜ್)- ಈ ಚಿತ್ರದಲ್ಲಿ ಅಮನ್‌ದು ಡ್ಯಾಶಿಂಗ್ ನೆಗೆಟಿವ್ ಪಾತ್ರ. ನಿಶಾನ ಗಂಡನಾಗಿ ಆಕಾಶ್‌ನ ಶತ್ರುವಾಗಿ ಹೊರಹೊಮ್ಮುವ ಪಾತ್ರ ಅಮನ್.
ಆಕಾಶ್ ವರ್ಮಾ( ಅಧ್ಯಾಯನ್) ತಾನೊಬ್ಬ ಖ್ಯಾತ ಗಾಯಕನಾಗಬೇಕೆಂಬ ಗುರಿ ಹೊತ್ತ ಕನಸು ಕಂಗಳ ಹುಡುಗ. ಅದಕ್ಕಾಗಿ ಗಾಯನ ವಲಯದಲ್ಲಿ ಸಾಕಷ್ಟು ಕಷ್ಟಪಡುತ್ತಾನೆ. ಮೇಲೆ ಬರುವ ಹೋರಾಟದಲ್ಲಿ ಹೆಣಗುತ್ತಾನೆ. ತನ್ನನ್ನು ತಾನು ಗುರುತಿಸಿಕೊಳ್ಳಲು ಕಷ್ಟಪಡುತ್ತಾನೆ ಅಂತಹ ಸಂದರ್ಭ ಆತನಿಗೆ ಹೆಗಲು ಕೊಡುವುದು ಆತನ ಅಕ್ಕ ನಿಶಾ (ಸಹನಾ ಗೋಸ್ವಾಮಿ). ನಿಶಾ ಶ್ರೀಮಂತ ಉದ್ಯಮಿಯ ಅಮನ್ ಬಜಾಜ್ (ಹುಮಾಯನ್ ಸಯೀದ್) ಹೆಂಡತಿ.
ಇದನ್ನು ಆಕಾಶ್‌ನ ವಿಧಿಯ ಸಡನ್ ಟ್ವಿಸ್ಟ್ ಎಂದಾದರೂ ತಿಳಿಯಬಹುದು. ತಮಾಷೆ ಎಂದಾದರೂ ತಿಳಿಯಬಹುದು. ಅಮನ್ ಬಜಾಜ್ ಇದೇ ಆಕಾಶ್‌ನನ್ನು ಕಂಡರೇ ಆಗದಂತೆ ವಿಪರೀತ ದ್ವೇಷಿಸುತ್ತಿರುತ್ತಾನೆ. ಆದರೆ ಅಮನ್ ತಂಗಿ ಸಾರಾ ( ಅಂಜನಾ ಸುಖಾನಿ) ಆಕಾಶ್‌ನಲ್ಲಿ ಒಂದು ಅದ್ಭುತ ಪ್ರತಿಭೆಯಿದೆ. ಆದರೆ ಅದು ಜಗತ್ತಿಗೆ ಗೊತ್ತಾಗದೆ ಆತ ಹಾಗೇ ಕಳೆದುಹೊಗುತ್ತಿದ್ದಾನೆ ಎಂಬುದನ್ನು ಪತ್ತೆಹಚ್ಚುತ್ತಾಳೆ. ಇಂತಿಪ್ಪ ಸಾರಾ ಮನಸಾರೆ ಅವನನ್ನು ಪ್ರೀತಿಸುತ್ತಾಳೆ. ಜತೆಗೆ ಅವನಿಗೆ ಆಧಾರ ಸ್ತಂಭವಾಗಿ ಪ್ರೋತ್ಸಾಹ ನೀಡುತ್ತಾಳೆ. ಹೀಗೆ ಆಕಾಶ್ ರಾತ್ರೋರಾತ್ರಿ ಪ್ರಖ್ಯಾತಿ ಪಡೆಯುತ್ತಾನೆ. ಖ್ಯಾತ ಗಾಯಕನಾಗುತ್ತಾನೆ.
ಹೀಗೆ ಗಾಯನರಂಗದ ಕಥಾಹಂದರವನ್ನೊಳಗೊಂಡಿರುವ ಜಶ್ನ್ ಚಿತ್ರ ಮಹೇಶ್ ಹಾಗೂ ಮುಖೇಶ್ ಭಟ್ ಅವರ ವಿಶೇಷ್ ಫಿಲಂಸ್ ಬ್ಯಾನರ್‌ನಡಿಯಿಂದ ಹೊರಬರುತ್ತಿದೆ. ಜುಲೈ 17ರಂದು ಬಿಡುಗಡೆಗೊಳ್ಳಲಿರುವ ಈ ಚಿತ್ರವನ್ನು ರಕ್ಷಾ ಮಿಸ್ಟ್ರೀ ಹಾಗೂ ಹಸ್ನೇನ್ ಎಸ್ ಹೈದ್ರಾಬಾದ್ವಾಲಾ ನಿರ್ದೇಶನ ಮಾಡಿದ್ದಾರೆ. ಹೊಸ ಸಂಗೀತ ನಿರ್ದೇಶಕರಾದ ತೋಶಿ ಹಾಗೂ ಶರೀಬ್ ಸಂಗೀತ ನೀಡಿದ್ದಾರೆ.