ಚಿತ್ರದಲ್ಲಿ ಮುಸ್ಲಿಂ ಯುವತಿಯಾಗಿದ್ದ ವಿಧ್ಯಾಬಾಲನ್ ತನ್ನ ನೆನಪಿನ ಶಕ್ತಿಯನ್ನು ಕಳೆದುಕೊಂಡು ಹಿಂದುವಾದಿಯಾಗಿ ಮಾರ್ಪಡುತ್ತಾಳೆ. ಮಧ್ಯಮವರ್ಗದ ಸುತ್ತ ಹೆಣೆದಿರುವ ಈ ಚಿತ್ರಕಥೆಯಲ್ಲಿ ನಟ ಅನಿಲಕಪೂರ್ ನೃತ್ಯ ತಂಡದ ನಿರ್ದೆಶಕನಾಗಿ ಕಾಮದೇವತೆಯಂತಹ ಬೆಡಗಿ ಅಂಜನಾ ಸುಖಾಣಿ ಅವಳಿಗೆ ತರಬೇತಿ ನೀಡುತ್ತಿರುತ್ತಾನೆ.
ಚಿತ್ರದ ಪ್ರಮುಖ ಆಕರ್ಷಣೆ ಕೇಂದ್ರವಾದ ಗೋವಿಂದಾ ಹಾಗು ಶೆರಾನ್ ಅವರ ನೃತ್ಯ ಪ್ರೇಕ್ಷಕರ ಮನಸ್ಸಿಗೆ ಮುದ ನೀಡುತ್ತದೆ. ಇಂತಹದರಲ್ಲಿ ರಾಜಸ್ತಾನಿ ದಂಪತಿಗಳಾದ ಸೋಹೆಲ್ ಖಾನ್ ಹಾಗುಇಶಾಕೊಪ್ಪಿಕರ ಅವರ ಅಭಿನಯ ಎಲ್ಲರ ಮನಸೆಳೆಯುವಂತಿದೆ ಸುಭಾಷ ಘಾಯಿ ನಿರ್ದೆಶನದ ಶಾದಿ ಸೆ ಪಹೇಲೆ ಚಿತ್ರದಲ್ಲಿ ನಟಿಸಿದಂತೆ ಇಲ್ಲೂ ಕೂಡಾ ಅಕ್ಷಯ ಖನ್ನಾ ಹಾಗು ಆಯೇಶಾ ಟಾಕೀಯಾ ಅವರುಗಳು ಜನರ ಮನರಂಜಿಸುವಲ್ಲಿ ಯಶಸ್ವಿಯಾಗಿದ್ದಾರೆ
ನಿಕಿಲ್ ಅದವಾನಿಯವರ ಕಾರ್ಯವೈಖರಿ ಜನರನ್ನು ಹಿಡಿದಿಡುವಲ್ಲಿ ಪ್ರತಿಶತ ಫಲಿತಾಂಶ ಕಂಡಿದೆ ಚಿತ್ರದೂದ್ದಕ್ಕೂ ನಗೆಹನಿಯ ಡೈಲಾಗಗಳು ಅವರ ಪ್ರತಿಭಾ ಪೂರ್ವ ನಟನೆಯಿಂದಾಗಿ ಚಿತ್ರ ಜನರ ಮನದಲ್ಲಿ ಮಾಸದೇ ಉಳಿದಿದೆ. ಪ್ರೀಯಾಂಕಾ ಹಾಗು ಸಲಮಾನ್ ಖಾನ್ ಅವರ ಜೋಡಿ ಅದ್ಭುತವಾಗಿ ನಟಿಸಿದೆ ಎಂದರೆ ತಪ್ಪಾಗಲಿಕ್ಕಿಲ್ಲ.