ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸಿನಿಮಾ ವಿಮರ್ಶೆ » 'ಯೇ ದಿಲ್‌'ಬಾಲಿವುಡ್‌ನಲ್ಲಿ ಹೊಸ ಪ್ರೇಮಗೀತೆ
ಸಿನಿಮಾ ವಿಮರ್ಶೆ
Feedback Print Bookmark and Share
 
ಆನಂದ ಆರ್ಟ್ಸ ಕ್ರೀಯೇಶನ್ಸ್ ನಿರ್ಮಿಸಿ , ನಿರ್ಮಾಪಕ ಕಿರಣ, ನಿರ್ದೆಶಕ ತೇಜಾ ಅವರುಗಳ ಸಾರಥ್ಯದಲ್ಲಿ "ಯೇ ದಿಲ್" ಹಿಂದಿ ಚಲನಚಿತ್ರ ಅದ್ಬುತವಾಗಿ ಮೂಡಿಬಂದಿದೆ.

ಯೇ ದಿಲ್ ಚಲನಚಿತ್ರ ತೆಲಗಿನಲ್ಲಿ ಬಿಡುಗಡೆಯಾಗಿ ಎಲ್ಲ ಕೇಂದ್ರಗಳಲ್ಲಿ ಶತದಿನೋತ್ಸವ ಆಚರಿಸಿದ ಸೂಪರಹಿಟ್ ಚಲನಚಿತ್ರ "ನುವು್ ನೇನು" ಚಿತ್ರದ ರೀಮೆಕ್ ಆಗಿದೆ.ರವಿ (ತುಷಾರ್ ) ಮತ್ತು ವಸುಂಧರಾ (ನಟಾಷಾ) ಒಂದೇ ಕಾಲೇಜಿನಲ್ಲಿ ಓದುತ್ತಿರುತ್ತಾರೆ.

ರವಿ ಕೋಟ್ಯಾಧೀಶರ ಮಗನಾಗಿರುತ್ತಾನೆ, ಎಲ್ಲದರಲ್ಲಿ ಮುಂದಿದ್ದರು ಓದಿನಲ್ಲಿ ಯಾವಾಗಲು ಹಿಂದೆ ಇರುತ್ತಾನೆ.ಆದರೆ ವಸುಂಧರಾ ಸಾಮಾನ್ಯ ಮನೆತನದ ಹುಡುಗಿಯಾಗಿದ್ದು ಓದಿನಲ್ಲಿ ತುಂಬಾ ಮುಂದಿರುತ್ತಾಳೆ. ರವಿಯ ನೆರೆಯವಳಾಗಿರುತ್ತಾಳೆ.

ಎಂದಿನ ರೀತಿಯಲ್ಲಿ ಇರ್ವರಲ್ಲಿ ಪ್ರೇಮ ಮೊಳಕೆಯೊಡೆದು ಚಿಗರುತ್ತದೆ. ಆದರೆ ಎಲ್ಲ ಚಲನಚಿತ್ರಗಳಂತೆ ಈ ಚಿತ್ರದಲ್ಲಿ ಕೂಡಾ ತಂದೆ ತಾಯಿಗಳು ಇವರ ಪ್ರೇಮಕ್ಕೆ ಅಂಗೀಕಾರ ಹಾಕದೇ ವಿರೋಧ ವ್ಯಕ್ತಪಡಿಸುತ್ತಾರೆ. ಆದರೆ ದಿನಗಳೆದಂತೆ ಇರ್ವರಲ್ಲಿ ಹೆಚ್ಚುತ್ತಿರುವ ಪ್ರೀತಿಯನ್ನು ಕಂಡು ಒಪ್ಪಿಗೆ ನೀಡುತ್ತಾರೆ. ಆದರೆ ಷರತ್ತನ್ನು ಪ್ರೇಮಿಗಳಿಗೆ ಒಡ್ಡುತ್ತಾರೆ.

ಷರತ್ತಿನ ಅನ್ವಯ ಒಂದು ವರ್ಷ ಕಾಲ ಒಬ್ಬರನ್ನೋಬ್ಬರು ಅಗಲಿ ಇರಬೇಕಾಗುತ್ತದೆ. ತದ ನಂತರ ಪ್ರೇಮ ಹಸಿರಾಗಿ ಇದ್ದಲ್ಲಿ ಮದುವೆ ಮಾಡಿಕೊಳ್ಳಬಹುದು.ಎಂದು ಪ್ರೇಮಿಗಳ ತಂದೆ ತಾಯಿಗಳು ತಿಳಿಸುತ್ತಾರೆ.

ನಟ ತುಷಾರ ಅಭಿನಯ ಉತ್ತಮವಾಗಿದೆ.ನಟಿ ನಟಾಷಾ ಸಾಮಾನ್ಯ ಮನೆಯ ಹುಡುಗಿಯಾಗಿ ಸರಳ ಉಡುಗೆ ತೊಡುಗೆಯಲ್ಲಿಪ್ರೇಕ್ಷಕರನ್ನು ತನ್ನ ನಟನೆಯಿಂದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾಳೆ.ಚಿತ್ರದಲ್ಲಿ ಹಾಡುಗಳು ಉತ್ತಮವಾಗಿವೆ.