ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸಿನಿಮಾ ವಿಮರ್ಶೆ » 'ಪಾರ್ಟ್ನರ್‌' ಸಲ್ಮಾನ್‌ ಕಾಮೆಡಿ ಹೀರೋ
ಸಿನಿಮಾ ವಿಮರ್ಶೆ
Feedback Print Bookmark and Share
 
Laradatta
IFM
ಸೂಪರ್‌ ಸ್ಟಾರ್‌ಗಳು, ಹೀರೋಗಳೆಲ್ಲಾ ತಮ್ಮ ವೃತ್ತಿ ಜೀವನದ ಒಂದು ಹಂತದಲ್ಲಿ ಕಾಮೆಡಿ ಪಾತ್ರಗಳನ್ನು ನಿರ್ವಹಿಸುವುದು ಬಾಲಿವುಡ್‌ ತಾರೆ ಗೋವಿಂದನಿಂದ ಆರಂಭವಾದ ಟ್ರೆಂಡ್‌ ಆಗಿರಬಹುದು, ಇದೀಗ ಆ ಸಾಲಿಗೆ ಸಲ್ಮಾನ್‌ ಖಾನ್‌ ಸೇರಿದ್ದಾರೆ.

ಸಲ್ಮಾನ್‌, ಲಾರಾದತ್ತಾ, ಗೋವಿಂದ, ಕತ್ರೀನಾ ಕೈಫ್‌ ನಟಿಸಿದ 'ಪಾರ್ಟ್ನರ್' ಮಸಲ್ಮ್ಯಾನ್‌ ಸಲ್ಮಾನ್‌ರನ್ನು ಹೀರೋ ಗಿಂತ ಕಾಮೆಡಿ ಹೀರೋ ಆಗಿ ಪರಿವರ್ತಿಸಿದೆ. ಗೋವಿಂದ ್ಂತೂ ಜನಮನಗೆದ್ದ ಹಾಸ್ಯ ನಟ.

ಮುಂಬೈಯಲ್ಲಿ ಸಲ್ಮಾನ್‌ ಖಾನ್‌ ಓರ್ವ ಪ್ರೇಮ ಸಹಾಯಕ( ಡೇಟ್‌ ಡಾಕ್ಟರ್). ಅದೆಷ್ಟೋ ಯುವಕರಿಗೆ ತಮ್ಮ ಕನಸಿನ ಕನ್ಯೆಯ ಪ್ರೀತಿ ಗಳಿಸಿಕೊಡಲು ಈತ ( ಪ್ರೇಮ್‌)ನೆರವಾಗುತ್ತಾನೆ. ಅದು ಉಚಿತವಾಗಿಯಲ್ಲ, ಶುಲ್ಕ ಸಹಿತವಾಗಿರುತ್ತದೆ ಎನ್ನುವುದೇ ಈ ಸಿನಿಮಾದ ವಿಶೇಷ.

ಸಣ್ಣಂದಿನಲ್ಲೇ ಪ್ರೇಮ್ ಕಂಡುಕೊಂಡ ಸತ್ಯವೆಂದರೆ, ಹೆಣ್ಣಿಗೆ ತನ್ನ ಆಹಾರ, ಉಡುಗೆ, ಪುರುಷರ ಆಯ್ಕೆಯಲ್ಲೂ ಬೇಕು-ಬೇಡಗಳು ಇರುತ್ತವೆ ಎಂಬುದು. ಈ ಒಂದು ಅಂಶದಿಂದ ಆತ ಪ್ರೀತಿಸುವ ಹುಡುಗರಿಗೆ ನೆರವಾಗುತ್ತಾನೆ. ಆದರೆ ಅವರು ಮದುವೆಯಾಗಬೇಕು, ತೀಟೆತೀರಿಸಿಕೊಳ್ಳುವುದಲ್ಲ.

ತಾನೂ ಸ್ವತಃ ಹಲವು ಹುಡುಗಿಯರನ್ನು ಕೆಡವಿದ ಸಲ್ಮಾನ್‌ ಆದರೆ ಕೊನೆಗೂ ಆತನಿಗೆ ಗೆಲ್ಲಲಾರದ ಹುಡುಗಿ ಎಂದರೆ ನೈನಾ (ಲಾರಾ ದತ್ತ). ಇದಕ್ಕಾಗಿ ಸಲ್ಮಾನ್‌ ಕಂಡುಕೊಂಡ ೆಳೆಯ ಗೋವಿಂದ. ಈತ ಇನ್ನೋರ್ವ ಹುಡುಗಿಯನ್ನು ಬಯಸುತ್ತಾನೆ- ಆಕೆ ಕತ್ರೀನಾ ಕೈಫ್ ಎಂಬ ಸಿರಿವಂತ ಕನ್ಯೆ‌. ಅವರಿಬ್ಬರನ್ನೂ ಒಂದು ಮಾಡುತ್ತಾ , ಗೋವಿಂದನ ನೆರವಿನೊಂದಿಗೆ ಸಲ್ಮಾನ್‌ ತನ್ನ ಕನಸಿನ ಕನ್ಯೆಯ ಮನಗೆಲ್ಲುತ್ತಾನೆ.

ಪ್ರೇಮ ಪ್ರಕರಣಗಳಲ್ಲಿ ಸಹಜವಾಗಿರುವ ಸಮಸ್ಯೆಗಳ ಗೋಜಲುಗಳ ನಡುವೆ ಸಾಕಷ್ಟು ಹಾಸ್ಯ ಮುಹೂರ್ತಗಳಿರುವ ಪಾರ್ಟನರ್‌ ಬಾಲಿವುಡ್‌ನಲ್ಲಿ ಯಶಸ್ವಿಯಾಗಬಲ್ಲುದು.