ಯಶ್ ರಾಜ್ ಮತ್ತು ಶಾರುಖ್ ಖಾನ್ ಜೋಡಿಯ "ಚಕದೆ ಇಂಡಿಯಾ" ಕಳೆದ ವಾರ ಬೆಳ್ಳಿತೆರೆಗೆ ಅಪ್ಪಳಿಸಿದೆ. ಈ ಬಾರಿ ಹಸಿರು ಹುಲ್ಲುಗಾವಲು. ಸುಮದುರ ಹಾಡುಗಳು ಇಲ್ಲದ "ಚಕದೆ "ಯಲ್ಲಿ ಹಾಕಿ ಸ್ಟಿಕ್ ಟರ್ಫ್ ಇದೆ. ಚಿಟ್ಟೆಯ ಬಣ್ಣ ಇಲ್ಲದ ಹುಡುಗಿಯರು ಗರ್ಲ್ಸ ಇನ್ ಬ್ಲೂನಲ್ಲಿ ಕಾಣಿಸಿಕೊಂಡಿದ್ದಾರೆ.
ಡಜನ್ ಹುಡುಗಿಯರ ನಡುವೆ ಮಿಷನ್ ಟೀಮ್ ಇಂಡಿಯಾ ಜವಾಬ್ದಾರಿ ಹೋತ್ತ ಮಾಜಿ ಹಾಕಿ ತಂಡದ ನಾಯಕ ಕಬಿರ್ ಖಾನ್ (ಶಾಹರುಖ್ ಖಾನ್) ತನ್ನ ನಟನೆಗೆ ಕುತ್ತು ತಂದುಕೊಂಡಿಲ್ಲ ಬದಲಾಗಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಮತ್ತೊಂದು ಗರಿ ಕೀರಿಟಕ್ಕೇರಿದೆ.
ಶ್ಮಿತ್ ಅಮಿನ್ ನಿರ್ದೇಶನದ "ಚಕದೆ ಇಂಡಿಯಾ"ದ ಕಥೆ, ಕುಸಿದು ಪಾತಾಳ ಕಂಡ ಭಾರತೀಯ ಮಹಿಳಾ ಹಾಕಿ ಮತ್ತು ಅದರ ಉತ್ಥಾನಕ್ಕೆ ಪಣತೊಡುವ ಕೋಚ್‌ನ ಕಥೆ. ಹಾಕಿ ಆಡುವ ಗುಂಪನ್ನು ಟೀಮ್ ಇಂಡಿಯಾ ಕಲ್ಪನೆಯಲ್ಲಿ ಕಟ್ಟುವ ಕನಸು ಹೋತ್ತ ಬಂದವನಿಗೆ ದೇಶದ ವಿಭಿನ್ನ ಸಾಂಸ್ಕೃತಿಕ ಹಿನ್ನಲೆಗಳಿಂದ ಬಂದ ಆಟಗಾರ್ತಿಯರೊಂದಿಗೆ ನಿತ್ಯ ಹೆಣಗುವ ಮತ್ತು ಅವರಲ್ಲಿ ವಿನ್ನಿಂಗ್ ಹ್ಯಾಬಿಟ್ ಬೆಳೆಸುವ, ತಪ್ಪಿದಲ್ಲಿ ತಿದ್ದುವ, ಬಯ್ಯುವ ತುಸು ಹಾಸ್ಯಗಳೊಂದಿಗೆ ಕಬಿರ್ ಖಾನ್ (ಶಾಹರುಖ್) ತಂಡ ಕಟ್ಟುವ ಪ್ರಯತ್ನ ಮಾಡುತ್ತಾನೆ.
ಚಿತ್ರದ ಮೊದಲ ಅವಧಿ ಪ್ರೇಕ್ಷಕರನ್ನು ನಿಸ್ಸಂಶಯವಾಗಿ ಸೇರೆ ಹಿಡಿಯುತ್ತದೆ. ವಿರಾಮದ ನಂತರ ಕಥಾ ಹಂದರ ಮಸುಕಾದಂತೆ ಕಂಡರೂ ಪ್ರೇಕ್ಷಕರು ಎದ್ದು ಹೋಗುವಂತೆ ಮಾಡುವುದಿಲ್ಲ. ಹಾಕಿ ಪಂದ್ಯಾವಳಿ ನಡೆಯುತ್ತಿರುತ್ತದೆ ಅಂತಿಮ ಸುತ್ತಿನ ಪಂದ್ಯಕ್ಕೆ ಚಿತ್ರಕಥೆ ಬೇಗ ಬರದೇ ಕೆಲಕಾಲ ವಿಕ್ಷಕರ ಸಹನೆಯನ್ನು ಪರಿಕ್ಷಿಸುತ್ತದೆ.
ಚಿತ್ರದ ಕ್ಲೈಮಾಕ್ಸ್ ಅದ್ಬುತವಾಗಿದೆ. ಶ್ಮಿತ ಅಮಿಮ್ ಚಿತ್ರ ನಿರ್ದೇಶನಕ್ಕೆ ಅತ್ಯುತ್ತಮ ಕಥೆಯನ್ನು ಆಯ್ದುಕೊಂಡಿದ್ದಾರೆ. ಸಂಶಯವಿಲ್ಲ. ಆದರೆ ಚಿತ್ರ ಒಂದು ವರ್ಗದ ಪ್ರೇಕ್ಷಕರನ್ನು ಮಾತ್ರ ಹಿಡಿದಿಟ್ಟುಕೊಳ್ಳಬಲ್ಲದು. ಮಾಸ್ ಚಿತ್ರವಾಗದೇ ಕೇವಲ ಕ್ಲಾಸ್‌ಗೆ "ಚಕದೆ " ಸಿಮಿತಗೊಳ್ಳುತ್ತದೆ. ಚಿತ್ರದಲ್ಲಿ ಶಾರುಖ್ ಖಾನ್ ಜೊತೆಗೆ, ವಿದ್ಯಾ ಮಾಲವಡೆ, ಸಾಗರಿಕಾ ಘಾಟಗೆ, ಚಿತ್ರಾಸಿ ರಾವತ್,ಮಾಸೋಚೊನ್, ಜಿಮಿಕ್, ಆರ್ಯ ಮೆನನ್, ಮುಂತಾದ ಹೊಸ ಹುಡುಗಿಯರ ಪಡೆ ಇದೆ.