ಹೇ ಬೆಬ್ಬಿ ನೋಡಿದ ನಂತರ ಕೊಟ್ಟ ಕಾಸಿಗೆ ಅಳುತ್ತ ಮನೆ ಸೇರವುದಿಲ್ಲ. ಬದಲಾಗಿ ನಗುತ್ತ ಮನೆಗೆ ಹೊಗುತ್ತೆವೆ ಒಂದು ಬಾರಿ ನೋಡಿ ನಗಬಹುದಾದ ಚಿತ್ರ. ಕಥೆ ಒಂದು ಮಗು ಮತ್ತು ಮೂವರು ಬ್ರಹ್ಮಚಾರಿಗಳ ಸುತ್ತ ಸುತ್ತುತ್ತದೆ.
ಪಕ್ಕಾ ತ್ರಿಮೂರ್ತಿಗಳು ಬ್ರಹ್ಮಚಾರಿಗಳು ಮಜಾ ಮಾಡಲು ಸಿಡ್ನಿಗೆ ಹೋಗಿರುತ್ತಾರೆ. ಒಂದೇ ಮನೆಯಲ್ಲಿ ಮೂವರು ಒಟ್ಟಿಗೆ ಇರುತ್ತಾರೆ. ಸಿಡ್ನಿಯಲ್ಲಿ ಹುಡುಗಿಯರೊಂದಿಗೆ ಕೀಟಲೆ ಮಾಡಿಕೊಂಡು ಇರುವುದಕ್ಕೆ ಒಂದು ಚೆಂದದ ಬೆಳಗಿನ ದಿನ ಈ ಮಗು ಬಂದು ಅಡ್ಡ ಹಾಕುತ್ತದೆ. ಮದುವೆಯಾಗದೆ ತಂದೆಯ ಕಷ್ಟ ಸುಖವನ್ನು ಮೂವರು ಅನುಭವಿಸುತ್ತಾರೆ.
ಅರೌಷ್ (ಅಕ್ಷಯಕುಮಾರ್) ತನ್ಮಯ( ರಿತೇಶ್ ದೇಶಮುಖ) ಅಲಿ ( ಪರ್ಧೀನ್ ಖಾನ್) ಚಿತ್ರದಲ್ಲಿ ಭಯಂಕರ ಕಿತಾಪತಿಗಳೊಂದಿಗೆ ಮನರಂಜನೆ ನೀಡುತ್ತಾರೆ. ಆಕ್ಷನ್ ಚಿತ್ರಗಳಿಂದ ದೂರ ಸರಿದಿರುವ ಅಕ್ಷಯ ಕುಮಾರ್ ಅಧ್ಬುತವಾಗಿ ಹಾಸ್ಯ ಅಭಿನಯವನ್ನು ನೀಡಿದ್ದಾರೆ.
ಸವಾವಾಗಿ ಪರ್ಧೀನ್ ನಿಲ್ಲುವ ಪ್ರಯತ್ನ ಮಾಡಿದ್ದಾರೆ, ರಿತೇಶ್ ಸುಮಾರಾಗಿ ಇದ್ದಾರೆ. ನಾಯಕಿ ವಿದ್ಯಾ ಬಾಲನ್ ಎಲ್ಲರನ್ನೂ ಎಲ್ಲ ರೀತಿಯಲ್ಲಿ ಹಿಂದೆ ಹಾಕಿದ್ದಾಳೆ ಅಭಿನಯದಲ್ಲಿ ಅವಳ ಸರಿಸಮಾನ ಯಾರಿಗೂ ನಿಲ್ಲಲಿಕ್ಕೆ ಆಗಿಲ್ಲ.ಬೋಮನ್ ಇರಾನಿ ಚಿತ್ರದ ಮೊದಲ ಅವಧಿಯಲ್ಲಿ ಬಂದು ಹೋಗುತ್ತಾರೆ.