ಶ್ರೀರಾಮ್ ರಾಘವನ್ ನಿರ್ದೇಶನದ "ಜಾನಿ ಗದ್ದಾರ್" ರೋಮಾಂಚಕಾರಿ ಚಿತ್ರ ಎಂದು ಮಾತಿನಲ್ಲಿ ಎಲ್ಲವನ್ನು ಮುಗಿಸಿಬಿಡಬಹುದು ಕಳೆದ ವಾರ ಚಿತ್ರ ವಿಮರ್ಶೆ ವಿಭಾಗದಲ್ಲಿ ರೋಮಾಂಚಕಾರಿ ಚಿತ್ರದ ವಿಮರ್ಶೆ ಮಾಡಿಯಾಗಿತ್ತು. ಆ ಚಿತ್ರದ ವಿಮರ್ಶೆಗೂ ಈ ಚಿತ್ರದ ವಿಮರ್ಶೆಗೂ ವ್ಯತ್ಯಾಸ ಚಿತ್ರ ನೋಡಿದ ನಂತರವೇ ಗೊತ್ತಾಗುತ್ತದೆ. ಈ ವರ್ಷ ಹೆಚ್ಚು ಕಡಿಮೆ ಸಾಕಷ್ಟು ಚಿತ್ರಗಳು ಥ್ರಿಲ್ಲರ್ ಕಥೆಯನ್ನು ಆಧಾರವಾಗಿಟ್ಟುಕೊಂಡು ಬಂದಿವೆ. ರೆಡ್. ಟ್ರೇನ್,ಮನೋರಮಾ ಸಿಕ್ಸ್ ಫೀಟ್ ಅಂಡರ್, ಕೇಲ ಚಿತ್ರಗಳಂತೂ ಹಡಗು ಮುಳುಗುವ ವೇಗಕ್ಕಿಂತ ವೇಗವಾಗಿ ಡಬ್ಬಾ ಪೆಟ್ಟಿಗೆಯನ್ನು ಸೇರಿವೆ ಅದು ಬೇರೆ ಮಾತು.
"ಜಾನಿ ಗದ್ದಾರ್"ನಲ್ಲಿ ಪ್ರೇಕ್ಷಕನ ಎದುರು ಕಥಾ ಹಂದರ ನಿದಾನವಾಗಿ ಆದರೆ ಒಂದಕ್ಕೊಂದು ಹೊಂದಿಕೊಂಡಂತೆ ಬಿಚ್ಚಿಕೊಳ್ಳಲು ಪ್ರಾರಂಭಿಸುತ್ತವೆ. ಎಲ್ಲಿಂದಲೋ ಹಾರಿ ಬಂದ ಗುಂಡು ಒಂದು ಪಾತ್ರದ ಅಂತ್ಯಕ್ಕೆ ಕಾರಣವಾಗುತ್ತದೆ ಅದೇ ರೀತಿ ಕಥೆ ಕೂಡ ನಿದಾನವಾಗಿ ಅತ್ತ ಸಾಗುತ್ತದೆ. ಹೀಗಾಗಿ ಪ್ರೇಕ್ಷಕನಿಗೆ ಎಲ್ಲಿಯೂ ಕಥೆ ಹಾದಿ ತಪ್ಪುತ್ತಿದೆ ಅನ್ನಿಸುವುದಿಲ್ಲ.
ಅಂದ್ ಕಾಲತ್ತಿಲ್ ಎವರ್ ಗ್ರೀನ್ ಹೀರೊ ದೆವಾನಂದ್ ಅವರ ತಿಸ್ರಿ ಮಂಜಿಲ್ ಮತ್ತು ಜೆವೆಲ್ ಥೀಪ್ ತರಹ ನಿದಾನವಾಗಿ ಒಂದೋಂದೆ ಪದರುಗಳನ್ನು ಬಿಚ್ಚಿಕೊಳ್ಳುತ್ತ ಹೋಗುತ್ತದೆ. . ಎಕ್ ಹಸಿನಾ ಥಿ ಚಿತ್ರದಿಂದ ರಾಘವನ್ ಮೊದಲು ನಿರ್ದೇಶಿಸಿದ ಚಿತ್ರ ಆದರೂ ಕೂಡ ಅಲ್ಲಿಯೂ ಅವರು ನಾನು ಹೊಸಬನಲ್ಲ ಎನ್ನುವ ರೀತಿಯಲ್ಲಿ ಎಕ್ ಹಸಿನಾ ನಿರ್ಧೇಶಿಸಿದ್ದು ಅವರ ಪ್ರತಿಭೆಗೆ ಹಿಡಿದ ಕನ್ನಡಿ. "ಜಾನಿ ಗದ್ದಾರ್"ಕೂಡ ಅವರದೇ ನಿರ್ದೇಶನದ ಚಿತ್ರ ಥ್ರಿಲ್ಲರ್ ಚಿತ್ರ ನೋಡುವ ಸಮಯದಲ್ಲಿ ಬೆನ್ನುಹುರಿ ನೆಟ್ಟಗಾಗುತ್ತದೆ
ಚಿತ್ರದಲ್ಲಿ ಶೇಷಾದ್ರಿ (ಧರ್ಮೇಂದ್ರ) ನಾಲ್ಕು ದಿನಗಳಲ್ಲಿ ಅದೃಷ್ಟ ಬದಲಾಯಿಸಬಹುದಾಂತಹ ಆಹ್ವಾನವನ್ನು ಪಡೆಯುತ್ತಾನೆ. ಶೇಷಾದ್ರಿ ಗ್ಯಾಂಗಿನಲ್ಲಿ ಇನ್ನೂ ನಾಲ್ವರು ವ್ಯಕ್ತಿಗಳಿರುತ್ತಾರೆ ಗ್ಯಾಂಗಿನಲ್ಲಿ ಚಿಕ್ಕ ವಯಸ್ಸಿನವನು ಎಂದರೆ ವಿಕ್ರಮ್ ( ನೇಲ್ ನಿತೀನ್ ಮುಖೇಶ). ಒಂದು ದಿನ ಯಾರಿಗೂ ತಿಳಿಯದ ಹಾಗೆ ತನ್ನ ಪ್ರೇಯಸಿ ಮಿನಿ ( ರಿಮಿ ಸೇನ್)ಯೊಂದಿಗೆ ಬೇರೆ ಊರಿನಲ್ಲಿ ತನ್ನ ಹೊಸ ಜೀವನ ಪ್ರಾರಂಭಿಸುತ್ತಾನೆ. ಒಂದು ದಿನ ಅವನ ಮನದಲ್ಲಿ ಬರುವ ಎಲ್ಲ ಹಣವನ್ನು ತಾನೇ ಲಪಟಾಯಿಸಬೇಕು ಎಂದು ಯೋಚಿಸಿ, ಕಾರ್ಯಪ್ರವೃತ್ತನಾಗುತ್ತಾನೆ. ಒಟ್ಟಿನಲ್ಲಿ ಚಿತ್ರ ಐವರ ಗ್ಯಾಂಗ್ ಮತ್ತು ಒರ್ವ ಮಹಿಳೆಯ ಸುತ್ತ ತಿರುಗುತ್ತದೆ.
ಚಿತ್ರದಲ್ಲಿ ಐದು ಪ್ರಮುಖ ಪಾತ್ರ ಮತ್ತು ಸಮಯಕ್ಕೆ ತಕ್ಕಂತೆ ಕೆಲವೇ ಪಾತ್ರಗಳು ಬಂದು ಹೋಗುವುದರಿಂದ ಪ್ರೇಕ್ಷಕ ಗೊಂದಲದಲ್ಲಿ ಸಿಲುಕಿಕೊಳ್ಳುವುದಿಲ್ಲ. ತಾರಾಗಣ: ನೇಲ್ ಮುಖೇಶ್ ( ವಿಕ್ರಮ್), ಜಕೀರ್ ಹುಸ್ಸೆನ್ (ಶಾರ್ದೂಲ್), ಧರ್ಮೇಂದ್ರ (ಶೇಷಾದ್ರಿ), ರಿಮಿ ಸೇನ್ (ಮಿನಿ), ವಿನಾಯಕ ಪಾಠಕ್ ( ಪ್ರಕಾಶ್) ಅಶ್ವಿನಿ ಕಲಸೇಕರ್