ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸಿನಿಮಾ ವಿಮರ್ಶೆ » ಹೊಸ ಅಲೆ ಸೃಷ್ಟಿಸಿದ ಹೊಸಬರು: ಸಾವರಿಯಾ
ಸಿನಿಮಾ ವಿಮರ್ಶೆ
Feedback Print Bookmark and Share
 
IFM
ಬಾಲಿವುಡ್ ಖ್ಯಾತ ನಿರ್ದೆಶಕ ಸಂಜಯ್ ಲೀಲಾ ಬನ್ಸಾಲಿ ತಮ್ಮ ಅನೇಕ ಚಿತ್ರಗಳಿಂದ ಉತ್ತಮ ನಿರ್ದೆಶಕರೆಂದು ಹೆಸರುವಾಸಿಯಾದವರು.ಹಮ್ ದಿಲ್ ದೇ ಚುಕೆ ಸನಮ್, ದೇವದಾಸ್‌ನಂತಹ ಚಿತ್ರಗಳನ್ನು ನಿರ್ದೆಶಿಸಿ ಪ್ರೇಕ್ಷಕರ ಮನವನ್ನು ಸೂರೆಗೊಂಡವರು. ಇದೀಗ ಅವರ ಉತ್ತಮ ಚಿತ್ರಗಳ ಸಾಲಿಗೆ ಸಾವರಿಯಾ ಚಿತ್ರವೂ ಸೇರ್ಪಡೆಗೊಂಡಿದೆ.

ಸೋನಿ ಫಿಲ್ಮ್ಸ್ ಕೊಲಂಬಿಯಾ ಪಿಕ್ಚರ್ಸ್‌ ಸಂಸ್ಥೆ ಸಹನಿರ್ಮಾಣದ ಹೊಣೆಯನ್ನು ಹೊತ್ತುಕೊಂಡಿದ್ದು ಅಮೆರಿಕದ ಮೋಷನ್ ಪಿಕ್ಚರ್ಸ್ ಅಸೋಸಿಯೋಶನ್ ಸಾವರಿಯಾ ಚಿತ್ರವನ್ನು (ಅಲ್ಪ ನಗ್ನತೆ ) ಪಿಜಿ ರೇಟಿಂಗ್ ಪತ್ರ ನೀಡಿದೆ. ಚಿತ್ರದಲ್ಲಿ ರಿಷಿಕಪೂರ್ ಪುತ್ರ ರಣಬೀರ್ ಕಪೂರ್, ಅನಿಲ್ ಕಪೂರ್ ಪುತ್ರಿ ಸೋನಮ್ ಕಪೂರ್ ನಟಿಸಿದ್ದಾರೆ. ಝೋರಾ ಸೆಹಗಲ್, ಸಲ್ಮಾನ್ ಖಾನ್, ರಾಣಿ ಮುಖರ್ಜಿ, ಅವರುಗಳು ಸಹನಟ ನಟಿಯರಾಗಿ ಅಭಿನಯಿಸಿದ್ದಾರೆ.

ಗುಲಾಬಿ (ರಾಣಿ ಮುಖರ್ಜಿ) ಲೈಂಗಿಕ ಕಾರ್ಯಕರ್ತಳಾದ ಮಹಿಳೆಯಾಗಿದ್ದು, ಸುಂದರ, ಆಕರ್ಷಕ, ಮೃದು ಮಾತಿನ ರಣಬೀರ್ ರಾಜ್ (ರಣಬೀರ್ ಕಪೂರ್) ನೋಡಿದ ಪ್ರಥಮ ನೋಟದಲ್ಲೇ ರಾಣಿಗೆ ಪ್ರೇಮಾಂಕುರವಾಗುತ್ತದೆ. ಇದು ಚಿತ್ರಕಥೆಯ ಕೇಂದ್ರ ಬಿಂದುವಾಗುತ್ತದೆ.

ರಣಬೀರ್ ಕಪೂರ್ ಅನಾಥ. ಮೇಲಾಗಿ ತಾನು ಯಾರು? ಎಲ್ಲಿಯವನು? ಬಂಧುಬಳಗ ಯಾವುದು ಗೊತ್ತಿಲ್ಲದೇ ತನ್ನ ನೆರಹೊರೆಯವರ ಪ್ರೀತಿಯನ್ನೇ ಸರ್ವಸ್ವವೆಂದು ತಿಳಿದು ಜೀವಿಸುತ್ತಿರುವ ಸರಳ ಸಜ್ಜನಿಕೆಯ ಹೃದಯವಂತ.

ರಾಣಿಯ ಮನಸ್ಸನ್ನು ಗೆದ್ದ ರಣಬೀರ್, 37 ವರ್ಷಗಳ ಹಿಂದೆ ಮಗನನ್ನು ಕಳೆದುಕೊಂಡು ದುಖಿತಳಾಗಿದ್ದ ಲಿಲ್ಲಿ ಪಾಪ್ (ಝೋರಾ ಸೆಹಗಲ್‌)ಗೆ ಮಗನ ಪ್ರೀತಿಯನ್ನು ನೀಡಿ ಅವಳ ಮನಸ್ಸನ್ನು ಗೆಲ್ಲುತ್ತಾನೆ

ರಾಜ್ ತನ್ನ ಜೀವನವನ್ನು ಸುಗಮವಾಗಿ ಸಾಗಿಸಲು ಹೋರಾಟ ಮಾಡುತ್ತಿರುತ್ತಾನೆ. ಅವನ ಮನದಲ್ಲಿ ಸದಾ ದುಃಖ ತುಂಬಿರುತ್ತದೆ. ಒಂದು ಬಾರಿ ಮೋಹಕ ರೂಪಸಿ ಸುಂದರವಾದ ಬಾಲೆ ಸಕೀನಾ (ಸೋನಮ್ ಕಪೂರ್‌) ಳನ್ನು ನೋಡುತ್ತಾನೆ. ಅವನಿಗೆ ನಾನು ಒಂಟಿಯಲ್ಲ ನನ್ನೊಂದಿಗೆ ಸಕೀನಾ ಇದ್ದಾಳೆ ಎಂದು ಸಂತೋಷದಿಂದ ಹುಚ್ಚು ಪ್ರೀತಿಯ ಅಲೆಗಳಲ್ಲಿ ತೇಲಿಹೋಗುತ್ತಾನೆ. ಸಕೀನಾಳ ಹೆಸರನ್ನು ಪಟ್ಟಣದ ಪ್ರತಿಯೊಂದು ಗೋಡೆಗಳ ಮೇಲೆ ಬರೆಯುತ್ತಾನೆ.ನಾನು ಅವಳನ್ನು ಪ್ರೀತಿಸುತ್ತೇನೆ ಅವಳ ಹೃದಯ ನನಗಾಗಿ ಮೀಸಲಾಗಿದೆ ಎನ್ನುವ ಭಾವನೆಗಳಲ್ಲಿ ಕೊಚ್ಚಿ ಹೋಗುತ್ತಾನೆ.

ಆದರೆ ಸಕೀನಾಳ ಹೃದಯ ಗೆದ್ದ (ಇಮಾನ್) ಸಲ್ಮಾನ್‌ಗಾಗಿ ಅವಳ ಪ್ರೀತಿ ನಿರಂತರ ಕಾಯುತ್ತಿರುತ್ತದೆ. ಸಲ್ಮಾನ್ ದೂರದಲ್ಲಿರುವುದರಿಂದ ಅವನು ಬರುವವರೆಗೆ ರಾಜ್‌ನೊಂದಿಗೆ ಗೆಳತನ ಬಯಸುತ್ತಾಳೆ ಎನ್ನುವುದು ರಾಜ್‌ಗೆ ಗೊತ್ತಿರುವುದಿಲ್ಲ.

ಆದರೆ ಹಬ್ಬದ ದಿನದಂದು ಆಗಮಿಸಿದ (ಇಮಾನ್) ಸಲ್ಮಾನ್ ರಾಜ್ ಜೀವನದಲ್ಲಿ ಬಿರುಗಾಳಿ ಎಬ್ಬಿಸುತ್ತಾನೆ. ಸಕೀನಾಳಿಗೆ ತಾನು ನಿಜವಾಗಿ ಪ್ರೀತಿಸುತ್ತಿರುವುದಾಗಿ ತಿಳಿಹೇಳಲು ರಾಜ್ ಪ್ರಯತ್ನಿಸುತ್ತಾನೆ. ಆದರೆ ಸಕೀನಾ ತನ್ನನ್ನು ಪ್ರೀತಿಸುವುದಿಲ್ಲ ಎನ್ನುವ ಘೋರ ಸತ್ಯಾಂಶ ಅವನನ್ನು ಆಧೀರನನ್ನಾಗಿಸುತ್ತದೆ. ಸಕೀನಾ ರಾಜ್ ಅಥವಾ ಇಮಾನ್ ಇವರಿಬ್ಬರಲ್ಲಿ ಯಾರನ್ನು ಆಯ್ಕೆ ಮಾಡುತ್ತಾಳೆ? ರಾಜ್ ಸಂತೋಷವಾಗಿರಲು ಗುಲಾಬಿ ತನ್ನ ಗುಪ್ತ ಪ್ರೀತಿಯನ್ನು ತ್ಯಾಗ ಮಾಡುತ್ತಾಳೆಯೇ? ಮುಂದಿನ ವಿವರಗಳಿಗಾಗಿ ಥೀಯೇಟರ್‌ಗೆ ಭೇಟಿ ಕೊಡಿ.

ಸಾವರಿಯಾ ಚಿತ್ರದಲ್ಲಿ ಉತ್ತಮ ಹೊರಾಂಗಣ ಚಿತ್ರೀಕರಣ, ಅದ್ಭುತ ಕ್ಯಾಮರಾ ಕೈಚಳಕ, ಸುಂದರವಾದ ಕಥೆ , ದೃಶ್ಯಸಂವಹನ, ಕಲಾ ನಿರ್ದೆಶಕ ಒಮುಂಗ್‌ಕುಮಾರ್ ಅವರ ಕಲೆಯನ್ನು ನೋಡಿದಲ್ಲಿ ಹೊಸಲೋಕವನ್ನು ಪ್ರವೇಶಿಸಿದಂತಾಗುತ್ತದೆ.

ನಿರ್ದೇಶಕ ಸಂಜಯ ಲೀಲಾ ಬನ್ಸಾಲಿ ಅವರ ಕಾರ್ಯಕ್ಕೂ ರಾಜ್‌ಕಪೂರ್ ಕಾರ್ಯಕ್ಕೂ ಸಾಮ್ಯತೆ ಇದೆ ಎಂದು ಬಾಲಿವುಡ್ ಮೂಲಗಳು ಪ್ರಂಶಸೆ ಮಾಡುತ್ತಿವೆ.