ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸಿನಿಮಾ ವಿಮರ್ಶೆ » ಇದು ಮುಖೇಶ್ ಭಟ್ ಚಿತ್ರವಷ್ಟೆ ಮತ್ತೆನೂ ಅಲ್ಲ " ಶೋಬಿಜ್"
ಸಿನಿಮಾ ವಿಮರ್ಶೆ
Feedback Print Bookmark and Share
 
IFM
ಮುಖೇಶ್ ಭಟ್ ಆಗಲಿ ಮಹೇಶ್ ಭಟ್ ಆಗಲಿ ಹಿಂದಿ ಚಿತ್ರರಂಗದಲ್ಲಿ ಹೊಸ ವಿಚಾರಗಳಿಗೆ ಆದ್ಯತೆ ನೀಡುವ ವ್ಯಕ್ತಿಗಳಲ್ಲಿ ಪ್ರಮುಖರು. ಮಹೇಶ್ ಭಟ್ ಸಮಕಾಲಿನ ಸಮಾಜದಲ್ಲಿ ನಡೆಯುವ ಘಟನಾವಳಿಗಳನ್ನೆ ತಮ್ಮ ಚಿತ್ರಕಥೆಯಾಗಿ ಆಯ್ದುಕೊಳ್ಳುವ ಮೂಲಕ ಬಾಲಿವುಡ್‌ ಜಗತ್ತಿನಲ್ಲಿ ವಿಭಿನ್ನ ಪಥಕ್ಕೆ ಹಾದಿ ಮಾಡಿಕೊಟ್ಟರೆ, ನಿರ್ಮಾಪಕ ಮುಖೇಶ್ ಪ್ರತಿ ಬಾರಿ ತಮ್ಮ ಚಿತ್ರದಲ್ಲಿ ಹೊಸ ಮುಖಗಳ ಪರಿಚಯ ಮಾಡುತ್ತಾರೆ.

ಮುಖೇಶ್ ಬಟ್ ನಿರ್ಮಾಣದ "ಶೋಬಿಜ್" ನಿರ್ದೇಶನ ರಾಜು ಖಾನ್‍‌ ಹೆಗಲಿಗೆ ಮೊದಲ ಬಾರಿ ಏರಿದ್ದರೆ, ಪ್ರಮುಖ ಪಾತ್ರಗಳಲ್ಲಿ ತುಷಾರ್ ಜಲೋಟಾ ಮತ್ತು ಮೃಣಾಲಿನಿ ಶರ್ಮಾ ಅಭಿನಯಿಸುವ ಮೂಲಕ ಬಾಲಿವುಡ್ ಜಗತ್ತಿಗೆ ಪ್ರವೇಶಿಸಿದ್ದಾರೆ.

ದುರಾದೃಷ್ಟ ಪ್ರೇಕ್ಷಕನದೊ ಅಥವಾ ಚಿತ್ರದ್ದೊ ಗೊತ್ತಿಲ್ಲ. ಉತ್ತಮ ಚಿತ್ರಕಥೆ ಹುಟ್ಟುವ ಮುನ್ನವೇ ಸತ್ತುಹೊಗಿದೆ. ಗಟ್ಟಿತನ ಇಲ್ಲದ ಮಾಧ್ಯಮದಲ್ಲಿನ ಕೆಲ ಹುಳುಕಗಳನ್ನು ಬಯಲಿಗೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ತಮ್ಮ ಪತ್ರಿಕೆಯ ಓದುಗರ, ವೀಕ್ಷಕರ ಸಂಖ್ಯೆಯ ಹೆಚ್ಚಿಸಿಕೊಳ್ಳುವುದಕ್ಕೆ ಮಾಡುವ ಕಿತಾಪತಿಗಳಿಂದ ಆಗುವ ಪರಿಣಾಮವೇ ಚಿತ್ರದ ಕಥಾ ವಸ್ತು.

ಪ್ರವರ್ಧಮಾನಕ್ಕೆ ಬರುತ್ತಿರುವ ರೋಹಣ್ ಆರ್ಯ ( ತುಷಾರ್ ಜಲೋಟಾ) ಮೇಲೆ ಪಾಪಾರಾಜ್ಜಿಗಳ ಕಣ್ಣು ಇರುತ್ತದೆ. ನಾಲ್ವರು ಪಾಪಾರಾಜ್ಜಿಗಳು ಇವನನ್ನೇ ಗುರಿಯಾಗಿಸಿ ಗಾಸಿಫ್ ಮುಂತಾದವುಗಳನ್ನು ಟಿವಿ ಚಾನೆಲ್ಲುಗಳಿಗೆ ನೀಡಲು ಪ್ರಾರಂಭಿಸುತ್ತಾರೆ.

ಅತ್ತ ರೋಹಣ್ ತಾರಾ ಎನ್ನುವ ವೆಶ್ಯೆಯ ಶೋಧದಲ್ಲಿ ಇರುತ್ತಾನೆ. ಕೊನೆಗೂ ತಾರಾಳನ್ನು ಪತ್ತೆ ಮಾಡುವಲ್ಲಿ ರೋಹಣ್ ಯಶಸ್ವಿಯಾಗುತ್ತಾನೆ. ಅವಳನ್ನು ಕರೆದುಕೊಂಡು ನಾಯಕ ರೋಹಣ್ ಹೋಗುತ್ತಿರುವ ವಿಚಾರ ಹೇಗೊ ಪಾಪಾರಾಜ್ಜಿಗಳಿಗೆ ಗೊತ್ತಾಗುತ್ತದೆ. ಬೆನ್ನತ್ತಿದ ಪಾಪಾರಾಜ್ಜಿಗಳಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ರೋಹಣ್ ವಾಹನ ಅಫಘಾತಕ್ಕೆ ಈಡಾಗಿ ತಾರಾ ಕೋಮಾಕ್ಕೆ ಜಾರುತ್ತಾಳೆ. ಇದೇ ಸಮಸ್ಯೆ ರೋಹಣ್‌ಗೂ ತಾರಾಗೂ ಏನು ಸಂಬಂಧ?

ಮೊದಲ ಒಂದು ಗಂಟೆ ಸಿನಿಮಾ ಚೆನ್ನಾಗಿ ಪ್ರೇಕ್ಷಕರನ್ನು ಹಿಡಿದಿಡಬಹುದು. ವಿರಾಮದ ನಂತರ ಕಥೆ ಜಾಳು ಜಾಳು ಆಗಿ ಪ್ರೇಕ್ಷಕನ ಮೂಡ್ ಹಾಳು ಮಾಡುತ್ತದೆ.

ಚೊಚ್ಚಲ ನಿರ್ದೇಶನ ಮಾಡುತ್ತಿರುವ ರಾಜುಖಾನ್ ,ಕಥಾ ಪ್ರಸ್ತುತಿಯಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಕೆಲ ಸನ್ನಿವೇಶಗಳಲ್ಲಿ ಅವರು ಮೆಚ್ಚುವ ಕೆಲಸ ಮಾಡಿದ್ದಾರೆ. ಲಲೀತ್ ಪಂಡಿತ್ ಸಂಗೀತ ಚೆನ್ನಾಗಿದೆ. ಮೇರಿ ಪಲಕ್ ಕಾ ತುಹಿ ಸಿತಾರಾ, ಮತ್ತು ಮುಝ್‌ಸೆ ಮಿಲಾ ಹೈ ಹಾಡುಗಳನ್ನು ಗುಣಗುಣಿಸಬಹುದು.

ತುಷಾರ್ ಜಲೋಟಾ ಓಕೆ. ಆದರೆ ಕೋಪವನ್ನು ವ್ಯಕ್ತಪಡಿಸುವ ಸಮಯದಲ್ಲಿ ಭಾವನೆಗಳ ತೀವ್ರತೆ ಬೇಕು. ಮೃಣಾಲಿನಿ ಶರ್ಮಾ ಗಮನ ಸೆಳೆಯುತ್ತಾರೆ.