ಡಾನ್ ಮುತ್ತುಸ್ವಾಮಿ ನಿಮ್ಮನ್ನು ಕೊಲ್ಲುತ್ತಾನೆ. ಅದು ನಗಿಸಿ ನಗಿಸಿ.. ಸ್ವಾಮಿ ನಗಿಸಿ ಕೊಲ್ಲುವುದು ಬೇಡ ಎಂದು ಕೈಮುಗಿಯಬೇಕಾಗುತ್ತಾದೆ. ಡಾನ್ ಪಾತ್ರದ ಮೂಲಕ ಅಂದ ಕಾಲತ್ತಿಲ್ ಬ್ರೆಕ್ ಡಾನ್ಸ್ ಹೀರೋ ಮಿಥುನ್ ಚಕ್ರವರ್ತಿ ಬಾಲಿವುಡ್ ಜಗತ್ತಿಗೆ ರಿ ಎಂಟ್ರಿ ಮಾಡುತ್ತಿದ್ದಾರೆ.
70ರ ದಶಕದಲ್ಲಿ ಮುಂಬೈ ಭೂಗತ ಜಗತ್ತನ್ನು ಆಳಿದವರಲ್ಲಿ ಡಾನ್ ಮುತ್ತು ಸ್ವಾಮಿ (ಮಿಥುನ್ ಚಕ್ರವರ್ತಿ) ಒಬ್ಬ. ಡಾನ್ ಮುತ್ತುಸ್ವಾಮಿ ತಂದೆ ಸಾವಿನ ಶಯ್ಯೆಯಲ್ಲಿ ಮಲಗಿರುತ್ತಾನೆ. ತಂದೆಗೆ ಅಂತಿಮ ಗೌರವ ಸಲ್ಲಿಸಲು ಬಂದವನಿಗೆ ಅಪ್ಪನಿಂದ ಕಪಾಳ ಮೋಕ್ಷವಾಗುತ್ತದೆ. ನಿನ್ನಿಂದ ಮನೆತನದ ಹೆಸರು ಹಾಳಾಗಿ ಹೋಯಿತು. ನನ್ನ ಆತ್ಮ ಸ್ವರ್ಗ ಸೇರುವುದಿಲ್ಲ ಎಂದು ಅಪ್ಪನಾದವನು ಹಲುಬುತ್ತಾನೆ.
"ಅಪ್ಪಾ ಈಗ ನಾನೇನು ಮಾಡಲಿ" ಎಂದು ಮಗ ಮುತ್ತುಸ್ವಾಮಿ ಕೇಳಿದರೆ "ಏನು ಬ್ಯಾಡ ಮಗಾ, ಸತ್ಯದ ದಾರಿಯಲ್ಲಿ ನಡೆ ಅದು ನನ್ನ ಆತ್ಮ ಸ್ವರ್ಗ ಸೇರುವಂತೆ ಮಾಡುತ್ತದೆ" ಎಂದು ಹೇಳಿ ಪರಲೋಕದ ಪಯಣ ಮಾಡುತ್ತಾನೆ.
ಅಲ್ಲಿ ಅಪ್ಪನ ಪಯಣವಾಗುತ್ತಿದ್ದಂತೆಯೇ ಇಲ್ಲಿ ಪ್ರೇಕ್ಷಕರ ನಗೆಯ ಪಯಣ ಪ್ರಾರಂಭವಾಗುತ್ತದೆ. ಇದು ಮುತ್ತುಸ್ವಾಮಿ ಸಭ್ಯನಾಗುವ ಕಥೆ. ಸಾಮಾನ್ಯವಾಗಿಲ್ಲ.
ಮೊದಲು ಗೂಂಡಾಗಳು ತಮ್ಮ ಗೂಂಡಾಗಿರಿ ಬಿಟ್ಟು ಮನೆಯ ಕೆಲಸಗಳನ್ನು ಚಾಚೂ ತಪ್ಪದೆ ಮಾಡುತ್ತ ಕೊಳೆಯಬೇಕು. ಎರಡನೆಯದಾಗಿ ಭಾಷಾ ಸುಧಾರಣೆ. ಉರ್ದು/ಹಿಂದಿ ಕಲಿಯುವುದಕ್ಕೆ ಜೈ ಕಿಶನ್ (ಮೋಹಿತ್ ರೈನಾ) ಎಂಬ ಗುರುಗಳ ನೇಮಕವಾಗುತ್ತದೆ. ಡಾನ್ ಮುತ್ತುಸ್ವಾಮಿ ಇಂದ ಸರ್ ಮುತ್ತುಸ್ವಾಮಿಯಾಗಿ ಬದಲಾಗುವ ತವಕ.
ಮುಂದಿನದು ಎಲ್ಲ ಕನಪ್ಯೂಜನ್. ಟೊಟಲ್ ಕನಫ್ಯೂಜನ್. ಡಾನ್ ಪುತ್ರಿ ಸಂಜನಾ (ಹೃಷಿತಾ ಭಟ್) ಮದುವೆಗೆ ಬಂದಿರುವ ಹುಡುಗಿ. ತನ್ನ ಡಾನ್ ಮಿತ್ರ ವರ್ಧನ್ ಪುತ್ರ ಪ್ರಧಾನ್‌ಗೆ ಕೊಟ್ಟು ಮದುವೆ ಮಾಡುವುದು ಡಾನ್ ಮುತ್ತು ಸ್ವಾಮಿ ಅಲ್ಲಲ್ಲ ಸರ್ ಮುತ್ತುಸ್ವಾಮಿ ಆಸೆ. ಆದರೆ ಸಂಜನಾಳಿಗೆ ಇಷ್ಟವಿಲ್ಲ. ಇಷ್ಟವಿಲ್ಲದ ಕಾರಣ ಗರ್ಭಿಣಿಯಾಗುತ್ತಾಳೆ. ಮುತ್ತುಸ್ವಾಮಿಯ ಮ್ಯಾನೇಜರ್ ಪ್ರೀತಮ್ (ರೋಹಿತ್ ರಾಯ್) ಸಂಜನಾಳ ಮೇಲೆ ಕಣ್ಣು ಹಾಕಿರುತ್ತಾನೆ. ಪ್ರೀತಮ್ ಮಹಾ ಕಳ್ಳ. ಮುಂದೆ ಮಾವನಾಗಲಿರುವ ಮುತ್ತುಸ್ವಾಮಿಗೆ ಪಂಗನಾಮ ಹಾಕುತ್ತಿರುತ್ತಾನೆ.
ಇಲ್ಲಿಗೆ ಮತ್ತೊಂದು ಪಾತ್ರ ಎಂಟ್ರಿಯಾಗುತ್ತದೆ ಅದು ರಂಜನಾ ( ಅನುಸ್ಮೃತಿ) ಬರುತ್ತಾಳೆ ಮುತ್ತುಸ್ವಾಮಿ ಹತ್ತಿರ ಬಂದು ನಾನು ನಿಮ್ಮ ಮ್ಯಾನೇಜರ್‌ನನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳುತ್ತಾಳೆ. ಅಲ್ಲದೇ ತಾನು ನಿಮ್ಮ ಮಗಳು ಎಂದು ಪ್ರೀತಮ್ ಎದುರು ಹೇಳಿರುವುದನ್ನು ಒಪ್ಪಿಕೊಳ್ಳುತ್ತಾನೆ.
ಇದೇ ಸಮಯಕ್ಕೆ ಸರಿಯಾಗಿ ಹಿಂದಿ/ಉರ್ದು ಗುರು ಜೈಕಿಶನ್ ಮತ್ತು ಸಂಜನಾಳ ನಡುವೆ ಪ್ರೀತಿ ಮೊಳಕೆಯೊಡೆಯುತ್ತದೆ. ಕಳ್ಳ ಪ್ರೀತಮ್‌ನಿಂದ ತನ್ನ ಹಣವನ್ನು ಡಾನ್ ಮುತ್ತುಸ್ವಾಮಿ ಪಡೆಯುವಲ್ಲಿ ಯಶಸ್ವಿಯಾಗುತ್ತಾನೆಯೇ ? ಯಾರು ಯಾರನ್ನು ಮದುವೆಯಾಗುತ್ತಾರೆ ಎನ್ನುವುದೇ ಕನಫ್ಯೂಜನ್‌ನ ಗಲಾಟೆಯನ್ನು ನೋಡಿ..
ನಿರ್ದೇಶನ: ಅಶಿಮ್ ಸಮಂತಾ, ಕಲಾವಿದರು: ಹೃಷಿತಾ ಭಟ್, ಮಿಥುನ್ ಚಕ್ರವರ್ತಿ, ರೋಹಿತ್ ರಾಯ್, ಶಕ್ತಿ ಕಪೂರ್ ಮುಂತಾದವರು, ಸಂಗೀತ: ಅನು ಮಲ್ಲಿಕ್.