ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸಿನಿಮಾ ವಿಮರ್ಶೆ » ಅಂತಃ ಪ್ರಜ್ಞೆ ಕೆಣಕುವ "ಹಲ್ಲಾ ಬೋಲ್"
ಸಿನಿಮಾ ವಿಮರ್ಶೆ
Feedback Print Bookmark and Share
 
IFM
90ರ ದಶಕದಲ್ಲಿ ಹಿಂಸೆ, ದರ್ಪ, ಅಪರಾಧ ಎಂದರೆ ಜನರು ಕೆಲಕಾಲ ಹಿಂದೆ ಮುಂದೆ ನೋಡುವಂತಹ ಪರಿಸ್ಥಿತಿ ಇತ್ತು. ಇಂತಹದೇ ಸಮಸ್ಯೆಗಳನ್ನು ಇಟ್ಟುಕೊಂಡು ಬಾಲಿವುಡ್ ಚಿತ್ರ ನಿರ್ಮಿಸುತ್ತಿದ್ದುದು ಸಾಮಾನ್ಯವಾಗಿತ್ತು. ಸಿನಿಮಾ ಎನ್ನುವುದು ಸಶಕ್ತ ಮಾಧ್ಯಮ, ಸಮಾಜದ ಘಟನೆಗಳನ್ನೇ ಆಧರಿಸಿ ಸಮಾಜದ ಓರೆಕೋರೆಗಳನ್ನು ಎತ್ತಿ ತೋರಿಸುತ್ತಿತ್ತು. ನಂತರದ ಸಿನಿಮಾ ಜಗತ್ತು ಮತ್ತು ಉಳಿದ ಜಗತ್ತು ಹಿಂಸೆಯನ್ನು ಸ್ವಾಭಾವಿಕ ಎನ್ನುವಂತೆ ಒಪ್ಪಿಕೊಂಡ ಮೇಲೆ ಕಾಮಿಡಿ ಅಥವಾ ಹಾಸ್ಯ ಪ್ರಧಾನ ಚಿತ್ರಗಳು ಬರಲು ಪ್ರಾರಂಭಿಸಿದವು. ಇದು ಕೂಡ ಸಮಾಜಕ್ಕೆ ಹಿಡಿದ ಕನ್ನಡಿ. ಸಮಾಜದ ಶಾಂತಿ ಕಲಕಿದ ಸಮಯದಲ್ಲಿ ಶಾಂತಿಯನ್ನು ಹುಡುಕಿಕೊಂಡು ಹೊರಟವನಿಗೆ ಸಿನಿಮಾಗಳಲ್ಲಿನ ನಕ್ಕು ನಗಿಸುವ ಪಾತ್ರಗಳು ಇಷ್ಟವಾಗಿರಬೇಕು.

ನಿರ್ದೇಶಕ ರಾಜ್ ಕುಮಾರ್ ಸಂತೋಷಿ ಹಲ್ಲಾ ಬೋಲ್‌ನಲ್ಲಿ ಮತ್ತೊಂದು ಅಪರಾಧ ಮತ್ತು ಅಪರಾಧ ಜಗತ್ತಿನ ಕಥೆಯನ್ನು ಹೇಳುವ ಪ್ರಯತ್ನ ಮಾಡಿದ್ದಾರೆ. ಜಸ್ಸಿಕಾ ಲಾಲ್ ಕೊಲೆ ಪ್ರಕರಣದ ಹೋಲಿಕೆ ಇದೆ ಎಂದು ಸಾಕಷ್ಟು ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದವು.

ರಾಜ್ ಕುಮಾರ್ ಸಂತೋಷಿ ನಿರ್ದೇಶಿಸಿದ ಪ್ರಮುಖ ಚಿತ್ರಗಳು ಪ್ರೇಕ್ಷಕನ ಅಂತಃಪ್ರಜ್ಞೆಯನ್ನು ಜಾಗೃತಗೊಳಿಸುತ್ತವೆ. ಘಾಯಲ್, ದಾಮಿನಿ, ಘಾತಕ್ ಚಿತ್ರಗಳು ಹಿಂಸೆ ಮತ್ತು ಹಿಂಸೆಯ ಹಿಂದಿನ ಜಗತ್ತು ಅದರಿಂದ ವ್ಯಕ್ತಿಯೋರ್ವನನ್ನು ಮಾನಸಿಕವಾಗಿ ಯಾವ ರೀತಿ ಕುಗ್ಗಿಸುತ್ತದೆ ಎನ್ನುವುದನ್ನು ಸಶಕ್ತವಾಗಿ ಪ್ರೇಕ್ಷಕನ ಎದುರು ಬಿಡಿಸಿಡುವ ಪ್ರಯತ್ನ ಮಾಡುತ್ತವೆ. ದಿ ಲೆಜೆಂಡ್ ಆಫ್ ಭಗತ್ ಸಿಂಗ್ ರಾಜ್ ಕುಮಾರ್ ಸಂತೋಷಿಯ ವಿಷಯಾಸಕ್ತಿಯಿಂದ ಹೊರತಾಗಿತ್ತು. ಆದರೂ ಅದೊಂದು ಉತ್ತಮ ಚಿತ್ರ ಎಂದು ಹೇಳಲು ಅಡ್ಡಿಯಿಲ್ಲ. ಹಲ್ಲಾಬೋಲ್‌ನಲ್ಲಿ ರಾಜ್ ಕುಮಾರ್ ಸಂತೋಷಿ ಪುನಃ ತಮ್ಮ ಆಸಕ್ತಿಯ ವಿಷಯವನ್ನು ಕೈಗೆತ್ತಿಕೊಂಡಿದ್ದಾರೆ.
IFM

ಚಿತ್ರದ ಕಥೆಯು ಇಂದಿನ ಸಣ್ಣ ನಗರಗಳ ಯುವಕರು ಅವರ ಆಕಾಂಕ್ಷೆ ಮತ್ತು ಹಣದ ಹಿಂದೆ ಬಿಳುವ ಹವ್ಯಾಸವನ್ನು ಒಂದು ಕೊನದಲ್ಲಿ ವ್ಯಕ್ತಪಡಿಸಿದರೆ ಇನ್ನೊಂದು ಕೊನವು ವ್ಯಕ್ತಿಯ ವೈಯಕ್ತಿಕ ಜೀವನದಲ್ಲಿ ಭೃಷ್ಟತೆ ಎನ್ನುವುದು ಯಾವ ರೀತಿ ಕಾಲಿಡುತ್ತದೆ. ಗುರಿಯಿಂದ ವಿಮುಖನಾದ ವ್ಯಕ್ತಿ ಯಾವ ರೀತಿ ಗೊಂದಲಗಳಿಗೆ, ಸಮಸ್ಯೆಯ ಸುಳಿಯಲ್ಲಿ ಸಿಲುಕಿ ತನ್ನ ಸುಖ ಸಂತೋಷವನ್ನು ಹಾಳು ಮಾಡಿಕೊಳ್ಳುತ್ತಾನೆ ಎನ್ನುವುದನ್ನು ಸಶಕ್ತವಾಗಿ ಬಿಂಬಿಸುತ್ತದೆ.

ಅಶ್ಪಾಕ್ (ಅಜಯ್ ದೇವಗನ್) ಸಣ್ಣ ನಗರದ ಹಿನ್ನಲೆಯವ. ಸಿನಿಮಾ ನಟ ಆಗಬೇಕು ಎಂಬ ಬಯಕೆಯಲ್ಲಿ ಊರು ತೊರೆದವನಿಗೆ ಬೀದಿ ನಾಟಕದ ಗುಂಪು ಆಶ್ರಯ ನೀಡುತ್ತದೆ. ಜನರ ಜಾಗೃತಿಗೆ ಮುಂದಾಗಿರುವ ಮಾಜಿ ಡಕಾಯಿತ ಸಿದ್ದು (ಪಂಕಜ್ ಕಪೂರ್) ಅಶ್ಫಾಕ್‌‍‌ನಿಗೆ ಬೀದಿ ನಾಟಕ ತಂಡದಲ್ಲಿ ಅಭಿನಯದ ಓಂಕಾರಕ್ಕೆ ಅವಕಾಶ ನೀಡುತ್ತಾನೆ.

ಅಶ್ಫಾಕ್ ಕೊನೆಗೂ ಬಾಲಿವುಡ್ ಜಗತ್ತು ಪ್ರವೇಶಿಸುತ್ತಾನೆ. ಅದು ಸಮೀರ್ ಖಾನ್ ರೂಪದಲ್ಲಿ, ಸಮೀರ್ ಖಾನ್‌ನಿಗೆ ಕೆಲವೇ ದಿನಗಳಲ್ಲಿ ಎಂತಹ ಪಾತ್ರ ನೀಡಿದರೂ ಸಶಕ್ತ ಅಭಿನಯ ನೀಡುವುದರಲ್ಲಿ ನಿಸ್ಸೀಮನಾಗುತ್ತಾನೆ. ನಿದಾನವಾಗಿ ವಾಸ್ತವಿಕ ಜೀವನ ಕೂಡ ಅವನ ಜೀವನದಿಂದ ದೂರ ಹೋಗಿಬಿಡುತ್ತದೆ. ಸಿನಿಮಾ ಜೀವನದ ಭ್ರಮಾಲೋಕದಲ್ಲಿ ತೇಲುತ್ತಿರುವವನಿಗೆ ಪಾರ್ಟಿಯಲ್ಲಿ ನಡೆದ ಘಟನೆಯೊಂದು ಪೂರ್ಣವಾಗಿ ಆತನ ಜೀವನ ಶೈಲಿಯನ್ನು ಬದಲಿಸಿಬಿಡುತ್ತದೆ.
IFM

ಹಲ್ಲಾ ಬೋಲ್ ಚಿತ್ರ ವಿಶಿಷ್ಟವೆಂದರೆ ನಟರುಗಳಲ್ಲಿನ ಅಭಿನಯದ ಪೈಪೋಟಿ. ದೇಶ ಕಂಡ ಅದ್ಭುತ ನಟ ಅಜಯ್ ದೇವಗನ್, ಕೇವಲ ಕಣ್ಣುಗಳಲ್ಲೇ ತನ್ನ ಭಾವನೆಯನ್ನು ವ್ಯಕ್ತಪಡಿಸುವ ಸಮರ್ಥ ನಟ. ಈ ಬಾರಿ ಹಲ್ಲಾಬೋಲ್‌ ನಟನೆಗೆ ಪ್ರಶಸ್ತಿ ಪಡೆದರೂ ಅಚ್ಚರಿ ಪಡಬೇಕಿಲ್ಲ. ಡಕಾಯಿತ ಸಿದ್ದು (ಪಂಕಜ್ ಕಪೂರ್) ಪಾತ್ರ ದಾಮಿನಿ ಚಿತ್ರದ ಸನ್ನಿ ದೇವಲ್ ಪಾತ್ರವನ್ನು ನೆನಪಿಗೆ ತರುತ್ತದೆ. ದರ್ಶನ್ ಜರಿವಾಲಾ ಬದಲಿಸುವ ಮುಖದ ಮೇಲಿನ ಭಾವನೆಗಳನ್ನು, ಬಣ್ಣ ಬದಲಿಸುವ ಉಸರವಳ್ಳಿಗೆ ಹೋಲಿಸಬಹುದು. ಕೋಲೆಗೀಡಾದವಳ ತಂಗಿಯ ಪಾತ್ರದಲ್ಲಿ ಪಾತ್ರ ಮನಸ್ಸಿನಂಗಳದಲ್ಲಿ ಸ್ಥಬ್ದವಾಗಿ ನಿಲ್ಲುತ್ತದೆ.

ನಿರ್ದೇಶನ: ರಾಜ್ ಕುಮಾರ್ ಸಂತೋಷಿ, ಹಿನ್ನಲೆ ಸಂಗೀತ : ಸುಖ್ವಿಂದರ್ ಸಿಂಗ್, ಸಂಗೀತ ನಿರ್ದೇಶನ : ಸುಖ್ವಿಂದರ್ ಸಿಂಗ್, ವನರಾಜ್ ಭಾಟಿಯಾ, ಸಂಭಾಷಣೆ: ರಾಜ್ ಕುಮಾರ್ ಸಂತೋಷಿ