ಯುವಮನಸುಗಳಿಗೆ ಪಂಕಜ್ ಉಧಾಸ್ ಕೊಡುಗೆ- ಎಂಡ್‌ಲೆಸ್ ಲವ್
ಆಲ್ಬಂ ಹೆಸರು: ಎಂಡ್‌ಲೆಸ್ ಲವ್-- ಕಿತ್‌ನೀ ಯಾದ್ ಆತೀ ಹೈ
ಸಂಗೀತ ಮತ್ತು ಗಾಯನ: ಪಂಕಜ್ ಉಧಾಸ್
ಸಾಹಿತ್ಯ: ಮುಮ್ತಾಜ್ ರಾಶೀದ್
ಸಂಸ್ಥೆ: ಟಿ-ಸೀರೀಸ್
ಚಿಟ್ಟೀ ಆಯೀ ಹೈ ಮತ್ತು ಚಾಂದ್‌ನೀ ಜೈಸಾ ರಂಗ್ ಮೊದಲಾದ ಹಿಟ್‌ಗಳನ್ನು ನೀಡಿದ್ದ ವ್ಯಕ್ತಿ ಮರಳಿ ಬಂದಿದ್ದಾರೆ. ಈ ಬಾರಿ ಭರಪೂರ ರೋಮ್ಯಾಂಟಿಕ್ ಗೀತೆಗಳಿರುವ ಆಲ್ಬಂನೊಂದಿಗೆ. ಈ ಗೀತೆಗಳಿಗೆ ಪ್ರೇರಣೆಯೇ ಸಂದೇಶಗಳು ಪತ್ರಿಕೆಗಳಲ್ಲಿ ಬರುತ್ತಿದ್ದ ಮತ್ತು ಹೃದಯದ ನೋವಿನ ಕಥೆಗಳು.
ಪಂಕಜ್ ಉಧಾಸ್ ಅವರ 'ಎಂಡ್‌ಲೆಸ್ ಲವ್-- ಕಿತ್‌ನೀ ಯಾದ್ ಆತೀ ಹೈ' ಆಲ್ಬಂ ಅನ್ನು ಯುವ ಹೃದಯಗಳನ್ನು ಗುರಿಯಾಗಿರಿಸಿಕೊಂಡೇ ನಿರ್ಮಿಸಲಾಗಿದೆ.
ಈ ಆಲ್ಬಂನ ಆರಂಭದ ಹಾಡು 'ಆಂಸೂ ಜಬ್ ಪಲ್ಕೋಂ ಮೇ ಬೆಹಕರ್ ಆತೇ ಹೈಂ' ನಿಧಾನಗತಿಯ ಪ್ರೇಮಗೀತೆಯಾಗಿದ್ದು, ಇದರಲ್ಲಿ ಯುವ ಮನಸ್ಸೊಂದು ತನ್ನ ಪ್ರೇಯಸಿಗಾಗಿ ತುಡಿಯುವ ಸನ್ನಿವೇಶವಿದೆ. ಸಾರಂಗಿ, ವಯಲಿನ್ ಮತ್ತು ಕೊಳಲನ್ನು ಆಗಾಗ್ಗೆ ಬಳಸಲಾಗಿದ್ದು, ಹಾಡಿಗೆ ವಿಶೇಷ ಎಫೆಕ್ಟ್ ನೀಡಿದೆ.
ಅದ್ಭುತ ಸಾಹಿತ್ಯದೊಂದಿಗೆ ಉಧಾಸ್ ಅವರ ಕಂಠದಿಂದ ಅದು ಮೂಡಿ ಬಂದ ರೀತಿಯೂ ಸುಮಧುರವಾಗಿದೆ.
'ದುವಾವೋಂ ಕೇ ಭೀಡ್ ಮೇ' ಮತ್ತೊಂದು ನಿಧಾನಗತಿಯ ಗೀತೆಗೆ ಗಿಟಾರ್ ಸುಮಧುರ ಸಾಥ್ ನೀಡುತ್ತದೆ. ಕೊಳಲು, ಸಾರಂಗಿ, ವಯಲಿನ್ ಮತ್ತು ತಬಲಾಗಳನ್ನು ಉಧಾಸ್ ಅವರು ಅತ್ಯುತ್ತಮ ಪರಿಣಾಮದೊಂದಿಗೆ ಬಳಸಿಕೊಂಡಿದ್ದು, ನೋವಿನ ಭಾವನೆಯನ್ನು ಚಿತ್ರಿಸಲು ಪೂರಕವಾಗಿದೆ.
'ತುಮ್ ಪ್ಯಾರ್ ಕೋ ಮೇರೇ ದಾಗಾ ಮತ್ ದೇನಾ' ಎಂಬುದು ಸ್ವಲ್ಪ ವೇಗ ಹೊಂದಿದ್ದು, ಏಕತಾನತೆಯನ್ನು ಮುರಿಯುತ್ತದೆ.