ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸಿನಿಮಾ ವಿಮರ್ಶೆ » ಮಿಥ್ಯ
ಸಿನಿಮಾ ವಿಮರ್ಶೆ
Feedback Print Bookmark and Share
 
ಬಾಲಿವುಡ್‌ ಹೆಸರಾಂತ ನಿರ್ದೇಶಕ ರಜತ್ ಕಪೂರ್ ನಿರ್ದೇಶನದ ಮಿಥ್ಯ ಚಿತ್ರ ಪ್ರೇಕ್ಷಕರಿಗೆ ಹೊಸತನ್ನು ನೀಡುವಲ್ಲಿ ಯಶಸ್ವಿಯಾಗಿದೆ.

ಬಾಲಿವುಡ್‌ನಲ್ಲಿ ನಟಿಸಬೇಕೆನ್ನುವ ಕನಸುಗಳನ್ನು ಹೊತ್ತು ಸಾವಿರಾರು ಜನರು ಮುಂಬೈಗೆ ಬರುವಂತೆ ವಿಕೆ (ರಣವೀರ್ ಶೌರಿ ) ಕೂಡಾ ಮುಂಬೈಗೆ ಬರುತ್ತಾನೆ. ಆದರೆ ಅಕಸ್ಮಿಕವಾಗಿ ಭೂಗತ ಲೋಕದ ಕಪಿಮುಷ್ಟಿಗೆ ಸಿಲುಕಿ ತನಗೆ ಅರಿವಿಲ್ಲದಂತೆ ಬಹುದೂರ ಸಾಗುತ್ತಾನೆ.ಆದರೆ ಅಪಘಾತದ ಪ್ರಕರಣ ಹೊಸತೊಂದು ತಿರುವನ್ನು ನೀಡುತ್ತದೆ.

ಭೂಗತ ಲೋಕದಿಂದ ಹೊರಬರುವ ದಾರಿ ಕಾಣದೆ ಭೂಗತ ಅಪರಾಧಗಳ ಹಿಡಿತದಲ್ಲಿ ತನಗರಿವಿಲ್ಲದೇ ಮುಂದುವರೆದಂತೆ ತನ್ನನ್ನು ತಾನೇ ಮರೆತುಹೋಗುವಂತಹ ಘಟನೆಗಳಿಂದ ಜರ್ಜಿರಿತವಾಗುತ್ತಾನೆ.

ಮಿಥ್ಯ ಚಿತ್ರದ ಚಿತ್ರಕಥೆಯ ನಿರೂಪಣೆ ನಿರ್ದೇಶಕ ರಜತ್ ಕಪೂರ್ ತುಂಬಾ ಸೊಗಸಾಗಿ ಚಿತ್ರದಲ್ಲಿ ಮೂಡಿಸಿರುವುದು ಅವರ ಪ್ರತಿಭೆಗೆ ಸಾಕ್ಷಿಯಾಗಿದೆ. ಇದು ಎಲ್ಲ ನಿರ್ದೇಶಕರಿಗೆ ಸಾಧ್ಯವಾಗುವುದಿಲ್ಲ.

ಚಿತ್ರವನ್ನು ನೋಡುತ್ತಾ ಹೋದಂತೆ ನಿಮ್ಮನ್ನು ಕ್ಷಣ ಮರೆತು ನೀವು ಕೂಡಾ ಅದರಲ್ಲಿ ಒಂದು ಭಾಗವಾಗಿ ನಿಮ್ಮ ಕಣ್ಣೆದುರಲ್ಲಿ ಈ ಘಟನೆ ನಡೆಯುತ್ತಿದೆ ಎನ್ನಿಸುವಷ್ಟರ ಮಟ್ಟಿಗೆ ಚಿತ್ರ ನಿರೂಪಣೆ ಸೊಗಸಾಗಿದೆ.

ಚಿತ್ರದ ಕೇಂದ್ರ ಬಿಂದುವಾದ ನಾಯಕ ರಣವೀರ್ ಶೌರಿ ತಮ್ಮ ಅದ್ಭುತ ಅಭಿನಯದಿಂದ ಪಾತ್ರಕ್ಕೆ ನ್ಯಾಯ ಒದಗಿಸಿಕೊಟ್ಟದ್ದಾರೆ. ನಾಸಿರುದ್ದಿನ್ ಶಾಹ್ ಬಗ್ಗೆ ಹೇಳುವಂತೆಯೇ ಇಲ್ಲ ಎಕೆಂದರೆ ಅವರೊಬ್ಬ ಪರಿಪೂರ್ಣ ನಟ. ಎಂತಹ ಪಾತ್ರಗಳಾದರೂ ಲೀಲಾಜಾಲವಾಗಿ ಅಭಿನಯಿಸುವ ಸಿದ್ದಿಯನ್ನು ಪಡೆದವರು. ನೆಹಾ ಧೂಪಿಯಾ ತಮ್ಮಲ್ಲಿರುವ ಕಲಾವಿದೆಯನ್ನು ಪರಿಪೂರ್ಣವಾಗಿ ಹೊರಹಾಕಿ ಕೇವಲ ಗ್ಲಾಮರ್‌ಗೆ ಮಾತ್ರ ಸೀಮಿತವಾಗದೇ ಅತ್ಯುತಮ ನಟಿ ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ಹರ್ಷಾ ಛಾಯಾ ಮತ್ತು ವಿನಯ್ ಪಾಠಕ್, ಬ್ರಿಜೇಂದ್ರ್ ಕಲಾ ತಮ್ಮ ಅಭಿನಯದಿಂದ ಮನಸೂರೆಗೊಂಡಿದ್ದಾರೆ.