ನಿರ್ಮಾಪಕ: ಯಶ್ ಚೋಪ್ರಾ, ಆದಿತ್ಯ ಚೋಪ್ರಾ. ನಿರ್ದೇಶನ, ಕತೆ, ಚಿತ್ರಕತೆ, ಸಂಭಾಷಣೆ: ಆದಿತ್ಯ ಚೋಪ್ರಾ. ಸಾಹಿತ್ಯ: ಜಯ್‌ದೀಪ್ ಸಹಾನಿ ಸಂಗೀತಕಾರ: ಸಲೀಮ್ ಮರ್ಚೆಂಟ್-ಸುಲೇಮಾನ್ ಮರ್ಚೆಂಟ್. ಕಲಾವಿದರು: ಶಾರುಖ್ ಖಾನ್, ಅನೌಷ್ಕ ಶರ್ಮ, ವಿನಯ್ ಪಾಠಕ್, ವಿಶೇಷ ಭೂಮಿಕೆಯಲ್ಲಿ- ಕಾಜೋಲ್, ರಾಣಿ ಮುಖರ್ಜಿ, ಪ್ರೀತಿ ಜಿಂಟಾ, ಲಾರ ದತ್ತಾ ಮತ್ತು ಬಿಪಾಶ ಬಸು.
ರೊಮ್ಯಾಂಟಿಕ್ ಚಿತ್ರ ತಯಾರಿಸುವುದರಲ್ಲಿ ಯಶ್‌ರಾಜ್ ಫಿಲಂಸ್ ಮಹಾರಥಿಯೆನಿಸಿದ್ದಾರೆ. ಯಶ್ ಚೋಪ್ರಾ ಬಹಳಷ್ಟು ರೊಮ್ಯಾಂಟಿಕ್ ಚಿತ್ರಗಳನ್ನು ನೀಡಿದ್ದಾರೆ ಮತ್ತು ಈ ಬಾರಿ ಆದಿತ್ಯ ಚೋಪ್ರಾ ಸಹ ಮುಳುಗುತ್ತಿರುವ ಯಶ್ ರಾಜ್ ಫಿಲಂಸ್ ಅನ್ನು ಮೇಲತ್ತಲು ತಮ್ಮ ಎವರ್ ಗ್ರೀನ್ ಫಾರ್ಮುಲಾಗೆ ಮರಳಿದ್ದಾರೆ.
ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗುತ್ತವೆ ಎಂದು ಹೇಳಲಾಗುತ್ತದೆ ಮತ್ತು ನಿಜವಾಗಿ ಪ್ರೀತಿಸಿದವರಲ್ಲಿ ದೇವರೇ ಕಾಣಿಸುತ್ತಾನೆ ಎನ್ನಲಾಗುತ್ತದೆ. ಈ ರೀತಿಯ ನಿಜವಾದ ಪ್ರೀತಿಯಲ್ಲಿ ಯಾವುದೇ ಸ್ವಾರ್ಥ ಇರುವುದಿಲ್ಲ ಬದಲಾಗಿ ಇನ್ನೊಬ್ಬರ ಖುಷಿಯನ್ನೇ ಯಾವಾಗಲೂ ಪ್ರೇಮಿಗಳು ಬಯಸುತ್ತಾರೆ. ಇವೇ ಹಳೆಯ ವಿಷಯಗಳನ್ನು ಆಧಾರವಾಗಿರಿಸಿ ಆದಿತ್ಯ ಹೊಸ ರೀತಿಯಲ್ಲಿ ಚಿತ್ರವನ್ನು ಪ್ರಸ್ತುತ ಪಡಿಸಿದ್ದಾರೆ.
ಯಶ್ ರಾಜ್ ಹಳೆಯ ಚಿತ್ರಕ್ಕೂ ರಬ್ನೆ ಬನಾ ದಿ ಜೋಡಿಗೂ ಹಲವಾರು ವತ್ಯಾಸಗಳಿವೆ. ಈ ಬಾರಿ ಸ್ವಿರ್ಜರ್ಲ್ಯಾಂಡ್‌ನಲ್ಲಿ ಚಿತ್ರೀಕರಣ ಮಾಡಲಾಗಿಲ್ಲ ಬದಲಾಗಿ ಭಾರತದ ಒಂದು ನಗರದಲ್ಲಿಯೇ ಕಥೆ ಸಾಗುತ್ತದೆ. ಈ ಬಾರಿ ಚಿತ್ರದಲ್ಲಿನ ಪಾತ್ರಧಾರಿಗಳು ದುಬಾರಿ ಬೆಲೆಯ ಉಡುಪು ಧರಿಸುವುದಿಲ್ಲ ಬದಲಾಗಿ ಸಾಮಾನ್ಯರಂತಹ ಉಡುಪುಗಳಲ್ಲೇ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಈ ಬಾರಿ ಸೌಂದರ್ಯ ಮುಖ ಅಥವಾ ದೇಹದಲ್ಲಿಲ್ಲ ಬದಲಾಗಿ ಹೃದಯದಲ್ಲಿದೆ ಎಂಬುದನ್ನು ತೋರಿಸಲಾಗಿದೆ.
IFM
ಈ ಕಥೆ ಸುರಿಂದರ್ ಸಹಾನಿಯದ್ದು (ಶಾರುಖ್ ಖಾನ್). ಪಂಜಾಬ್ ಪವರ್‌ನಲ್ಲಿ ಸುರಿಂದರ್ ಉದ್ಯೋಗಿ, ಒಳ್ಳೆಯ ವ್ಯಕ್ತಿ ಆದರೆ ಆಧುನಿಕ ಭಾಷೆಯಲ್ಲಿ ಹೇಳುವುದಾದರೆ 'ಸ್ಮಾರ್ಟ್' ಅಲ್ಲ. ದೊಡ್ಡ ಕನ್ನಡಕ ಹಾಕಿಕೊಳ್ಳುವ ಸುರಿಂದರ್‌ಗೆ ಫ್ಯಾಶನ್ ಎಂದರೇನೆಂದೇ ತಿಳಿಯದು. ಸುರಿಂದರ್ ತನ್ನ ಪ್ರೋಫೆಸರ್‌ರ ಮಗಳ ಮದುವೆಗೆ ಹೋಗುತ್ತಾನೆ ಆದರೆ ದಾರಿಯಲ್ಲಿ ಅಪಘಾತಕ್ಕೀಡಾಗಿ ವಧು ತಾನಿ ಪ್ರೇಮಿಸುತ್ತಿದ್ದ ವರ ಮತ್ತು ಆತನ ಮನೆಯವರೆಲ್ಲರೂ ಸಾವಿಗೀಡಾಗುತ್ತಾರೆ.
ತನ್ನ ತಂದೆಯ ಮಾತಿನಂತೆ ತಾನಿ ಸುರಿಂದರ್‌ನನ್ನು ಮದುವೆಯಾಗುತ್ತಾಳೆ. ತಾನಿಯಾದು ಸುರಿಂದರ್‌ಗಿಂತ ವಿರುದ್ಧ ವ್ಯಕ್ತಿತ್ವ. ತಾನಿ ಸುರಿಂದರ್‌ಗೆ ಋಣಿಯಾಗಿರುತ್ತಾಳೆ ಆದರೆ ಆತನನ್ನು ಪ್ರೀತಿಸುವುದಿಲ್ಲ. ತಾನಿ ಡಾನ್ಸ್ ಕಲಿಯಲು ಹೋಗುತ್ತಾಳೆ ಮತ್ತು ಸುರಿಂದರ್ ಸಹ ಹೊಸ ಲುಕ್‌ನೊಂದಿಗೆ ತಾನಿಯ ಮನಸ್ಸು ಗೆಲ್ಲಲು ರಾಜ ಎಂಬ ಹೊಸ ಹೆಸರಿನೊಂದಿಗೆ ಅಲ್ಲಿ ತಲುಪುತ್ತಾನೆ.