ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸಿನಿಮಾ ವಿಮರ್ಶೆ » ಮಾಸ್ ಪ್ರೇಕ್ಷಕರಿಗೊಂದು ಮಸಾಲೆ ಚಿತ್ರ 'ಜೈವೀರು'
ಸಿನಿಮಾ ವಿಮರ್ಶೆ
Feedback Print Bookmark and Share
 
IFM
ಆರು ಹಾಡುಗಳು, ಕೆಲವು ಆಕ್ಷನ್ ಸೀನ್‌ಗಳು, ಕೆಲವು ಸೆಂಟಿಮೆಂಟಲ್ ಸೀನ್‌ಗಳೊಂದಿಗೆ ಒಂದೆರಡು ಚೇಸಿಂಗ್ ಸೀನ್ ಇದ್ದರೆ ಸಾಕು, ಒಂದು ಸಿನಿಮಾ ರೆಡಿ. ಹೀಗಿರುವ ಸಿನಿಮಾ ಚೌಕಟ್ಟಿನಲ್ಲಿ ಪಕ್ಕಾ ಆಗಿ ಕೂರುವ ಸಿನಿಮಾಕ್ಕೆ ಮೊತ್ತೊಂದು ಹೆಸರೇ `ಜೈ ವೀರು' ಅಂತ ಹೇಳಬಹುದೇನೋ. ಮಾಸ್ ಜನರನ್ನು ಆಕರ್ಷಿಸಲು ಹೇಳಿ ಮಾಡಿಸಿದಂತಿದೆ 'ಜೈ ವೀರು'. ಚಿಂತಿಸುವ ಕ್ಲಾಸ್ ಪ್ರೇಕ್ಷಕರನ್ನು ಇದು ಸೆಳೆಯದಿದ್ದರೂ, ಪೈಸಾ ವಸೂಲ್‌ಗೆ ಏನೂ ಅಡ್ಡಿ ಇಲ್ಲ ಬಿಡಿ.

1996ರ ಹಾಲಿವುಡ್ ಸಿನಿಮಾ 'ಬುಲೆಟ್‌ಪ್ರೂಫ್' ಚಿತ್ರದಂತೆ ಬಹುತೇಕ ಹೋಲುವ 'ಜೈ ವೀರು' ನಿರ್ದೇಶಕ ಪುನೀತ್ ಸಿರಾ ಅವರ ಎರಡನೇ ಚಿತ್ರ. ಅವರು ಈ ಬಾರಿ ಮಾಸ್ ಪ್ರೇಕ್ಷಕರನ್ನೇ ಗುರಿಯಾಗಿಟ್ಟು ಚಿತ್ರ ಮಾಡಿದಂತಿದೆ.

ವೀರು (ಕುನಾಲ್ ಖೇಮು) ಒಬ್ಬ ಸಣ್ಣ ಖದೀಮ. ಕಾರುಗಳನ್ನು ಕದ್ದು ಮಾರುವುದು ಇವನ ಕೆಲಸ. ಒಂದು ದಿನ ಆಕಸ್ಮಿಕವಾಗಿ ವೀರುವಿಗೆ ಜೈ (ಫರ್ದೀನ್ ಖಾನ್) ಪರಿಚಯವಾಗುತ್ತದೆ. ಜೈ ಒಬ್ಬ ಮೆಕಾನಿಕ್. ಕಾರು ಕಳ್ಳತನ ಮಾಡಲು ಬೇಕಾದ ಟ್ರಿಕ್ಕುಗಳು ಜೈಗೂ ಕರಗತ. ಹೀಗಾಗಿ ಅವರಿಬ್ಬರು ಗಳೆಯರಾಗುತ್ತಾರೆ. ಜತೆಗೆ ಕ್ರೈಂನಲ್ಲಿ ಇಬ್ಬರೂ ಭಾಗಿಗಳಾಗುತ್ತಾರೆ.

ಆದರೆ ಒಮ್ಮೆ ಈ ಇಬ್ಬರೂ ಗ್ಯಾಂಗ್‌ಸ್ಟರ್ ತೇಜ್‌ಪಾಲ್ (ಅರ್ಬಾಝ್ ಖಾನ್) ಕಣ್ಣಿಗೆ ಗುರಿಯಾಗುತ್ತಾರೆ. ಜೈ ಹಾಗೂ ವೀರು ಇಬ್ಬರನ್ನೂ ಕೊಲ್ಲುವುದು ತೇಜ್ ಉದ್ದೇಶ. ಅವನಿಂದ ರಕ್ಷಿಸಿಕೊಳ್ಳಲು ಜೈ-ವೀರು ಹೆಣಗಾಡುತ್ತಾರೆ. ಅವರು ಬಚಾವಾಗುತ್ತಾರಾ ಅನ್ನೋದನ್ನು ಚಿತ್ರದಲ್ಲೇ ನೋಡಬೇಕು.

IFM
ಎರಡು ಗಂಟೆಗಳ ಕಾಲದ ಈ ಮನರಂಜನೆಯಲ್ಲಿ ಅತ್ಯುತ್ತಮ, ಕೆಟ್ಟ ಹಾಗೂ ಸಾಮಾನ್ಯ ಈ ಮೂರೂ ಪದವಿಗಳನ್ನು ಈ ಚಿತ್ರದಲ್ಲಿ ನೀಡಬಹುದಾದ ಅಗತ್ಯ ಕಾಣುತ್ತದೆ. ಯಾಕೆಂದರೆ, ಹಾಲಿವುಡ್ ಚಿತ್ರ ಬುಲೆಟ್‌ಪ್ರೂಫ್‌ನಲ್ಲಿಲ್ಲದ ಆಕರ್ಛಕ ಟ್ವಿಸ್ಟ್‌ಗಳು ಈ ಚಿತ್ರದಲ್ಲಿ ಕಾಣಸಿಕ್ಕುತ್ತದೆ. ಆದರೆ, ಕೆಲವೆಡೆ ಚಿತ್ರ ಹಿಡಿತ ತಪ್ಪಿದಂತೆ ಕಾಣುವಾಗ ಚಿತ್ರ ಸಾಮಾನ್ಯ ಎಂದೆನಿಸುತ್ತದೆ. ಚಿತ್ರಕಥೆಯ ಮಟ್ಟಿಗೆ ಹೇಳವುದಾದರೆ ಇದು ತೀರಾ ಕೆಟ್ಟದಾಗಿದೆ ಎಂದು ಸರ್ಟಿಫಿಕೆಟ್ ಕೊಡಲೂ ಅಡ್ಡಿಯಿಲ್ಲ. ಯಾಕೆಂದರೆ, ಕೆಲವೊಮ್ಮೆ ಕಥೆ ಒಂದರಿಂದ ಮತ್ತೊಂದಕ್ಕೆ ನೆಗೆಯುತ್ತಾ ಸಾಗುತ್ತದೆ. ಮುಖ್ಯಕಥೆಯಿಂದ ಇದು ಅಲ್ಲಲ್ಲಿ ಹಿಡಿತ ತಪ್ಪಿದಂತೆ ಅನಿಸುತ್ತದೆ.

ಪುನೀತ್ ಸಿರಾ ನಿರ್ದೇಶನ ಒಕೆ. ಬಪ್ಪಾ ಲಹರಿಯ ಸಂಗೀತ ಇಂಪಾಗಿದೆ. ಕೆ.ರಾಜ್‌ಕುಮಾರ್ ಸಿನಿಮಾಟೋಗ್ರಫಿ ಚೆನ್ನಾಗಿದೆ. ಆಕ್ಷನ್ ದೃಶ್ಯಗಳು ಸೊಗಸಾಗಿ ಮೂಡಿ ಬಂದಿದೆ. ಯಾಕೋ ಫರ್ದೀನ್ ಖಾನ್ ಮಾತ್ರ ಈ ಬಾರಿ ನಟನೆಯಲ್ಲಿ ಸ್ವಲ್ಪ ಹಿಂದೆ ಬಿದ್ದಂತೆ ಕಾಣುತ್ತದೆ. ಕುನಾಲ್ ಖೇಮು ಸಾಕಷ್ಟು ಪಳಗಿದ್ದಾರೆ. ದಿಯಾ ಮಿರ್ಜಾ ಹಾಗೂ ಅಂಜನಾ ಸುಖಾನಿ ಅರಿಗೆ ಚಿತ್ರದಲ್ಲಿ ಹೆಚ್ಚು ಅವಕಾಶವಿಲ್ಲದಿದ್ದರೂ, ದಿಯಾಳ ಪಾತ್ರಕ್ಕೆ ಕ್ಲೈಮ್ಯಾಕ್ಸ್‌ನಲ್ಲಿ ಒಂದು ಆಕರ್ಷಕ ಟ್ವಿಸ್ಟ್ ಸಿಗುತ್ತದೆ. ಅರ್ಬಾಝ್ ಖಾನ್ ಪಾತ್ರಕ್ಕೆ ತಕ್ಕ ತೂಕ ನೀಡಿದ್ದಾರೆ.

ಒಟ್ಟಿನಲ್ಲಿ ಸಾಮಾನ್ಯರು, ಮನರಂಜನೆಗೆ ಮಾತ್ರ ಸಿನಿಮಾ ಎಂದು ಚಿಂತಿಸುವವರು ಹಾಗೂ ಟೈಂ ಪಾಸ್ ಮಾಡಲಿಚ್ಚಿಸುವವರಿಗೆ 'ಜೈ ವೀರು' ನಿರಾಶೆ ಮಾಡುವುದಿಲ್ಲ. ಆದರೆ, ಕ್ಲಾಸ್ ಪ್ರೇಕ್ಷಕರು ಇದನ್ನು ನೋಡದಿರುವುದೇ ಉತ್ತಮ.
IFM
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಜೈವೀರು, ಕುನಾಲ್ ಖೇಮು, ಅರ್ಬಾಝ್ ಖಾನ್, ಫರ್ದೀನ್ ಖಾನ್, ದಿಯಾ ಮಿರ್ಜಾ