ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸಿನಿಮಾ ವಿಮರ್ಶೆ » 'ಅನುಭವ್' ನೋಡುವುದೇ ಒಂದು ಅನುಭವ! (Sanjay Suri | Gul Panag | Anubhav | Bollywood Review)
ಸಿನಿಮಾ ವಿಮರ್ಶೆ
Feedback Print Bookmark and Share
 
IFM
ಚಿತ್ರ: ಅನುಭವ್
ತಾರಾಗಣ: ಸಂಜಯ್ ಸೂರಿ, ಗುಲ್ ಪನಾಗ್, ಜಾಕಿಶ್ರಾಫ್, ಮೀಟಾ ವಸಿಷ್ಟ, ಶ್ರುತಿ ಸೇಥ್, ರಾಜ್ ಜುಟ್ಶಿ, ಸುಧಾಚಂದ್ರನ್, ಅನೂಪ್ ಮೆನನ್.
ನಿರ್ದೇಶನ: ರಾಜೀವ್ ನಾಥ್

ಅನುಭವ್ (ಸಂಜಯ್ ಸೂರಿ), ಅಂತರಾ (ಶ್ರುತಿ ಸೇಥ್) ಹಾಗೂ ಆದಿ (ಅನೂಪ್ ಮೆನನ್) ಮೂವರೂ ಬಾಂಬೆ ಥಿಯೇಟರ್ ಅಕಾಡೆಮಿಯಲ್ಲಿ ಬಾಲಿವುಡ್ ಕನಸುಗಳನ್ನು ನೇಯುತ್ತಿರುವವರು. ಆದರೆ, ನಿಜಜೀವನದಲ್ಲಿ ಕನಸು ಕಂಡಷ್ಟು ಸುಲಭವಾಗಿ ಬಾಲಿವುಡ್ಡಿಗೆ ಎಂಟ್ರಿ ಸಿಗಲು ಸಾಧ್ಯವಿಲ್ಲ ಎಂಬುದು ಈ ಮೂವರಿಗೆ ಕ್ರಮೇಣ ಅರಿವಾಗುತ್ತಾ ಬರುತ್ತದೆ. ಅದೇ ಸಂದರ್ಭ ಅನುಭವ್‌ ನನ್ನ ಅಭಿಮಾನಿ ಎಂದು ಹೇಳುತ್ತಾ ಮೀರಾ ( ಗುಲ್ ಪನಾಗ್) ಅನುಭವ್‌ನ ಜೀವನದಲ್ಲಿ ಪ್ರವೇಶ ಪಡೆಯುತ್ತಾಳೆ.

ಇಬ್ಬರೂ ಪ್ರೇಮದಲ್ಲಿ ಬೀಳುತ್ತಾರೆ. ಹಾಗೂ ಇಬ್ಬರನ್ನು ಮದುವೆ ಮಾಡಿಸಿ ಕೈತೊಳೆಯುವುದುವುದು ಮೀರಾಳ ಶ್ರೀಮಂತ ಅಪ್ಪ ಅಮ್ಮನ ಅಭಿಲಾಷೆ. ಅದೇ ಸಂದರ್ಭಕ್ಕೆ ಥಿಯೇಟರ್‌ನಲ್ಲಿ ಪಳಗಿದ ಇಬ್ರಾಹಿಂ ವಕೀಲ್ (ಜಾಕಿಶ್ರಾಫ್) ಈ ಮೂವರ (ಅನುಭವ್, ಅಂತರಾ, ಆದಿ) ಗುರುವಗಿ ಎಂಟ್ರಿ ಪಡೆಯುತ್ತಾರೆ. ಅದೇ ಸಮಯಕ್ಕೆ ಸರಿಯಾಗಿ ಆದಿ ಶೇಕ್ಸ್‌ಪಿಯರ್‌ನ ಹ್ಯಾಮ್ಲೆಟ್ ನಾಟಕದ ಕಥಾಹಂದರವಿರುವ ಚಿತ್ರದಲ್ಲಿ ನಟಿಸಲು ಉತ್ತಮ ನಿರ್ಮಾಪಕರಿಂದ ಅವಕಾಶ ಪಡೆಯುತ್ತಾನೆ.

ಮುಖ್ಯಪಾತ್ರದಲ್ಲಿರುವ ಅನುಭವ್ ಚಿತ್ರದ ಮಧ್ಯಂತರದ ವೇಳೆಗೆ ಮೀರಾಳು ಗರ್ಭಿಣಿ ಎಂದು ಗೊತ್ತಾಗುವ ವೇಳೆಗೆ ವಿಚಿತ್ರ ಸಂದಿಗ್ಧದಲ್ಲಿ ಸಿಕ್ಕಿಹಾಕಿಕೊಳ್ಳುತ್ತಾನೆ. ಅದು ಅನುಭವ್‌ನ ಭವಿಷ್ಯವನ್ನೇ ಬುಡಮೇಲು ಮಾಡುತ್ತದೆ.

IFM
ಒಂದು ವಿಚಿತ್ರ ಸಂದರ್ಭದಲ್ಲಿ ಅನುಭವ್ ತನ್ನ ದೇಹವನ್ನೇ ಮಹಿಳೆಯರ ಕಾಮದಾಸೆಗೆ ಮಾರಿಕೊಳ್ಳಲು ಆರಂಭಿಸುತ್ತಾನೆ. ಅರ್ಥಾತ್ ಪುರುಷ ವೇಶ್ಯವೃತ್ತಿ ಆತನದಾಗುತ್ತದೆ. ಆದರೆ, ಆತನ ಗಿರಾಕಿಗಳು ಆತನೆಡೆಗೆ ಬಂದರೆ ಆತ ತನ್ನ ಸಿನಿಮಾದ ಪಾತ್ರಗಳೆಂಬಂತೆ ಅವರನ್ನು ನೋಡತೊಡಗುತ್ತಾನೆ. ಒಂದು ಹಂತದಲ್ಲಿ ತಾನೊಬ್ಬ ಸಾಮಾನ್ಯ ಮನುಷ್ಯನೋ, ಅಥವಾ ನಟನೋ, ಅಥವಾ ಲೈಂಗಿಕ ಕಾರ್ಯಕರ್ತನೋ ಎಂಬ ಸಂದಿಗ್ಧತೆ ಅವನನ್ನು ಕಾಡುತ್ತದೆ.

ಚಿತ್ರದ ಕಥಾಹಂದರ ನಿಜಕ್ಕೂ ಕುತೂಹಲಕಾರಿಯಾಗಿದೆ. ಚಿತ್ರದಲ್ಲಿ ಬರುವ ಸನ್ನಿವೇಶಗಳು ಈಗ ಬಾಲಿವುಡ್ಡಿನಲ್ಲಿ ನಡೆವ ಸತ್ಯಸಂಗತಿಗಳನ್ನೇ ಆಧರಿಸಿದಂತಿರುವುದರಿಂದ ಸತ್ಯಕ್ಕೆ ಕಥೆ ತುಂಬಾ ಹತ್ತಿರವೆನಿಸುತ್ತದೆ. ಚಿತ್ರದ ಮಧ್ಯಂತರದವರೆಗೆ ತುಂಬ ಕುತೂಹಲಕಾರಿಯಾಗಿ ಓಡುವ ಚಿತ್ರ ಮಧ್ಯಂತರದ ವೇಳೆಗೆ ಅನುಭವ್ ಎಂಬ ನಟ ಪುರುಷ ವೇಶ್ಯನಾಗಿ ರೂಪುಗೊಳ್ಳುವಾಗ ಚಿತ್ರ ಎಡವಿಬಿದ್ದಂತೆ ಅನಿಸುತ್ತದೆ.

ಪುರುಷ ಲೈಂಗಿಕ ಕಾರ್ಯಕರ್ತನಾಗಿ ರೂಪುಗೊಳ್ಳುವ ಕ್ರಿಯೆ ತೀರಾ ಸಹಜವಾಗಿದ್ದರೂ, ನಿಜಜೀವನಕ್ಕೆ ಹತ್ತಿರವೆನಿಸಿದರೂ, ಕೆಲವೊಮ್ಮೆ ಧುತ್ತನೆ ಅಬ್ಬಾ, ಕಥೆಗೆ ಇಂತಹ ತಿರುವು ನೀಡುವ ಧೈರ್ಯ ನಿರ್ದೇಶಕನಿಗೆ ಯಾಕೆ ಬೇಕಿತ್ತು ಅನಿಸದಿರದು. ಜತೆಗೆ ಸತ್ಯದ ಕಹಿ ಭಯಂಕರವಾಗಿ ಈ ಚಿತ್ರದಲ್ಲಿ ಕಾಡದೆ ಇರದು.

ರಾಜೀವ್ ನಾಥ್ ಅವರ ನಿರ್ದೇಶನ ಸೊಗಸಾಗಿದೆ. ಹಲವು ಭಾಗಗಳಲ್ಲಿ ಅವರ ನಿರ್ದೇಶನದ ಚಾತುರ್ಯ ನಿಮ್ಮನ್ನು ಗಾಢವಾಗಿ ಇಂಪ್ರೆಸ್ ಮಾಡದಿರದು. ಆದೇಶ್ ಶ್ರೀವಾಸ್ತವ್ ಅವರ ಸಂಗೀತ ಸಾಮಾನ್ಯವಾಗಿದ್ದರೂ, ಚಿತ್ರಕ್ಕೆ ಉತ್ತಮ ಸಾಥ್ ನೀಡುತ್ತದೆ. ಗುಲ್ ಪನಾಗ್ ನಟನೆ ಪರವಾಗಿಲ್ಲ. ಸಂಜಯ್ ಸೂರಿ ಅವರ ನಟನೆ ಒಕೆ. ಆದರೂ, ಕೆಲವೊಮ್ಮೆ ಅಗತ್ಯವಿರಲಿಲ್ಲದ ಭಾವಾಭಿನಯ ತೂರಿದಂತೆ ಅನಿಸಬಹುದು. ಜಾಕಿಶ್ರಾಫ್ ಚಿತ್ರಕ್ಕೆ ಅಂಥ ಅಗತ್ಯ ಅನಿಸುವುದಿಲ್ಲ. ಅನೂಪ್ ಮೆನನ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಶ್ರುತಿ ಸೇಥ್, ರಾಜ್ ಜುಟ್ಶಿ, ಸುಧಾ ಚಂದ್ರನ್ ಅವರನ್ನು ಸಹಿಸಿಕೊಳ್ಳಬಹುದು.

ಒಟ್ಟಾರೆ ಅನುಭವ್ ಚಿತ್ರವನ್ನು ನೋಡುವುದು ಖಂಡಿತಾ ಒಂದು ಅನುಭವವೇ ಸರಿ. ನೀವು ನಿಜಕ್ಕೂ ಚಿತ್ರ ವೀಕ್ಷಿಸಲು ಇಚ್ಛೆಪಡುತ್ತೀರಿ ಎಂದಾದರೆ, ನಿಮ್ಮ ರಿಸ್ಕ್ ನೀವೇ ತೆಗೆದುಕೊಳ್ಳಬೇಕಾದೀತು. ಎದೆಗುಂಡಿಗೆ ಗಟ್ಟಿ ಮಾಡಿ ನೋಡಿದರೆ ಮಾತ್ರ ಅನುಭವ್ ಅನುಭವವಾಗಿಸಬಹುದು.
IFM
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಅನುಭವ್, ಸಂಜಯ್ ಸೂರಿ, ಗುಲ್ ಪನಾಗ್, ಬಾಲಿವುಡ್