ಅಂತೂ ಬಹಳ ಹಿಂದಿನಿಂದಲೇ ಹುಟ್ಟುಹಾಕಿದ್ದ ಭಾರೀ ನಿರೀಕ್ಷಿತ ಚಿತ್ರ ಕಂಭಕ್ತ್ ಇಶ್ಕ್ ಹೊರಬಂದಿದೆ. ಪಕ್ಕಾ ಮನರಂಜನೆಯ ಈ ಚಿತ್ರ ಪ್ರೇಕ್ಷಕ ಇಟ್ಟಿದ್ದ ಭಾರೀ ನಿರೀಕ್ಷೆಯನ್ನು ಹುಸಿಗೊಳಿಸಿದರೂ, ತನ್ನದೇ ಆದ ಪ್ರಭಾವ ಬೀರುವಲ್ಲಿ ಹಿಂದೆ ಬೀಳುವುದಿಲ್ಲ.
ಕಂಭಕ್ತ್ ಇಶ್ಕ್ ಚಿತ್ರ ಕೂಡಾ ಮುಝ್‌ಸೇ ಶಾದಿ ಕರೋಗಿ, ವೆಲ್ಕಂ, ಸಿಂಗ್ ಈಸ್ ಕಿಂಗ್, ಗೋಲ್‌ಮಾಲ್ ರಿಟರ್ನ್ಸ್ ಚಿತ್ರಗಳ ಜಾತಿಗೇ ಸೇರುವ ಇನ್ನೊಂದು ಚಿತ್ರ. ಚಿತ್ರದ ಮುಖ್ಯ ಉದ್ದೇಶ ಪ್ರೇಕ್ಷಕರನ್ನು ರಂಜಿಸುವುದು ಅಷ್ಟೆ. ಆದರೂ ಅಂಥ ಉದ್ದೇಶ ಇದ್ದರೂ ಇದು ಅದರಲ್ಲೂ ವಿಫಲವಾಗುತ್ತದೆ.
ಇರಲಿ. ಹೀಗನಿಸಿದರೂ, ಕಂಭಕ್ತ್ ಇಶ್ಕ್ ಚಿತ್ರ ಡಿಫರೆಂಟ್ ಆಗಿದೆ. ಇಬ್ಬರು ಭಿನ್ನ ಲಿಂಗಿಗಳ (ಮಹಿಳೆ ಹಾಗೂ ಪುರುಷ) ನಡುವಿನ ಹೋರಾಟ ಕಥೆಯಿದು. ಇಂಥ ಕಥಾಹಂದರವಿರುವ ಚಿತ್ರ ಬಾಲಿವುಡ್ಡಿನ ತೆರೆಯ ಮೇಲೆ ಬಂದಿದ್ದು ತೀರಾ ವಿರಳ ಅಂತಾನೇ ಹೇಳಬಹುದು. ಮಹಿಳೆ ಹಾಗೂ ಪುರುಷನ ಇಗೋಗಳು ಇಲ್ಲಿ ಮುಖ್ಯ ಪಾತ್ರ ವಹಿಸುವ ಜತೆಗೆ ಆಧುನಿಕ ಸಂಬಂಧಗಳನ್ನು ಬಿಚ್ಚಿಡುತ್ತದೆ. ಎರಡು ಗಂಟೆಗಳಲ್ಲಿ ಪ್ರೇಕ್ಷಕನಿಗೆ ನಗು, ಭಾವುಕತೆ ಹಾಗೂ ಕಲ್ಪನೆ, ನೈಜತೆಗಳ ನಡುವಿನ ಸಂದಿಗ್ಧತೆಯನ್ನು ಕಟ್ಟಿಕೊಡುತ್ತದೆ.
IFM
ಅಕ್ಷಯ್ ಕುಮಾರ್ ಹಾಗೂ ಕರೀನಾ ಕಪೂರ್ ಇಬ್ಬರೂ ಚಿತ್ರದಲ್ಲಿ ತುಂಬ ಎನರ್ಜೆಟಿಕ್ ಆಗಿ ಮೂಡಿಬಂದಿದ್ದಾರೆ. ಈ ಚಿತ್ರದಲ್ಲಿನ ಕಥಾಹಂದರದಲ್ಲಿ ಮಹಿಳೆ ಹಾಗೂ ಪುರುಷನ ನಡುವಿನ ಯುದ್ಧದಲ್ಲಿ ಇಬ್ಬರೂ ಸಮಾನ ಸ್ಪರ್ಧಿಗಳಾಗಿ ಗೋಚರಿಸುವುದೂ ಅಷ್ಟೇ ಮುಖ್ಯ. ಕರೀನಾ ಹಾಗೂ ಅಕ್ಷಯ್ ಇಬ್ಬರಿಗೂ ಇದಕ್ಕೆ ಶ್ರೇಯಸ್ಸು ದಕ್ಕಲೇ ಬೇಕು. ಜತೆಗೆ ಮೊದಲ ಬಾರಿಗೆ ಬಾಲಿವುಡ್ ತೆರೆಯ ಮೇಲೆ ಕಾಣಿಸಿಕೊಂಡ ಹಾಲಿವುಡ್ ತಾರೆಗಳಾದ ಸಿಲ್ವೆಸ್ಟರ್ ಸ್ಟಾಲೋನ್, ಬ್ರಾಂಡನ್ ರೂತ್ ಹಾಗೂ ಡೆನಿಸ್ ರಿಚರ್ಡ್ಸ್ ಕೂಡಾ ತಮ್ಮ ಪಾತ್ರಗಳಿಗೆ ಸೂಕ್ತ ನ್ಯಾಯ ಒದಗಿಸಿದ್ದಾರೆ. ಅದು ಚಿತ್ರಕ್ಕೆ ಬೋನಸ್ ಕೂಡಾ.
ಚಿತ್ರ ಆರಂಭವಾಗುವಾಗಲೇ ಬಿದ್ದುಬಿದ್ದು ನಗಲು ಶುರುಮಾಡುವ ನೀವು ನಂತರ ನಗುವ ದೃಶ್ಯ ಇಲ್ಲದಿದ್ದರೂ ನಗಲು ಆರಂಭಿಸುತ್ತೀರಿ. ಆದರೆ ಅಂತ್ಯ ಭಾವುಕವಾಗುತ್ತಾ ಹೋಗುತ್ತದೆ. ಹೀಗಾಗಿ ಕಂಭಕ್ತ್ ಇಶ್ಕ್ ಚಿತ್ರ ಪಕ್ಕಾ ಮನರಂಜನೆ ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಲೋಡ್‌ಗಟ್ಟಲೆ ಮನರಂಜನೆಯಲ್ಲದೆ, ಲೋಡ್‌ಗಟ್ಟಲೆ ಗ್ಲ್ಯಾಮರ್ ಕೂಡಾ ಚಿತ್ರದಲ್ಲಿದೆ.
ಚಿತ್ರದಲ್ಲಿ ಅಕ್ಷಯ್ ಕುಮಾರ್ (ವಿರಾಜ್) ಒಬ್ಬ ಹಾಲಿವುಡ್ ಸ್ಟಂಟ್ ಮ್ಯಾನ್. ಮಹಿಳೆಯರು ಪುರುಷರಿಗೆ ಸಮಾನರಲ್ಲ ಎಂಬ ಧೋರಣೆ ಆತನದು. ಕರೀನಾ ಕಪೂರ್ (ಸಿಮ್ರಿತಾ) ಇದರಲ್ಲಿ ಒಬ್ಬ ಸೂಪರ್ ಮಾಡೆಲ್. ಇಬ್ಬರಿಗೂ ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುವುದಿಲ್ಲ. ಸಿಮ್ರಿತಾಳ ಗೆಳತಿ ಕಾಮಿನಿ (ಅಮೃತಾ ಅರೋರಾ) ಮದುವೆಯಲ್ಲಿ ವಿರಾಜ್ ಸಿಮ್ರಿತಾಗೆ ಕಾಣಸಿಗುತ್ತಾನೆ. ಕತಾಮಿನಿಯನ್ನು ಮದುವೆಯಾಗುತ್ತಿರುವಾತ ವಿರಾಜ್‌ನ ಸಹೋದರ ಲಕ್ಕಿ (ಅಫ್ತಾಬ್ ಶಿವ್‌ದಾಸನಿ). ಆದರೆ ವಿರಾಜ್ ಹಾಗೂ ಸಿಮ್ರಿತಾ ವೈರತ್ವದಿಂದ ಈ ಮದುವೆಗೆ ಇಬ್ಬರೂ ಭಾರೀ ವಿರೋಧ ವ್ಯಕ್ತಪಡಿಸುತ್ತಾರೆ. ಇಬ್ಬರು ಭಿನ್ನಲಿಂಗಿಗಳ ಅರ್ಥಾತ್ ಮಹಿಳೆ ಹಾಗೂ ಪುರುಷನ ನಡುವಿನ ಯುದ್ಧಕ್ಕೆ ಇಲ್ಲಿಂದ ಬೆಂಕಿ ಹತ್ತಿಕೊಳ್ಳುತ್ತದೆ.
IFM
ನಿರ್ದೇಶಕ ಸಬೀರ್ ಖಾನ್ ಉದ್ದೇಶವೂ ಅದೇ. ಜನರ್ನನು ಮನರಂಜಿಸುವುದು. ಆಧರೆ ಮೊದಲ ಭಾಗದಲ್ಲಿ ಪುರುಷ ಹಾಗೂ ಸ್ತ್ರೀಯ ನಡುವೆ ಅರ್ಥಾತ್ ಕರೀನಾ ಹಾಗೂ ಅಕ್ಷಯ್ ನಡುವಿನ ವಾಗ್ಯುದ್ಧ ಹಾಗೆಯೇ ಮುಂದುವರಿದುಕೊಂಡು ಗಂಭೀರವಾಗುತ್ತದೆ. ಪ್ರೇಕ್ಷಕರ ನಗುವಿನ ಅಲೆ ಇದ್ದಕ್ಕಿದ್ದಂತೆ ಕೊನೆಯಲ್ಲಿ ಹತಾಶೆಗೆ ತಿರುಗುತ್ತದೆ. ಬೇಸರದ ಛಾಯೆ ಚಿತ್ರದಲ್ಲಿ ಇಣುಕುತ್ತದೆ. ಆದರೂ, ನಿರ್ದೇಶಕರ ಈ ಸಿನಿಮಾದ ಥಿಯರಿ ನೀವು ಅಂದುಕೊಂಡಷ್ಟು ಸರ್‌ಪ್ರೈಸ್‌ಗೊಳಿಸಲಿಕ್ಕಿಲ್ಲ. ಆದರೂ, ನಿಮಗೆ ಪಕ್ಕಾ ಮನರಂಜನೆಯಂತೂ ನೀಡುತ್ತದೆ.
ಚಿತ್ರದಲ್ಲಿ ಉತ್ತಮ ಹಾಡುಗಳೂ ಇವೆ. ಓಂ ಮಂಗಳಂ, ಲಾಖ್ ಲಾಖ್, ಬೆಬೋ.. ಹಾಡುಗಳು ಚೆನ್ನಾಗಿವೆ. ಸಿನೆಮ್ಯಾಟೋಗ್ರಫಿಯೂ ಚಿತ್ರಕ್ಕೆ ಉತ್ತಮ ಪ್ರಬುದ್ಧತೆ ನೀಡುತ್ತದೆ.
ಕಂಭಕ್ತ್ ಇಶ್ಕ್ ಚಿತ್ರದಲ್ಲಿ ಅಕ್ಷಯ್ ಹಾಗೂ ಕರೀನಾ ಇಬ್ಬರೂ ಸೂಪರ್ಬ್. ಇಬ್ಬರೂ ಡೈನಾಮಿಕ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಅಕ್ಷಯ್ ತಮ್ಮ ಡೈಲಾಗ್ ಡೆಲಿವರಿಯಲ್ಲಂತೂ ಅದ್ಭುತವಾಗಿಯೇ ಮಿಂಚಿದ್ದಾರೆ. ಕರೀನಾ ಜಬ್ ವಿ ಮೆಟ್ ಚಿತ್ರದಲ್ಲಿ ನೀಡಿದ ಒಂದು ಅತ್ಯಪೂರ್ವ ನಟನೆಯನ್ನು ಇಲ್ಲೂ ನೀಡಿದ್ದಾರೆ. ಆದರೆ ವಿಭಿನ್ನ ಪಾತ್ರದಲ್ಲಿ. ಜತೆಗೆ ಸಿಕ್ಕಾಪಟ್ಟೆ ಗ್ಲ್ಯಾಮರಸ್ ಆಗಿಯೂ ಕರೀನಾ ಇಲ್ಲಿ ಮಿಂಚಿದ್ದಾರೆ.
ಅಫ್ತಾಬ್ ಹಾಗೂ ಅಮೃತಾ ಅರೋರಾ ಕೂಡಾ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಜಾವೇದ್ ಜೆಫ್ರಿ, ವಿಂದು ಸಿಂಗ್ ಕೂಡಾ ಒಕೆ. ಹಾಲಿವುಡ್ ತಾರೆಗಳಾದ ಸಿಲ್ವೆಸ್ಟರ್ ಸ್ಟಾಲೋನ್, ಬ್ರಾಂಡನ್ ರೂತ್ ಹಾಗೂ ಡೆನಿಸ್ ರಿಚರ್ಡ್ಸ್ ತಮ್ಮ ಪಾತ್ರಗಳಲ್ಲಿ ಸೈಯೆನಿಸಿದ್ದಾರೆ.
ಒಟ್ಟಾರೆ ಕಂಭಕ್ತ್ ಇಶ್ಕ್ ಯುವಜನರಿಗೆ ಅದ್ಭುತ ಮನರಂಜನೆ ಎಂಬುವುದರಲ್ಲಿ ಸಂದೇಹವೇ ಇಲ್ಲ. ಮೊದಲಾರ್ಧ ತುಂಬ ಚೆನ್ನಾಗಿರುವ ಈ ಚಿತ್ರ ದ್ವಿತೀಯಾರ್ಧದಲ್ಲಿ ಸ್ವಲ್ಪ ಕೆಳಕ್ಕಿಳಿಯುತ್ತದೆ. ಆದರೆ ಅಂತ್ಯದಲ್ಲಿ ತನ್ನ ಮೊದಲಿನ ಗತಿ ಪಡೆಯತೊಡಗುತ್ತದೆ. ಒಟ್ಟಾರೆ ಮೊದಲ ವಾರ ಇದಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ಬಂದರೆ ಅಚ್ಚರಿಯಿಲ್ಲ. ಆದರೆ ಎರಡನೇ ವಾರ ವಿಶ್ವದೆಲ್ಲೆಡೆ ಹಲವು ದೊಡ್ಡ ಬ್ಯಾನರ್‌ಗಳ ಚಿತ್ರ ಬಿಡುಗಡೆಯಾಗುತ್ತಿರುವುದರಿಂದ ಈಗಲೇ ಹೇಳಲಾಗದು.