ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸಿನಿಮಾ ವಿಮರ್ಶೆ » ಸಂಗೀತ ಸುಧೆಯ ಉತ್ತಮ ಚಿತ್ರ ಜಶ್ನ್ (Jashnn | Adhyayan Suman | Shahana Goswami | Anjana Sukhani)
ಸಿನಿಮಾ ವಿಮರ್ಶೆ
Feedback Print Bookmark and Share
 
Jashnn
IFM
ಜಶ್ನ್ ಸಾಮಾನ್ಯ ಮನುಷ್ಯನ ಸಾಧನೆಯ ಹಾದಿಯ ಕಥೆ. ಕನಸುಗಳಲ್ಲಿಯೇ ಬದುಕುವ, ಮುಂದೊಂದು ದಿನ ತಾನೊಬ್ಬ ಅಸಾಮಾನ್ಯನಾಗುತ್ತೇನೆ ಎಂದು ಕನಸು ಕಾಣುವ ವ್ಯಕ್ತಿಯ ಕಥೆ. ನಿರ್ದೇಶಕದ್ವಯರಾದ ರಕ್ಷಾ ಮಿಸ್ಟ್ರಿ ಹಾಗೂ ಹಾಸ್ನೈನ್ ಹೈದ್ರಾಬಾದ್ವಾಲಾ ತುಂಬ ಉತ್ತಮವಾಗಿಯೇ ಚಿತ್ರವನ್ನು ನಿರೂಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆಕಾಶ್ ವರ್ಮಾ( ಅಧ್ಯಾಯನ್) ತಾನೊಬ್ಬ ಖ್ಯಾತ ಗಾಯಕನಾಗಬೇಕೆಂಬ ಗುರಿ ಹೊತ್ತ ಕನಸು ಕಂಗಳ ಹುಡುಗ. ಅದಕ್ಕಾಗಿ ಗಾಯನ ವಲಯದಲ್ಲಿ ಸಾಕಷ್ಟು ಕಷ್ಟಪಡುತ್ತಾನೆ. ಮೇಲೆ ಬರುವ ಹೋರಾಟದಲ್ಲಿ ಹೆಣಗುತ್ತಾನೆ. ತನ್ನನ್ನು ತಾನು ಗುರುತಿಸಿಕೊಳ್ಳುವ ಮೇಲಾಟದಲ್ಲಿ ಆತನಿಗೆ ಹೆಗಲು ಕೊಡುವುದು ಆತನ ಅಕ್ಕ ನಿಶಾ (ಸಹನಾ ಗೋಸ್ವಾಮಿ). ನಿಶಾ ಶ್ರೀಮಂತ ಉದ್ಯಮಿಯ ಅಮನ್ ಬಜಾಜ್ (ಹುಮಾಯನ್ ಸಯೀದ್) ಹೆಂಡತಿ. ಆದರೆ, ಅಮನ್ ಬಜಾಜ್ ಇದೇ ಆಕಾಶ್‌ನನ್ನು ಕಂಡರೇ ಆಗದಂತೆ ವಿಪರೀತ ದ್ವೇಷಿಸುತ್ತಿರುತ್ತಾನೆ.

ಆದರೆ ಅಮನ್‌ ತಂಗಿ ಸಾರಾ ( ಅಂಜನಾ ಸುಖಾನಿ) ಆಕಾಶ್‌ನಲ್ಲಿ ಒಂದು ಅದ್ಭುತ ಪ್ರತಿಭೆಯಿದೆ. ಆದರೆ ಅದು ಜಗತ್ತಿಗೆ ಗೊತ್ತಾಗದೆ ಆತ ಹಾಗೇ ಕಳೆದುಹೊಗುತ್ತಿದ್ದಾನೆ ಎಂಬುದನ್ನು ಪತ್ತೆಹಚ್ಚುತ್ತಾಳೆ. ಇಂತಿಪ್ಪ ಸಾರಾ ಮನಸಾರೆ ಅವನನ್ನು ಪ್ರೀತಿಸುತ್ತಾಳೆ. ಜತೆಗೆ ಅವನಿಗೆ ಆಧಾರ ಸ್ತಂಭವಾಗಿ ಪ್ರೋತ್ಸಾಹ ನೀಡುತ್ತಾಳೆ. ಹೀಗೆ ಆಕಾಶ್ ರಾತ್ರೋರಾತ್ರಿ ಪ್ರಖ್ಯಾತಿ ಪಡೆಯುತ್ತಾನೆ. ಖ್ಯಾತ ಗಾಯಕನಾಗುತ್ತಾನೆ. ಆದರೆ ತನ್ನ ಖ್ಯಾತಿಯ ನಂತರವೂ ಅಮನ್‌ಗೆ ಹೆದರುತ್ತಲೇ ಸೊರಗುತ್ತಾನೆ. ಆತನಲ್ಲಿರುವ ಏಕೈಕ ವಿಶ್ವಾಸವೆಂದರೆ ತನ್ನ ಅಕ್ಕ ಹಾಗೂ ಸಾರಾ ನನ್ನ ಜತೆಗಿದ್ದಾರೆ ಎಂಬುದು.

Jashnn
IFM
ಗಾಯನರಂಗದ ಕಥಾಹಂದರವನ್ನೊಳಗೊಂಡಿರುವ ಜಶ್ನ್ ಚಿತ್ರ ಮಹೇಶ್ ಹಾಗೂ ಮುಖೇಶ್ ಭಟ್ ಅವರ ವಿಶೇಷ್ ಫಿಲಂಸ್ ಬ್ಯಾನರ್‌ನ ಕೂಸು. ರಕ್ಷಾ ಮಿಸ್ಟ್ರೀ ಹಾಗೂ ಹಾಸ್ನೈನ್ ಹೈದ್ರಾಬಾದ್ವಾಲಾ ನಿರ್ದೇಶನ ಮಾಡಿದ್ದಾರೆ. ಹೊಸ ಸಂಗೀತ ನಿರ್ದೇಶಕರಾದ ತೋಶಿ ಹಾಗೂ ಶರೀಬ್ ಸಂಗೀತ ನೀಡಿದ್ದಾರೆ.

ಜಶ್ನ್ ಚಿತ್ರ ಇತ್ತೀಚೆಗಷ್ಟೆ ಬಿಡುಗಡೆಯಾದ ರಾಕ್ ಆನ್ ತರಹವೇ ಅಂತ ಅನಿಸಿದರೂ ತಪ್ಪಿಲ್ಲ. ಜಶ್ನ್ ಕೂಡಾ ಒಬ್ಬ ಹುಡುಗ ತಾನು ಅಭೂತಪೂರ್ವ ರಾಕ್ ಗಾಯಕನಾಗಬೇಕೆಂದು ಕನಸು ಕಾಣುವ ಕಥೆ. ರಾಕ್ ಆನ್ ಕೂಡಾ ಹೆಚ್ಚು ಕಡಿಮೆ ಅಂಥದ್ದೇ. ಆದರೆ ಜಶ್ನ್ ಚಿತ್ರದುದ್ದಕ್ಕೂ ಸಂಬಂಧಗಳ ಹಾದಿಯಲ್ಲಿ ಸಾಗಿ ಮನಸ್ಸು ತೋಯಿಸುತ್ತದೆ.

ಕೆಲವು ದೃಶ್ಯಗಳಿಗಾದರೂ ಜಶ್ನ್ ನೋಡಲೇಬೇಕು. ನಿಮ್ಮ ಮನಸ್ಸನ್ನೂ ಹೊಕ್ಕು ನೀವು ಭಾವುಕರಾಗಿ ಬಿಡುವ ಘಳಿಗೆಗಳೂ ಚಿತ್ರದಲ್ಲಿವೆ. ಅಧ್ಯಾಯನ್ ಹಾಗೂ ಹುಮಾಯೂನ್ ನಡುವಿನ ವೈಮನಸ್ಸು ಹಾಗೂ ಹುಮಾಯೂನ್ ಬಳಿ ಅಧ್ಯಾಯನ್ ಕ್ಷಮೆ ಕೇಳುವ ಪ್ರಸಂಗ ಅದ್ಭುತವಾಗಿ ಮೂಡಿಬಂದಿದೆ. ಅಧ್ಯಾಯನ್ ಹಾಗೂ ಸಹನಾ ಅಂಜನಾಳ ಪಾರ್ಟಿಗೆ ಜತೆಯಾಗಿ ಹೋಗುವಾಗ ಅಲ್ಲಿ ಎದುರಾಗುವ ಹುಮಾಯೂನ್ ನಿಮ್ಮನ್ನೂ ಬೆಚ್ಚಿಬೀಳುವಂತೆ ಮಾಡುವುದರಲ್ಲಿ ಸಂದೇಹವೇ ಇಲ್ಲ. ಅಷ್ಟೇ ಅಲ್ಲ. ಅಧ್ಯಾಯನ್‌ನ ಡೆಮೋ, ಮ್ಯೂಸಿಕ್ ಸಂಸ್ಥೆಯೊಂದರಿಂದ ರಿಜೆಕ್ಟ್ ಆದಾಗ ಅಧ್ಯಾಯನ್ ಅಳುವ ಯಾತನೆ ನಿಮ್ಮ ಹೃದಯಕ್ಕೂ ಕಿಚ್ಚು ಹತ್ತಿಸುತ್ತದೆ.

Jashnn
IFM
ಅದೇ ದಿನ ರಾತ್ರಿ ಅಧ್ಯಾಯನ್ ಕುಡಿದು, ಹೊಟೇಲ್‌ನಲ್ಲಿ ಮತ್ತೊಬ್ಬ ಅತಿಥಿಯಿಂದ ಹಣ ಕದ್ದುತ್ತಾನೆ. ಈ ಘಟನೆಯ ನಂತರ ಏನಾಗುತ್ತದೆ ಎಂಬುದು ಆಶ್ಚರ್ಯ ತರಿಸುತ್ತದೆ. ಅಂತಿಮವಾಗಿ ಕ್ಲೈಮ್ಯಾಕ್ಸ್‌ನಲ್ಲಿ ಅಧ್ಯಾಯನ್ ವೇದಿಕೆಯಲ್ಲಿ ಹುಮಾಯೂನ್ ಕೈಯಿಂದ ಟ್ರೋಫಿಯನ್ನು ಅಕ್ಕನ ಬಳಿ ಸ್ವೀಕರಿಸಲು ಹೇಳುತ್ತದೆ. ಇದಂತೂ ಅದ್ಭುತವಾಗಿ ರೋಂಮಾಂಚನಕಾರಿಯಾಗಿ ಭಾವುಕ ಕ್ಷಣವಾಗುತ್ತದೆ. ಚಪ್ಪಾಳೆ ಗಿಟ್ಟಿಸುತ್ತದೆ.

ಆದರೆ ಜಶ್ನ್ ರೋಮ್ಯಾಂಟಿಕ್ ದೃಶ್ಯಗಳಲ್ಲಿ ತನ್ನ ಹಿಡಿತವನ್ನು ಕಳೆದುಕೊಳ್ಳುತ್ತದೆ. ಮೊದಲ ಒಂದು ಗಂಟೆ ಚಿತ್ರ ಚೆನ್ನಾಗಿಯೇ ಸಾಗಿದರೂ ಎರಡನೇ ಗಂಟೆಯಲ್ಲಿ ಸ್ವಲ್ಪ ಕೆಳಕ್ಕಿಳಿಯುತ್ತದೆ. ತುಂಬ ಎಳೆದಂತೆ ಅನಿಸುತ್ತದೆ. ಆದರೆ ಅದು ನಮ್ಮನ್ನು ಒಪ್ಪಿಕೊಳ್ಳುವಂತೆ ಮಾಡುತ್ತದೆ ಅನ್ನೋದೂ ಸತ್ಯವೇ. ನಿರ್ದೇಶಕರಿಬ್ಬರೂ, ಕೆಲವು ದೃಶ್ಯಗಳಲ್ಲಂತೂ ಅದ್ಭುತವಾಗಿ ಕಾರ್ಯ ನಿರ್ವಹಿಸಿದ್ದಾರೆ. ನಿರ್ದೇಶಕರಿಗೆ ಸಹಾಯವಾಗುವಂತೆ ಅದ್ಭುತವಾಗಿ ಚಿತ್ರಕಥೆ ಹೆಣೆದಿದ್ದಾರೆ ಶಾಗುಫ್ತಾ ರಫೀಕ್.

ಭಟ್ ಸಿನಿಮಾಗಳೆಂದರೆ ಅಲ್ಲಿ ಮಧುರವಾದ ಸಂಗೀತ ಇದ್ದೇ ಇದೆ. ಇಲ್ಲೂ ಅಷ್ಟೆ. ಜಶ್ನ್ ಚಿತ್ರದ ಸಂಗೀತ ತುಂಬ ರಮ್ಯವಾಗಿದೆ. ಕ್ಲೈಮ್ಯಾಕ್ಸ್‌ನಲ್ಲೂ ಸಂಗೀತವೇ ಪ್ರಧಾನವಾಗುತ್ತದೆ. ಮೇಳೈಸುತ್ತದೆ. ಇದರ ಶ್ರೇಯಸ್ಸು ಹೊಸ ಸಂಗೀತ ನಿರ್ದೇಶಕರಾದ ತೋಶಿ ಹಾಗೂ ಶರೀಬ್‌ಗೆ ಸಲ್ಲಲೇಬೇಕು. ಸಂಭಾಷಣೆಯೂ ಹರಿತವಾಗಿದೆ. ಕ್ಯಾಮರಾ ಕೈಚಳಕವೂ ಒಕೆ.

ನಾಲ್ಕೂ ಮಂದಿ ನಟನಟಿಯರು ಚಿತ್ರದಲ್ಲಿ ಶೈನ್ ಆಗಿದ್ದಾರೆ. ಅಧ್ಯಾಯನ್ ಸುಮನ್‌ಗೆ ಚಿತ್ರದಲ್ಲಿ ಅತ್ಯುತ್ತಮ ನಟನೆಗೆ ಅವಕಾಶ ಸಿಕ್ಕಿದೆ. ಅಸಹಾಯಕತೆ, ದುಃಖ, ಸೋಲು ಎಲ್ಲ ಬಗೆಯ ಭಾವುಕ ಸನ್ನಿವೇಶಗಳೂ ಅಧ್ಯಾಯನ್‌ಗೆ ಇಲ್ಲಿ ಅಭಿನಯಕ್ಕೆ ಸೂಕ್ತ ವಾತಾವರಣ ಸೃಷ್ಟಿಸಿದೆ. ಹುಮಾಯೂನ್ ಸಯೀದ್ ನಟನೆಯಲ್ಲಿ ಬ್ರಿಲಿಯಂಟ್. ಅವರು ಎಲ್ಲ ಮೇರೆಗಳನ್ನೂ ಮೀರಿ ಅದ್ಭುತವಾಗಿ ಚಿತ್ರದುದ್ದಕ್ಕೂ ಮಹತ್ವ ಪಡೆಯುತ್ತಾರೆ. ಸಹನಾ ಗೋಸ್ವಾಮಿಯೂ ತುಂಬ ಚೆನ್ನಾಗಿ ತನ್ನ ಪಾತ್ರವನ್ನು ನಿಭಾಯಿಸಿದ್ದಾರೆ. ಅಂಜನಾ ಸುಖಾನಿ ಬಗ್ಗೆ ಎರಡು ಮಾತೇ ಇಲ್ಲ. ಸುಖಾನಿ ನಟನೆ ಎಕ್ಸಲೆಂಟ್.

ಒಟ್ಟಾರೆ, ಕೆಲವು ಕಡೆ ಸಣ್ಣ ಪುಟ್ಟ ತಪ್ಪುಗಳು, ನಿಧಾನ ಗತಿಯ ಏರುಪೇರುಗಳು ಚಿತ್ರದಲ್ಲಿ ಕಂಡುಬಂದರೂ, ಜಶ್ನ್ ನೋಡಬಹುದಾದ ಉತ್ತಮ ಚಿತ್ರ. ಚಿತ್ರದ ಸಂಗೀತ, ಭಾವುಕ ಕ್ಷಣಗಳು ಹಾಗೂ ನಟನೆ. ಈ ಮೂರು ವಿಷಯಗಳಿಗಾದರೂ ಚಿತ್ರ ವೀಕ್ಷಿಸಬಹುದು.
Jashnn
IFM
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಜಶ್ನ್, ಮುಖೇಶ್ ಭಟ್, ಅಧ್ಯಾಯನ್ ಸುಮನ್, ಅಂಜನಾ ಸುಖಾನಿ, ಸಹನಾ ಗೋಸ್ವಾಮಿ