|
ವಿಶಿಷ್ಟ ಛಾಪೊತ್ತಿದ ನಾಯಕಿ
2003ರಲ್ಲಿ 'ಬೂಮ್'ನಂತಹ ಫ್ಲಾಪ್ ಚಿತ್ರದಿಂದ ಚಿತ್ರರಂಗದ ಜೀವನ ಆರಂಭಿಸಿದ ಕತ್ರಿನಾ, ಮೊದಲು ಗುರುತಿಸಿಕೊಂಡಿದ್ದು ಸ್ಟಾರ್ ಸಲ್ಮಾನ್ ಖಾನ್ ಅವರ ಗೆಳತಿಯಾಗಿ. ಹಿಂದಿ ಚೆನ್ನಾಗಿ ಮಾತನಾಡಲು ಆಕೆಗೆ ಬರುವುದಿಲ್ಲ, ಆದರೆ ಕಠಿಣ ಪರಿಶ್ರಮಿ ಆಕೆ. ಹಿಂದಿ ಕಲಿಯುವುದರೊಂದಿಗೆ ಅಭಿನಯದಲ್ಲೂ ಸಾಕಷ್ಟು ಸುಧಾರಿಸಿಕೊಂಡಿದ್ದಾರೆ. ಈ ಕಾರಣಕ್ಕೆ ಬಾಲಿವುಡ್ನಲ್ಲಿ ತಮ್ಮದೇ ಆದ ಛಾಪು ಒತ್ತಿದ್ದಾರೆ.