ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ತಾರಾ ಪರಿಚಯ » ರಣ್‌ಬೀರ್‌ ಜಂಬದ ಹುಡುಗನಲ್ಲ: ಬಸು
ತಾರಾ ಪರಿಚಯ
Feedback Print Bookmark and Share
 
IFM
ನಟಿಯಾಗಿ ತಮ್ಮ ಪ್ರತಿಭೆಯನ್ನು ಸಾಬೀತು ಪಡಿಸಿರುವ ಬಿಪಾಶ ಬಸು ಅವರ ಈ ವರ್ಷದ ಎರಡನೇ ಚಿತ್ರ 'ಬಚನಾ ಎ ಹಸೀನೋ' ಬಿಡುಗಡೆಗೆ ಸಿದ್ಧವಾಗಿದೆ. ಅವರು ರಣ್‌ಬೀರ್ ಕಪೂರ್‌ರೊಂದಿಗೆ ನಟಿಸಿದ ಅನುಭವ ಮತ್ತು ಇತರ ವಿಷಯಗಳ ಬಗ್ಗೆ ತಮ್ಮ ಅನುಭವ ಕಥನವನ್ನು ಇಲ್ಲಿ ಬಿಚ್ಚಿಟ್ಟಿದ್ದಾರೆ.

ನೀವು ಚಿತ್ರದ ಬಗ್ಗೆ ಉತ್ಸುಕರಾಗಿದ್ದೀರಾ...

ಹೌದು... ನಾನು ರೋಮಾಂಚಿತಳಾಗಿದ್ದೇನೆ. ಇದು ನನ್ನ ಪಾಲಿಗೆ ಬಹು ದೊಡ್ಡ ಚಿತ್ರ ಮತ್ತು ನಿರೀಕ್ಷೆಗಳು ಸಹ ಬಹಳಷ್ಟಿವೆ ಆದರೆ ಇವೆಲ್ಲಕ್ಕಿಂತಲೂ ಮುಖ್ಯವಾಗಿ ಇದು ಉತ್ತಮ ಚಿತ್ರ, ಇದು ಯಶ್ ರಾಜ್‌ರ ಶ್ರೇಷ್ಟ ಚಿತ್ರಗಳಲ್ಲೊಂದು.

ಯಶ್ ರಾಜ್ ಬ್ಯಾನರ್ ಅಡಿಯಲ್ಲಿ ನಿಮ್ಮ ಹಿಂದಿನ ಚಿತ್ರ 'ಧೂಮ್ 2' ಕೂಡ ಹಿಟ್ ಆಗಿತ್ತು. ಇದು ನಿರೀಕ್ಷೆಗಳನ್ನು ಇನ್ನಷ್ಟು ಹೆಚ್ಚಿಸಿದೆಯೇ?

ಪ್ರತಿಷ್ಠಿತ ಬ್ಯಾನರ್‌ಗಳ ಅಡಿಯಲ್ಲಿ ಕೆಲಸ ಮಾಡುವುದು ಯಾವಾಗಲು ಒಳ್ಳೆಯ ಅನುಭವ ನೀಡುತ್ತದೆ. ಅವು ಯಾವಾಗಲೂ ಪ್ರಾಮುಖ್ಯತೆ ಹೊಂದಿರುತ್ತವೆ. ನಾನು ಈ ಬ್ಯಾನರ್ ಜೊತೆ ದುಡಿಯುತ್ತಿರುವುದು ನನಗೆ ಹೆಚ್ಚಿನ ಖುಷಿ ನೀಡಿದೆ. ಯಶ್ ರಾಜ್ ಉತ್ತಮ ಚಿತ್ರಗಳನ್ನು ನೀಡಿದ್ದಾರೆ ಮತ್ತು ಈ ಬಾರಿಯೂ ಚಿತ್ರ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗುತ್ತದೆ ಎಂದು ನನಗೆ ಅನಿಸುತ್ತದೆ.

ನಿಮ್ಮ ಹಿಂದಿನ ಚಿತ್ರ 'ರೇಸ್' ಕೂಡ ಹಿಟ್ ಚಿತ್ರವಾಗಿತ್ತು. ಇದುವರೆಗೆ ಈ ವರ್ಷ ನಿಮ್ಮ ಪಾಲಿಗೆ ಶುಭವಾಗಿದೆ.

ನಾನು ಬಹಳ ಕುತೂಹಲಭರಿತಳಾಗಿದ್ದೇನೆ. ರೇಸ್ ಮತ್ತು ಬಚನಾ.. ವಿಭಿನ್ನ ಚಿತ್ರಗಳು. ಇತ್ತೀಚಿನ ದಿನಗಳಲ್ಲಿ ನಾನು ಕಡಿಮೆ ಚಿತ್ರಗಳನ್ನು ಮಾಡುತ್ತಿದ್ದೇನೆ. ನಾನು ಈ ಚಿತ್ರವನ್ನು ಎಂಜಾಯ್ ಮಾಡಿದೆ. ಉತ್ತಮ ಸಹನಟರು ಮತ್ತು ನಿರ್ದೇಶಕರು ಇದ್ದುದರಿಂದ ಈ ಚಿತ್ರ ಹೆಚ್ಚು ಖುಷಿ ನೀಡಿತು.

IFM
ಅಂದರೆ ಈ ಚಿತ್ರದ ಬಗ್ಗೆ ಎಲ್ಲವೂ ನಿಮಗೆ ಹಿಡಿಸಿದೆ..

ನಾನು ಬಹಳ ಸಮಯದಿಂದ ರೊಮ್ಯಾಂಟಿಕ್ ಚಿತ್ರವೊಂದನ್ನು ಮಾಡಿಲ್ಲದೇ ಇರುವುದರಿಂದ ಅಂತಹ ಚಿತ್ರವನ್ನು ಮಾಡಲು ಬಯಸಿದ್ದೆ. ಬಚನಾ ಎ ಹಸೀನೋ ಉತ್ತಮ ಸ್ಕ್ರಿಪ್ಟ್ ಹೊಂದಿತ್ತು...

ಅಂದರೆ ಅದು ಎಲ್ಲಾ ರೀತಿಯಿಂದಲೂ ಪರಿಪೂರ್ಣವಾಗಿತ್ತು. ಚಿತ್ರದಲ್ಲಿ ರಾಧಿಕ ಎನ್ನುವ ನನ್ನ ಪಾತ್ರ ಬಹಳ ಆಕರ್ಷಣೀಯವಾಗಿದೆ. ಈ ಪಾತ್ರ ನನಗೆ ಹೇಳಿ ಮಾಡಿಸಿದಂತಿತ್ತು. ಈ ಪಾತ್ರ ನನ್ನ ವ್ಯಕ್ತಿತ್ವಕ್ಕೆ ಬಹಳಷ್ಟು ಹೋಲುತ್ತದೆ. ನನ್ನ ಪಾತ್ರ ಮಾತ್ರವಲ್ಲದೆ ದೀಪಿಕಾ, ರಣ್‌ಬೀರ್ ಮತ್ತು ಮಿನಿಶಾ ಎಲ್ಲರ ಪಾತ್ರಗಳು ಚಿತ್ರಕ್ಕೆ ಹೇಳಿಮಾಡಿಸಿದಂತಿವೆ.

ಚಿತ್ರದಲ್ಲಿ ರಾಧಿಕಾ ಹೇಗೆ ಕಾಣಿಸುತ್ತಾರೆ?

ಇದು ಬಹಳ, ಬಹಳ ಗ್ಲಾಮರಸ್ ಪಾತ್ರ.

ಅಂದರೆ ರೇಸ್‌ನಲ್ಲಿ ಇದ್ದಂತೆ ಎಂದು ಅರ್ಥವೇ?

ನೀವು ಈ ಎರಡು ಪಾತ್ರಗಳನ್ನು ಹೋಲಿಸುವಂತಿಲ್ಲ. ರೇಸ್ ಥ್ರಿಲ್ಲರ್ ಚಿತ್ರವಾಗಿತ್ತು ಮತ್ತು ಇದು ರೊಮ್ಯಾಂಟಿಕ್ ಚಿತ್ರ. ರಾಧಿಕಾ ವೃತ್ತಿ ನಿರತ ಡಾನ್ಸರ್, ಅವಳು ಮುಂಬಯಿಗೆ ಬಂದು 'ಶೈಮಾಕ್ ದವಾರ್' ನೃತ್ಯ ತಂಡವನ್ನು ಸೇರಿಕೊಳ್ಳುತ್ತಾಳೆ. ಅವಳು ಸ್ಮಾರ್ಟ್, ಇಂಟೆಲಿಜೆಂಟ್ ಮತ್ತು ಫ್ಯಾಶನೇಬಲ್, ಇಂದಿನ ಜಗತ್ತಿನ ದೃಷ್ಟಿಯಿಂದ ಅವಳು ಅಚ್ಚ ನಗರದ ಹುಡುಗಿ. ಚಿತ್ರದಲ್ಲಿ ನನ್ನ ಪಾತ್ರವೂ ಸೇರಿದಂತೆ ಎಲ್ಲಾ ಪಾತ್ರಗಳಿಗೂ ವಿಭಿನ್ನ ಲುಕ್ ನೀಡಲಾಗಿದೆ.

ನೀವು ನಿಮ್ಮ ಲುಕ್ ಬಗ್ಗೆ ಹೆಚ್ಚು ಗಮನ ಕೊಡಬೇಕಾಯಿತೆ?

ಇಲ್ಲ, ಇದರ ಶ್ರೇಯ ಅಕಿ ನಾರಲ್ಸ್‌ರಿಗೆ ಸಲ್ಲಬೇಕು. ಅವರು ನನಗೆ ಅತ್ಯಂತ ಸುಂದರ ಲುಕ್ ನೀಡಿದ್ದಾರೆ. ಅವರು ನಾನು ಎಷ್ಟು ಫ್ಯಾಶನೇಬಲ್ ಆಗಿ ಕಾಣಿಸಲು ಸಾಧ್ಯವೊ ಅಷ್ಟು ಫ್ಯಾಶನೇಬಲ್ ಲುಕ್ ನೀಡಿದ್ದಾರೆ. ಅವರು ತಮ್ಮ ಕಾರ್ಯವನ್ನು ಅತ್ಯುತ್ತಮವಾಗಿ ನಿಭಾಯಿಸಿದ್ದಾರೆ.

ಈಗ ಇನ್ನಷ್ಟು ಮುಖ್ಯವಾದ ವಿಷಯದತ್ತ ಬರೋಣ.. ದೇಶದ ಹೃದಯಮಿಡಿತವಾಗಿರುವ ರಣ್‌ಬೀರ್ ಕಪೂರ್ ಬಗ್ಗೆ, ಅವರೊಂದಿಗೆ ನಟಿಸಿದ ಅನುಭವ ಹೇಗಿತ್ತು?

ಓಹ್.. ನಿಜಕ್ಕೂ ಗ್ರೇಟ್, ಅವರು ದೇಶದ ಹೃದಯಮಿಡಿತ ಅನ್ನುವುದಕ್ಕಷ್ಟೇ ಅಲ್ಲ ಒಬ್ಬ ವೃತ್ತಿನಿರತರಾಗಿಯೂ ಅವರೊಂದಿಗೆ ದುಡಿಯುವುದು ಶ್ರೇಷ್ಟ ಅನುಭವ. ಅವರಲ್ಲಿರುವ ಉತ್ತಮ ಅಂಶವೆಂದರೆ ಅವರಿಗೆ ಏನು ಮಾಡಬೇಕು ಮತ್ತು ಅದನ್ನು ಹೇಗೆ ಮಾಡಬೇಕು ಎಂಬುದರ ಅರಿವಿದೆ. ಇವೆಲ್ಲದರ ಜೊತೆಗೆ ಅವರು ಕಪೂರ್ ಕುಟುಂಬದಿಂದ ಬಂದಿದ್ದರೂ ಅವರದು ಗರ್ವದ ಸ್ವಭಾವವಲ್ಲ, ಅವರು ಸರಳ ಮತ್ತು ವಾಸ್ತವಿಕ ವ್ಯಕ್ತಿ.

IFM
ನೀವು ಚಿತ್ರ ತಂಡದ ಅತ್ಯಂತ ಹಿರಿಯ ಸದಸ್ಯರು. ಅದ್ದರಿಂದ ನೀವು ಉಳಿದವರಿಗೆ ಸಲಹೆ, ಸೂಚನೆಗಳನ್ನು ನೀಡುತ್ತಿದ್ದೀರಾ?

(ನಗುತ್ತಾರೆ) ಅದರ ಅಗತ್ಯ ಇದೆ ಎಂದು ನಿಮಗೆ ಅನಿಸುತ್ತದೆಯೇ? ಕಮ್ ಆನ್.. ನಾವೆಲ್ಲರು ಪರಸ್ಪರರೊಂದಿಗೆ ನಟಿಸುತ್ತಾ ಉತ್ತಮ ಸಮಯವನ್ನು ಹಂಚಿಕೊಂಡೆವು. ನಾವು ಒಂದು ತಂಡವಾಗಿ ದುಡಿದ್ದೇವೆ ಮತ್ತು ಇದರ ಪರಿಣಾಮವನ್ನು, ಚಿತ್ರ ಬಿಡುಗಡೆಯಾದ ನಂತರ ನೀವು ನೋಡಲಿದ್ದೀರಿ.

ಇದಲ್ಲದೆ ರಣ್‌ಬೀರ್ ಮತ್ತು ದೀಪಿಕಾ ಚಿತ್ರರಂಗಕ್ಕೆ ಹೊಸಬರೆಂದು ಅನಿಸಲೇ ಇಲ್ಲ. ಕಳೆದ ಸಲ ಅವರು ಚಿತ್ರರಂಗಕ್ಕೆ ಪರಿಚಯವಾದ ರೀತಿ ಅವರ ಆತ್ಮವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸಿದೆ ಮತ್ತು ಅದು ಅವರಿಬ್ಬರಿಗೂ ಬಹಳಷ್ಟು ಸಹಾಯಕವಾಗಿದೆ. ಮಿನಿಶಾಳೂ ಅಷ್ಟೆ, ಅವಳು ಒಳ್ಳೆಯ ಹುಡುಗಿ, ಅವಳ ಕೈಯಲ್ಲಿ ಈಗಾಗಲೇ ಬಹಳಷ್ಟು ಉತ್ತಮ ಚಿತ್ರಗಳಿವೆ.(ನಗುತ್ತಾರೆ)

ಓಕೇ, ಓಕೇ ಅಂದರೆ ನೀವು ಚಿತ್ರದ ಬಗ್ಗೆ ಆನಂದ ತುಂದಿಲಿತರಾಗಿದ್ದೀರಿ...

ಓಹ್, ಹೌದು ಮತ್ತು ನಾನು ಒಬ್ಬರನ್ನು ಮರೆತಿದ್ದೆ, ಈ ಎಲ್ಲವನ್ನು ಸಾಧ್ಯವಾಗಿಸಿದ ವ್ಯಕ್ತಿ ಸಿದ್ಧಾರ್ಥ ಆನಂದ್, ನಮ್ಮ ನಿರ್ದೇಶಕರು. ಅವರು ಯುವಕರು ಮತ್ತು ಎಲ್ಲವನ್ನು ಸಮನ್ವಯಗೊಳಿಸಬಲ್ಲ ಶಕ್ತಿ ಉಳ್ಳವರು.

ಬಚನಾ ಎ ಹಸೀನೋ ನಂತರ, ಏನು ಎಂಬುದರ ಬಗ್ಗೆ ತಿಳಿಸಿ..

ರಿತುಪರ್ಣ ಘೋಷ್ ಅವರ ಚರಿತ್ರೋ ಕಾಲ್ಪನಿಕ್ ಮತ್ತು ಪಂಕ್ ಎಂಬ ಇನ್ನೊಂದು ಚಿತ್ರದಲ್ಲಿ ನಟಿಸುತ್ತಿದ್ದೇನೆ. ಎರಡೂ ಚಿತ್ರಗಳು ಉತ್ತಮವಾಗಿವೆ, ಆದರೆ ನನ್ನ ಮೊದಲ ಬಂಗಾಳಿ ಚಿತ್ರದ ಬಗ್ಗೆ ನಾನು ಬಹಳ ಉತ್ಸುಕಳಾಗಿದ್ದೇನೆ. ಇದು ಸಂಪೂರ್ಣವಾಗಿ ವಿಭಿನ್ನ ರೀತಿಯ ಚಿತ್ರ ಮತ್ತು ಪಾತ್ರ. ನೀವು ಇದುವರೆಗೆ ನೋಡಿಲ್ಲದ ಬೇರೆಯದೇ ಆದ ಬಿಪಾಶಳನ್ನು ನೋಡಲಿದ್ದೀರಿ.

ಅಂದರೆ ಇದು ಗ್ಲಾಮರಸ್ ಪಾತ್ರವಲ್ಲ...

ನಾನು ಈ ಹೆಚ್ಚಿನದೇನನ್ನು ಹೇಳುವುದಿಲ್ಲ. ಸದ್ಯಕ್ಕೆ ನಾನು ಪೂರ್ಣವಾಗಿ ಬಚನಾ ಎ ಹಸೀನೊ ಬಗ್ಗೆ ಗಮನ ಹರಿಸುತ್ತಿದ್ದೇನೆ. ಮುಂದಿನ ಸಲ ನಾನು ಈ ಬಗ್ಗೆ ಹೇಳುತ್ತೇನೆ.

ಕೃಪೆ- ಟ್ರಾನ್ಸ್ ವರ್ಲ್ಡ್ ಫೀಚರ್
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಬಿಪಾಶ ಬಸು, ರಣ್‌ಬೀರ್ ಕಪೂರ್‌, ಬಚನಾ ಎ ಹಸೀನೋ, ರೇಸ್', 'ಧೂಮ್2'