ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ತಾರಾ ಪರಿಚಯ » ಮತ್ತೆ ಝೇಂಕರಿಸಿ ಬರುವಳೇ ಜೇನಿನ ಕನ್ಯೆ
ತಾರಾ ಪರಿಚಯ
Feedback Print Bookmark and Share
 
ನಿರ್ದೇಶಕ ರಾಮ್ ಮುಖರ್ಜಿಯವರ ಮಗಳಾದ ರಾಣಿ ಮುಖರ್ಜಿ ಜನಿಸಿದ್ದು 1978 ಮಾರ್ಚ್ 21ರಂದು ಕೋಲ್ಕತ್ತಾದಲ್ಲಿ.

1996ರಲ್ಲಿ 'ರಾಜಾ ಕಿ ಆಯೆಗಿ ಬರಾತ್' ಚಿತ್ರದ ಮೂಲಕ ಚಿತ್ರ ಜಗತ್ತಿಗೆ ಕಾಲಿಟ್ಟ ರಾಣಿ ಕೆಲವೇ ಸಮಯಗಳಲ್ಲಿ ಪ್ರತಿಭೆಯ ಉತ್ತುಂಗಕ್ಕೇರಿದರು. 1998ರಲ್ಲಿ ಬಾಲಿವುಡ್ ಕಿಂಗ್ ಶಾರುಕ್‌ನೊಂದಿಗಿನ 'ಕುಚ್ ಕುಚ್ ಹೋತಾ ಹೈ' ಎಂಬ ಬಿಗ್ ಕಮರ್ಷಿಯಲ್ ಚಿತ್ರದಲ್ಲಿ ರಾಣಿ ಗಮನಾರ್ಹ ಪ್ರದರ್ಶನವಿತ್ತರು. ಇದಾದ ನಂತರ ಒಂದರ ನಂತರ ಇನ್ನೊಂದರಂತೆ ಯಶಸ್ಸಿನ ಉತ್ತುಂಗಕ್ಕೇರಿದ ರಾಣಿಯವರ 'ಹೆಲೋ ಬ್ರದರ್', 'ಬಾದಲ್', 'ಹದ್ ಕರ್ ದಿ ಆಪ್‌ನೇ', 'ಬಿಚ್ಚು', 'ಹರ್ ದಿಲ್ ಜೋ ಪ್ಯಾರ್ ಕರೇಗಾ' ಚಿತ್ರಗಳ ಅಭಿನಯವು ಬಾಲಿವುಡ್ ನಿರ್ಮಾಪಕರ ಬೊಕ್ಕಸವನ್ನು ಬಲಿಷ್ಠಗೊಳಿಸಿತು.

ಸಿನೆಮಾ ರಂಗದಲ್ಲಿ ಹಲವಾರು ಏಳು ಬೀಳುಗಳನ್ನು ಕಂಡಿರುವ ರಾಣಿಗೆ 2004-05 ಸಾಲಿನ ವರ್ಷಗಳು ಸುವರ್ಣ ಯುಗವಾಗಿತ್ತು. ಈ ಎರಡು ವರ್ಷಗಳೆಡೆ ತೆರೆಕಂಡ 'ಯುವ','ಹಮ್ ತುಮ್', 'ವೀರ್ ಜಾರಾ', 'ಬ್ಲ್ಯಾಕ್', 'ಬಂಟಿ ಔರ್ ಬಬ್ಲಿ', 'ಪಹೇಲಿ'ಗಳಂತಹ ಚಿತ್ರಗಳು ಜನಮನ ಗೆದ್ದಿದಲ್ಲದೆ ಹಲವು ಪ್ರಶಸ್ತಿಗಳನ್ನು ರಾಣಿ ಅವರನ್ನು ಅರಸಿಕೊಂಡು ಬಂತು. 2006-07ರಲ್ಲಿ ತೆರೆಕಂಡ 'ಕಬಿ ಅಲ್‌ವಿದಾ ನಾ ಕಹನಾ', 'ಸಾವರಿಯಾ' ಚಿತ್ರಗಳು ಸಹ ಅದ್ಭುತ ಯಶಸ್ಸನ್ನು ಕಂಡಿತ್ತು.


1998ರ 'ಕುಚ್ ಕುಚ್ ಹೋತಾ ಹೈ' ಚಿತ್ರದಲ್ಲಿನ ಅತ್ಯುತ್ತಮ ಅಭಿನಯಕ್ಕಾಗಿ ರಾಣಿ ಅತ್ಯುತ್ತಮ ಪೋಷಕ ನಟಿ, 2004ರಲ್ಲಿ 'ಯುವ' ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟಿ ಮತ್ತು 2005ರಲ್ಲಿ 'ಬ್ಲ್ಯಾಕ್' ಚಿತ್ರದ ಮನೋಜ್ಞ ಅಭಿನಯಕ್ಕಾಗಿ ಅತ್ಯುತ್ತಮ ಶ್ರೇಷ್ಠ ನಟಿ ಎಂದು ಫಿಲ್ಮಫೇರ್ ಪ್ರಶಸ್ತಿಯನ್ನು ಗಳಿಸಿದ್ದಾರೆ.

ಬಾಲಿವುಡ್ ಜಗತ್ತಿನ ಮಹಾರಾಣಿಯ ಪಟ್ಟದ ಮೇಲೆ ಪ್ರಬಲ ಕಣ್ಣಿರಿಸಿದ್ದ ರಾಣಿ ಇತ್ತೀಚೆಗಿನ ಎರಡು ವರ್ಷಗಳಿಂದ ಹಲವಾರು ಏಳುಬೀಳುಗಳನ್ನು ಕಂಡಿದ್ದು, ತೆರೆಕಂಡ ಚಿತ್ರಗಳೆಲ್ಲವು ನೆಲಕಚ್ಚಿ ಹೋಗುತ್ತಿವೆ. ಆದರೆ ಈ ಬಾಲಿವುಡ್ ಜೇನಿನ ಕನ್ಯೆ ಮತ್ತೆ ಝೇಂಕರಿಸಿ ಬರುವಳು ಎಂಬುದು ಬಾಲಿವುಡ್ ಪ್ರಿಯರ ವಿಶ್ವಾಸ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಬಾಲಿವುಡ್, ರಾಣಿ ಮುಖರ್ಜಿ, ಶಾರುಕ್, ಪ್ರಶಸ್ತಿ