ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ತಾರಾ ಪರಿಚಯ » ನೃತ್ಯ, ಯೋಗ ಹೇಮಮಾಲಿನಿ ಫಿಟ್‌ನೆಸ್ ಗುಟ್ಟು!
ತಾರಾ ಪರಿಚಯ
Feedback Print Bookmark and Share
 
PTI
ಬಾಲಿವುಡ್‌ನ ಎವರ್‌ಗ್ರೀನ್ ಡ್ರೀಮ್‌ಗರ್ಲ್ ಹೇಮಮಾಲಿನಿಯ 60ರ ಹರೆಯದಲ್ಲೂ ಯುವಕರನ್ನು ಆಕರ್ಷಿಸುವ ದೇಹಸೌಂದರ್ಯಕ್ಕೆ ಕಾರಣ ಆಕೆಯ ನೃತ್ಯ ಹಾಗೂ ಯೋಗಾಭ್ಯಾಸವಂತೆ.

ಹೀಗೆ ಹೇಳಿದ್ದು ಸ್ವತಃ ಹೇಮಮಾಲಿನಿ. `ನನಗೆ ನೃತ್ಯ ಅಂದರೆ ತುಂಬ ಇಷ್ಟ. ಖಂಡಿತ ನೃತ್ಯವಿಲ್ಲದೆ ನಾನು ಬದುಕಲಾರೆ. ಅದಕ್ಕಾಗಿಯೇ ನಾನು ತಿಂಗಳಲ್ಲಿ ಎರಡರಿಂದ ಮೂರು ಶೋಗಳನ್ನು ನೀಡುತ್ತೇನೆ. ಪ್ರತಿ ಶೋನಲ್ಲೂ ನಾನು ಎರಡು ಗಂಟೆಗಳ ಕಾಲ ಎಡೆಬಿಡದೆ ವೇದಿಕೆಯಲ್ಲಿ ನರ್ತಿಸುತ್ತೇನೆ. ಪ್ರತಿ ಶೋಗೆ ಕೂಡಾ ಕಠಿಣ ಅಭ್ಯಾಸದ ಅಗತ್ಯವಿರುತ್ತದೆ. ಇದೇ ನನ್ನ ಫಿಟ್‌ನೆಸ್ ರಹಸ್ಯ' ಎನ್ನುತ್ತಾರೆ ಹೇಮಮಾಲಿನಿ.

`ಇದಲ್ಲದೆ ನಾನು ಪ್ರತಿದಿನ ನಾನು ಯೋಗಾಭ್ಯಾಸ ಹಾಗೂ ಕೆಲವು ವ್ಯಾಯಾಮಗಳನ್ನು ಮಾಡುತ್ತೇನೆ. ನಾವು ಬೇರೆಯದೇ ಆದ ಜೀವನ ಬಯಸುವಾಗ ಅದಕ್ಕೆ ತೆರನಾಗಿ ಇರಬೇಕಾಗುತ್ತದೆ. ಕೆಲವು ಆಸೆಗಳನ್ನು ತ್ಯಾಗ ಮಾಡವೇಕಾಗುತ್ತದೆ. ಜಿಲೇಬಿ, ಟಿಕ್ಕಿ ಇಷ್ಟ ಎಂದು ಅದನ್ನು ತಿನ್ನಬಾರದು. ಅದನ್ನು ನೋಡಿ ಸಂತಸ ಪಟ್ಟು ಸುಮ್ಮನಾಗಬೇಕು' ಎಂದು ನಗುತ್ತಾರೆ.

ಈ ನೃತ್ಯರಾಣಿ ಹೇಮಮಾಲಿನಿ ಸದ್ಯದಲ್ಲೇ `ಏಕ್ ರಾಣಿ ಐಸೀ ಭೀ ಥೀ' ಎಂಬ ಸಿನಿಮಾದಲ್ಲಿ ಗ್ವಾಲಿಯರ್‌ನ ರಾಣಿ ವಿಜಯರಾಜೇ ಸಿಂಧ್ಯಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಹೇಮಮಾಲಿನಿ, ಯೋಗ, ಫಿಟ್ನೆಸ್, ಏಕ್ ರಾಣಿ ಐಸೀ ಭೀ ಥೀ, ವಿಜಯರಾಜೇ ಸಿಂಧ್ಯ