ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ತಾರಾ ಪರಿಚಯ » ಬಾಲಿವುಡ್‌ನಲ್ಲಿ ಸಕ್ರಿಯನಾದ ಮಾಧವನ್
ತಾರಾ ಪರಿಚಯ
Feedback Print Bookmark and Share
 
ರೋಮಾಂಟಿಕ್ ನಟ ಎಂದೇ ಪ್ರಸಿದ್ಧನಾದ ಮಾಧವನ್‌ರ ಪೂರ್ತಿ ಹೆಸರು ಮಾಧವನ್ ರಂಗನಾಥನ್. 1970ರಲ್ಲಿ ಜಮ್ಶೆಡ್‌ಪುರದಲ್ಲಿ ಜನಿಸಿದ ಇವರು ಮದುವೆಯ ನಂತರ ಅಂದರೆ 29 ವಯಸ್ಸಿನಲ್ಲಿ ಸಿನೆಮಾ ರಂಗಕ್ಕೆ ಕಾಲಿಟ್ಟರು.

ನಟನೆಯಲ್ಲಿ ವಿಭಿನ್ನ ಶೈಲಿ ಹೊಂದಿರುವ ಮಾಧವನ್ ಹಲವಾರು ಫೀಲ್ಮ್‌ಫೇರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಹಿಂದಿಗಿಂತ ಮಾಧವನ್ ಹೆಚ್ಚು ಜನಪ್ರಿಯನಾದುದು ತಮಿಳು ಚಿತ್ರರಂಗದಲ್ಲಿ. 2000 'ಅಲೈಪಾಯುದೇ' ಎಂಬ ತಮಿಳು ಚಿತ್ರ ಸೂಪರ್ ಹಿಟ್, 2002 'ಕನ್ನಥಿಲ್ ಮುತ್ತಮಿಟ್ಟಲ್' ಹೀಗೆ ಹಲವಾರು ಚಿತ್ರಗಳು ಒಂದರ ಹಿಂದೆ ಇನ್ನೊಂದರಂತೆ ಯಶಸ್ಸನ್ನು ಕಂಡಿತ್ತು. ತಮಿಳು, ಕನ್ನಡ, ಹಿಂದಿ, ಇಂಗ್ಲಿಂಷ್ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ಅಭಿನಯಿಸಿದ ಖ್ಯಾತಿ ಮಾಧವನ್‌ಗೆ ಸಲ್ಲುತ್ತದೆ.

ಕನ್ನಡದಲ್ಲಿ ಅಭಿನಯಿಸಿದ ಮೊದಲ ಚಿತ್ರ 1999 ತೆರೆಕಂಡ 'ಶಾಂತಿ ಶಾಂತಿ ಶಾಂತಿ'. ಅದೇ ರೀತಿ ಹಿಂದಿಯಲ್ಲಿ 2001ರಲ್ಲಿ 'ರಹ್‌ನಾ ಹೈ ತೇರೆ ದಿಲ್ ಮೇ', 'ದಿಲ್ ವಿಲ್ ಪ್ಯಾರ್ ವ್ಯಾರ್'(2002), 'ರಾಮ್‌ಜೀ ಲಂಡನ್‌ವಾಲೇ'(2005), 'ಗುರು' ಮತ್ತು 'ದಿಲ್ಲಿ ಹೈಟ್ಸ್'(2006). 'ಮುಂಬೈ ಮೇರಿ ಜಾನ್'(2008). ಇದೀಗ ಬಾಲಿವುಡ್‌ನಲ್ಲಿ ಸಕ್ರಿಯವಾಗಿರುವ ಮಾಧವನ್ ತೆರೆಕಾಣಲಿರುವ ಮುಂದಿನ ಚಿತ್ರ '13ಬಿ'.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಬಾಲಿವುಡ್ನಲ್ಲಿ ಸಕ್ರಿಯನಾದ ಮಾಧವನ್