ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ತಾರಾ ಪರಿಚಯ » ಗ್ಲಾಮರಸ್ ಬೆಡಗಿ ತನುಶ್ರೀ ದತ್ತಾ...!
ತಾರಾ ಪರಿಚಯ
Feedback Print Bookmark and Share
 
2004ರ 'ಫೇಮಿನಾ ಮಿಸ್ ಇಂಡಿಯಾ ಯುನಿವರ್ಸ್' ವಿಜೇತಾ ಬಂಗಾಲಿ ಬೆಡಗಿ ತನುಶ್ರೀ ದತ್ತಾ ಮಾರ್ಚ್ 9, 1986ನೇ ಇಸವಿಯಲ್ಲಿ ಜಾರ್ಖಂಡ್‌ನ ಜಮೆಶೆಡ್‌ಪುರದಲ್ಲಿ ಜನಿಸಿದಳು. 2005ರಲ್ಲಿ ಆದಿತ್ಯ ದತ್ತ್ ನಿರ್ದೇಶನದ 'ಆಶಿಕ್ ಬನಾಯಾ ಆಪ್‌ನೇ' ಚಿತ್ರದ ಮ‌ೂಲಕ ತನುಶ್ರೀ ಬಾಲಿವುಡ್‌ಗೆ ಅದ್ಭುತ ರೀತಿಯಲ್ಲಿಯೇ ಎಂಟ್ರಿ ಮಾಡಿದಳು. ಚಿತ್ರದಲ್ಲಿ ಇಮ್ರಾನ್ ಹಷ್ಮಿ ಜೊತೆ ಸೆಕ್ಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಳು.

ಗ್ಲಾಮರಸ್ ಹಾಗೂ ಆಕರ್ಷಕ ಮೈಬಣ್ಣ ಹೊಂದಿರುವ ಮಾದಕ ಬೆಡಗಿ ಪ್ರಥಮ ಚಿತ್ರದಲ್ಲಿಯೇ ಮಿಂಚಿದ್ದಳು. ಆದರೆ ಇದು ಹೆಚ್ಚು ಹೊತ್ತು ಸಾಗಲಿಲ್ಲ. ಎರಡನೇ ಚಿತ್ರ 'ಚಾಕೋಲೇಟ್‌'ನಲ್ಲಿ ಇರ್ಫಾನ್ ಖಾನ್, ಅರ್ಶದ್ ವಾರ್‌ಸಿ ನಟರ ಜತೆ ಅಭಿನಯಿಸಲು ಅವಕಾಶ ದೊರೆತರೂ ಚಿತ್ರ ಯಶಸ್ಸು ಕಾಣಲಿಲ್ಲ.

ಇದಾದ ನಂತರ ಒಂದರ ನಂತರ ಒಂದರಂತೇ ಚಿತ್ರಗಳೆಲ್ಲವೂ ಫ್ಲಾಪ್ ಆದವು. ಇದರಿಂದ ಚಿತ್ರ ನಿರ್ಮಾಪಕರು ಮುಖ ತಿರುಗಿಸಿಕೊಂಡರು.

2006-07 ಸಾಲಿನಲ್ಲಿ ತನುಶ್ರೀಗೆ '36 ಚೈನಾ ಟೌನ್', 'ಬಾಗಾಮ್‌ಬಾಗ್', 'ರಿಸ್ಕ್'ಗಳಂತಹ ಚಿತ್ರಗಳಲ್ಲಿ ಸಣ್ಣ ಸಣ್ಣ ಪಾತ್ರಗಳು ಸಿಕ್ಕಿದವು. 'ರಾಕಿಬ್‌'ನಲ್ಲಿ ಉತ್ತಮವಾಗಿ ಅಭಿನಯಿಸಿದರೂ ಸ್ಟಾರ್ ನಟ ಇಲ್ಲದೇ ಇದ್ದ ಕಾರಣ ಚಿತ್ರ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣಲಿಲ್ಲ. ನಂತರ ನಿರ್ದೇಶಕ ಪ್ರಿಯದರ್ಶನ್‌ರ 'ಧೋಲ್' ಚಿತ್ರದಲ್ಲಿ ಹಾಸ್ಯ ಪಾತ್ರದಲ್ಲಿ ಕಾಣಿಸಿಕೊಂಡಳು.

ವಿವಾದಗಳು ಬೆನ್ನುಹತ್ತಿಕೊಂಡಿರುವ ತನುಶ್ರೀಯ ವೈಯಕ್ತಿಕ ಜೀವನ ಅಷ್ಟು ಸುಖಕರವಾಗಿಲ್ಲ. ಇದೇ ಕಾರಣದಿಂದಲೇ ಹೆಚ್ಚಿನೆಲ್ಲಾ ಚಿತ್ರಗಳು ನೆಲಕಚ್ಚಿ ಹೋದವು. ತನುಶ್ರೀ ಅಭಿನಯದ ಕೊನೆಯ ಚಿತ್ರ 2008ರಲ್ಲಿ ತೆರೆಕಂಡ 'ಸಾಸ್ ಬಹೂ ಔರ್ ಸೆನ್ಸೆಕ್ಸ್'.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ತಾರಾ ಪರಿಚಯ, ಬಾಲಿವುಡ್, ತನುಶ್ರೀ ದತ್ತಾ, ಮಿಸ್ ಇಂಡಿಯಾ