ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಕಿರುತೆರೆ » ಕರೀನಾಗೆ ಸೈಫ್ ಮೇಲೆ ನಂಬಿಕೆಯಿಲ್ಲ! (Karishma Kapoor | Kareena Kapoor | Dus Ka Dum | Saif Ali Khan | Salman Khan)
ಕಿರುತೆರೆ
Feedback Print Bookmark and Share
 
IFM
ಈವರೆಗೆ 'ಸೈಫ್ ಅಪ್ಪಟ ಅಪರಂಜಿ.. ಗುಲಗುಂಜಿ' ಅಂದೆಲ್ಲಾ ರಂಜಿಸುತ್ತಲೇ ಬಂದಿದ್ದ ಕಪೂರ್ ಕನ್ಯಾಮಣಿ ಕರೀನಾ ಇದೀಗ ತನ್ನ ಹೃದಯಾಂತರಾಳದಿಂದ ಮುತ್ತಿನಂಥ ಮಾತೊಂದನ್ನು ಹೊರಹಾಕಿದ್ದಾಳೆ. ''ಸೈಫ್ ನನ್ನ ಹೃದಯದರಸನೇನೋ ನಿಜ, ಆದರೆ ಆತನನ್ನು ನಾನು ಪೂರ್ಣ ಪ್ರಮಾಣದಲ್ಲಿ ನಂಬುವುದಿಲ್ಲ. ಅವನ ಬಗ್ಗೆ ನನಗಿನ್ನೂ ಸಂಶಯಗಳು ಇದ್ದೇ ಇವೆ!''

ಅಬ್ಬಬ್ಬಾ ಕರೀನೆ..! ಇಂಥ ಮುತ್ತಿನಂಥ ಮಾತನ್ನು ಆಕೆ ಹೊರಹಾಕಿದ್ದು ಮೊನ್ನೆ ಮೊನ್ನೆ ಸಲ್ಮಾನ್ ಖಾನ್ ವಿರಚಿತ 'ದಸ್ ಕಾ ದಮ್' ಎಂಬ ರಿಯಾಲಿಟಿ ಶೋನಲ್ಲಿ.

ಕಾರ್ಯಕ್ರಮದ ಎರಡನೇ ಅವತರಣಿಕೆಯ ಮೊದಲ ಎಪಿಸೋಡ್‌ನಲ್ಲಿ ಸಲ್ಮಾನ್ ಖಾನ್ ತನ್ನ ಗೆಳತಿಯರಾಗಿದ್ದ ಕರೀನಾ ಹಾಗೂ ಕರೀಷ್ಮಾ ಎಂಬ ಕಪೂರ್ ಸಹೋದರಿಯರನ್ನು ಆಹ್ವಾನಿಸುವ ಮೂಲ ಭರ್ಜರಿ ಪ್ರಚಾರ ನಿರೀಕ್ಷೆ ಎರಡನ್ನೂ ಹುಟ್ಟುಹಾಕಿದ್ದರು. ರಿಯಾಲಿಟಿ ಶೋಗಳಿಗೆ ಅಬ್ಬಬ್ಬಾ ಅಂದರೆ ಬೇಕಾದುದೂ ಇಷ್ಟೇ. ಅದೆಲ್ಲಾ ಒತ್ತಟ್ಟಿಗಿಟ್ಟು, ಸಲ್ಮಾನ್ ಆ ಕಾರ್ಯಕ್ರಮದಲ್ಲಿ ಕರೀನೆ, ಕರೀಶ್ಮಾರ ದಮ್ ಪರೀಕ್ಷಿಸಲು ಹೊರಟೇ ಬಿಟ್ಟ.

ಕಾರ್ಯಕ್ರಮದಲ್ಲಿ ಸಲ್ಮಾನ್ ಪ್ರಶ್ನೆ ಹೀಗಿತ್ತು. 'ಹುಡುಗಿಯರು ತಮ್ಮ ಬಾಯ್‌ಫ್ರೆಂಡ್‌ಗಳ ಮೊಬೈಲ್ ಫೋನ್‌ನಲ್ಲಿ ಮೆಸೇಜ್, ಕಾಲ್ ಹಿಸ್ಟ್ರಿಗಳನ್ನು ತಡಕಾಡುವುದು ಯಾಕೆ?'

ಕರೀಷ್ಮಾ ಪಾಲಿಗೆ ಈ ಪ್ರಶ್ನೆಯ ಬಾಣ ಬಂದಂತೆಯೇ ಆಕೆ ಸರಿಯಾದ ಉತ್ತರವೇನನ್ನೂ ನೀಡಿದಿದ್ದರೂ, ''ನಾನು ನನ್ನ ಗಂಡನ ಫೋನ್ ಚೆಕ್ ಮಾಡುತ್ತೇನೆ. ಅಲ್ಲದೆ, ಎಲ್ಲ ಹೆಂಡತಿಯರೂ ತಮ್ಮ ತಮ್ಮ ಗಂಡಂದಿರ ಫೋನ್ ಚೆಕ್ ಮಾಡಿ ಎಂದೇ ನಾನು ಹೇಳುತ್ತೇನೆ'' ಎಂದು ಸಾರಿಯೇ ಬಿಟ್ಟಳು. ಈಗ ಸರದಿ ಕರೀನಾಳದ್ದು. ಏನಿದ್ರೂ ಕರೀನೆ ಸ್ವಲ್ಪ ಡಿಫರೆಂಟಲ್ವಾ? ಗಡದ್ದಾಗಿಯೇ ಉತ್ತರ ಕೊಟ್ಟಳು.

IFM
''ಹುಡುಗಿಯರಲ್ಲಿ ಕಾಡುವ ಅಭದ್ರತಾ ಭಾವವೇ ಅವರನ್ನು ಹೀಗೆ ಮಾಡಲು ಅರ್ಥಾತ್ ಗಂಡನ ಅಥವಾ ಬಾಯ್‌ಫ್ರೆಂಡಿನ ಮೊಬೈಲ್ ಚೆಕ್ ಮಾಡಲು ಪ್ರೇರೇಪಿಸುತ್ತದೆ'' ಎಂದು ಪಸಂದಾದ ಉತ್ತರ ಕರೀನಾಳದ್ದು.

ಆಗ ಪಕ್ಕದಲ್ಲಿದ್ದ ಅಕ್ಕ ಕರೀಷ್ಮಾ, ತಂಗಿಯನ್ನು ನೋಡಿ, ''ಕರೀನಾ ಯಾವಾಗಲೂ ಸೈಫ್ ಮೊಬೈಲ್ ಚೆಕ್ ಮಾಡುತ್ತಾಳೆ. ಅಷ್ಟೇ ಅಲ್ಲ. ಯಾರದಾದರೂ ಫೋನ್ ಬಂದರೆ, ವಿಚಿತ್ರದನಿಯಲ್ಲಿ ಉತ್ತರಿಸಿ ಪರೀಕ್ಷೆಯೂ ಮಾಡುತ್ತಾಳೆ'' ಅಂತ ಸತ್ಯ ಬಹಿರಂಗ ಪಡಿಸಿದಳು ಕರೀಷ್ಮಾ. ಇಂತಹ ಖಾಸಗಿ ಸಂಗತಿ ಹೊರಬೀಳುತ್ತಿದ್ದಂತೆ ಕೊಂಚ ನಾಚಿಕೆಪಟ್ಟುಕೊಂಡ ಕರೀನಾ, ತುಸು ಭಂಡ ಧೈರ್ಯದಿಂದಲೇ, ''ಸೈಫ್ ಚೆಂದನೆಯ ಹುಡುಗಿಯರ ಜತೆಗೆ ಯಾವತ್ತೂ ಕೆಲಸ ಮಾಡುತ್ತಿರುತ್ತಾನೆ. ಸತ್ಯ ಯಾರಿಗ್ಗೊತ್ತು...'' ಅಂತ ಹುಬ್ಬು ಹಾರಿಸಿದಳು.

ಜತೆಗೆ, ''ನಾನು ಈ ಸೆಲ್‌ಫೋನ್ ಚೆಕ್ ಮಾಡುವ ಅಭ್ಯಾಸ ಕಲಿತಿದ್ದು ನನ್ನ ಅಕ್ಕ ಕರೀಷ್ಮಾ'' ಬಳಿ ಅಂದು ಬಿಟ್ಟಳು. ''ಆಕೆ ಯಾವಾಗಲೂ ಆಕೆಯ ಗಂಡನ ಫೋನ್ ಚೆಕ್ ಮಾಡುತ್ತಾಳೆ. ನನಗೂ ಈ ಉಪದೇಶ ಮಾಡಿದಳು. ನಾನು ಕಲಿತೆ'' ಎಂದಳು. ಜತೆಗೆ, ''ನಾನು ಸೈಫ್‍‌ನನ್ನು ಶೇ.100ರಷ್ಟು ನಂಬುಕೆಯಿಂದ ಇನ್ನೂ ಸ್ವೀಕರಿಸಿಲ್ಲ'' ಅಂದುಬಿಟ್ಟಳು! ಅಬ್ಬಾ...

ಅದೇನೇ ಇರಲಿ. ನಟೀಮಣಿಯರ ಉತ್ತರ ಕೇಳಿ ಗೊಳ್ಳನೆ ನಗು ಸಭಾಂಗಣ ತುಂಬಿತ್ತು. ಅಷ್ಟರಲ್ಲಿ ಇದೇ ಪ್ರಶ್ನೆಗೆ ಉತ್ತರಿಸುವ ಸರದಿ ಬಾಲಿವುಡ್ ಬ್ಯಾಡ್‌ಬಾಯ್ ನಾಮಾಂಕಿತ ಸಲ್ಮಾನ್ ಖಾನ್‌ನದ್ದು. ''ನಾನು ಯಾವತ್ತೂ ನನ್ನ ಗರ್ಲ್‌ಫ್ರೆಂಡ್‌ ಮೊಬೈಲ್ ಚೆಕ್ ಮಾಡಿಲ್ಲ. ಅದನ್ನು ಒಮ್ಮೆಯೂ ಮುಟ್ಟಿಯೂ ನೋಡಿಲ್ಲ. ಆದರೆ, ಆಕೆ ಮಾತ್ರ ನನ್ನ ಮೊಬೈಲ್ ಚೆಕ್ ಮಾಡುತ್ತಿರುತ್ತಾಳೆಂದು ನನಗೆ ಗೊತ್ತು!..'' ಎಂದುಬಿಟ್ಟ ಸಲ್ಲೂ ಭಯ್ಯಾ. ಆದರೆ, ಎಷ್ಟು 'ಆಕೆ'ಯರಿದ್ದಾರೆ, ಹಾಗೂ ಯಾವ 'ಆಕೆ' ಎಂಬ ಸತ್ಯ ಬಿಚ್ಚಿಡಲಿಲ್ಲ.

ಕೊನೆಗೆ ಸಲ್ಮಾನ್ ಹೇಳಿದ್ದು ಹೀಗೆ, ''ಬರೀ ಹುಡುಗಿಯರು ತಮ್ಮ ಗಂಡನ/ಬಾಯ್‌ಫ್ರೆಂಡಿನ ಮೊಬೈಲ್ ಚೆಕ್ ಮಾಡುವುದಲ್ಲ. ಹುಡುಗರೂ ಚೆಕ್ ಮಾಡುತ್ತಾರೆ. ಆದರೆ ಇದು ಹುಡುಗಿಯರಂತೆ ಅಭದ್ರತೆ ಭಾವ ಅಥವಾ ಹೊಟ್ಟೆಯುರಿಯಿಂದವಂತೂ ಖಂಡಿತ ಅಲ್ಲ. ಪುರುಷರಾದ ನಾವು ನಮ್ಮ ಹೆಂಡತಿಯರ ಮೇಲೆ, ಗರ್ಲ್‌ಫ್ರೆಂಡಿನ ಮೇಲೆ ವಿಶೇಷ ಪ್ರೀತಿ, ಆದರ, ನಂಬುಗೆ ಹೊಂದಿರುತ್ತೇವೆ. ಎಂದೂ ಅನುಮಾನಿಸುವುದಿಲ್ಲ'' ಎಂದ ಸಲ್ಮಾನ್ ಖಾನ್, ''ನಮ್ಮ ಬಾಲಿವುಡ್ಡಿನ ನಟೀಮಣಿಯರೇ (ಕರೀನಾ, ಕರೀಷ್ಮಾ) ಹುಡುಗಿಯರ ಹೊಟ್ಟೆಯುರಿ, ಅಭದ್ರತೆಗಳಿಗೆ ಉದಾಹರಣೆ'' ಅಂತ ಪ್ರೇಕ್ಷಕರೆದುರು ಹೇಳಿಯೇಬಿಟ್ಟ ಸಲ್ಲು.

ಏನೋಪ್ಪಾ... ಪುರುಷರೋ, ಮಹಿಳೆಯರೋ... ಎಲ್ಲರ ಮನೆ ದೋಸೆನೂ ತೂತೇ ಅಂತ ಹಿರಿಯರು ಹೇಳಿದ್ದಾರೆ ಬಿಡಿ..!
IFM
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕರೀಷ್ಮಾ ಕಪೂರ್, ಕರೀನಾ ಕಪೂರ್, ಸೈಫ್ ಅಲಿ ಖಾನ್, ಸಲ್ಮಾನ್ ಖಾನ್, ದಸ್ ಕಾ ದಮ್