ಐಸಿಸಿಟ್ವೆಂಟಿ20 ವಿಶ್ವಕಪ್ ಪಂದ್ಯಾವಳಿಯನ್ನು ಪ್ರಸಾರ ಮಾಡುತ್ತಿರುವ ಸ್ಟಾರ್ ಕ್ರಿಕೆಟ್ ಚಾನೆಲ್ ವೀಕ್ಷಕರ ಸರಾಸರಿಯಲ್ಲಿ ಇಲ್ಲಿಯವರೆಗೆ ಶೇ.3.9 ರಷ್ಟು ಏರಿಕೆಯಾಗಿದೆ. ಪಂದ್ಯಾವಳಿಯ ಮೂರನೇ ಪಂದ್ಯ ಭಾರತ ಮತ್ತು ಬಾಂಗ್ಲಾದೇಶದ ವಿರುದ್ಧ ನಡೆದ ಪಂದ್ಯವನ್ನು 13 ಮಿಲಿಯನ್‌ಕ್ಕಿಂತಲೂ ಹೆಚ್ಚು ಜನರು ವೀಕ್ಷಿಸಿರುವುದು ಕೂಡಾ ಇಲ್ಲಿಯವರೆಗಿನ ದಾಖಲೆಯಾಗಿದೆ.
ಕಳೆದ 2007ರಲ್ಲಿ ನಡೆದ ಐಸಿಸಿ ಟ್ವೆಂಟಿ20 ವಿಶ್ವಕಪ್ ಪಂದ್ಯಾವಳಿಯ 24 ಪಂದ್ಯಗಳನ್ನು ಅತಿ ಹೆಚ್ಚಿನ ಪ್ರೇಕ್ಷಕರು ವೀಕ್ಷಿಸಿ ಶೇ.3.9 ರಷ್ಟು ರೇಟಿಂಗ್ ಪಡೆದಿತ್ತು ಈ ಪಂದ್ಯಾವಳಿಯಲ್ಲಿ ಭಾರತ ತಂಡ ಚಾಂಪಿಯನ್‌ಷಿಪ್ ಕಿರೀಟವನ್ನು ಮುಡಿಗೇರಿಸಿಕೊಂಡಿತ್ತು. ಎರಡನೇ ಆವೃತ್ತಿಯ ಟ್ವೆಂಟಿ20 ವಿಶ್ವಕಪ್ ಪಂದ್ಯಾವಳಿ ಮುಂದುವರಿದಿದೆ ಎಂದು ಟೆಲಿವಿಜನ್ ರೇಟಿಂಗ್ ಏಜೆನ್ಸಿ ಆಡಿಯನ್ಸ್ ಮೇಜರ್‌ಮೆಂಟ್ ಆಂಡ್ ಆನಾಲ್ಯಾಟಿಕ್ಸ್ ಲಿಮಿಟೆಡ್ ಬಿಡುಗಡೆ ಮಾಡಿದ ಅಂಕಿ ಅಂಶಗಳಲ್ಲಿ ತಿಳಿಸಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಾವಳಿಯ ಎರಡನೇ ಆವೃತ್ತಿಯಲ್ಲಿ ( 4-7 ಮತ್ತು 8ಗಂಟೆಯಿಂದ ಮಧ್ಯರಾತ್ರಿಯವರೆಗೆ) ಪ್ರಮುಖ ತಂಡಗಳ ಪಂದ್ಯಾವಳಿಯನ್ನು ವೀಕ್ಷಿಸಿದ ಸರಾಸರಿ ರೇಟಿಂಗ್‌ಗಿಂತಲೂ 2007ರಲ್ಲಿ ನಡೆದ ಐಪಿಎಲ್ ವೀಕ್ಷಿಸಿದ ಪ್ರೇಕ್ಷಕರ ಸರಾಸರಿ ಹೆಚ್ಚಳವಾಗಿದೆ.
ಇಲ್ಲಿಯವರೆಗೆ ನಡೆದ ಎರಡು ಟ್ವೆಂಟಿ20 ವಿಶ್ವಕಪ್ ಪಂದ್ಯಾವಳಿಯ 30 ಪಂದ್ಯಗಳಲ್ಲಿ ಭಾರತ ಮತ್ತು ಬಾಂಗ್ಲಾದೇಶದ ವಿರುದ್ಧ ನಡೆದ ಪಂದ್ಯವನ್ನು ವೀಕ್ಷಿಸಿರುವುದು ಎರಡನೇ ದಾಖಲೆಯಾಗಿದೆ. 2007ರಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ವಿರುದ್ಧದ ಫೈನಲ್ ಪಂದ್ಯವನ್ನು 14.4 ಮಿಲಿಯನ್‌ಗಿಂತಲೂ ಹೆಚ್ಚಿನ ಪ್ರೇಕ್ಷಕರು ವೀಕ್ಷಿಸಿ ಶೇ.6 ರಷ್ಟು ರೇಟಿಂಗ್ ಬಂದಿರುವುದು ಮೊದಲ ದಾಖಲೆಯಾಗಿದೆ