ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಕಿರುತೆರೆ » ನನ್ನಂತೆಯೇ ಇರುವ ಕರೀನಾ ನಂಗಿಷ್ಟ: ರವೀನಾ ಟಂಡನ್ (Raveena Tandon | Mohra | Andaz Apna Apna | Anil Thadani | Miyan)
ಕಿರುತೆರೆ
Feedback Print Bookmark and Share
 
Raveena Tandon
IFM
ಬಾಯಿಬಡುಕಿ ತಾರೆ ಎಂದೇ ಜನಪ್ರಿಯಳಾಗಿದ್ದ ರಾಷ್ಟ್ರಪ್ರಶಸ್ತಿ ವಿಜೇತ ನಟಿ ರವೀನಾ ಟಂಡನ್ ಹಿರಿತೆರೆಯಿಂದ ಹಿಂದಿ ಸರಿದು ವರ್ಷಗಳೇ ಉರುಳಿವೆ. ಕತ್ರೀನಾ, ಕರೀನಾ, ದೀಪಿಕಾ, ಪ್ರಿಯಾಂಕಾರ ಅಲೆಯಲ್ಲಿ ರವೀನಾ ಎಲ್ಲಿಗೆ ನೆನಪಿಗೆ ಬಂದಾಳು, ಹೇಳಿ. ಆದರೆ, ಅಂದೊಂದು ಕಾಲದಲ್ಲಿ ಬೋಲ್ಡ್ ಅಂಡ್ ಬ್ಯೂಟಿಫುಲ್ ಆಗಿ ಬಾಲಿವುಡ್ಡಿನಲ್ಲಿ ಮೊಹ್ರಾ, ಅಂದಾಜ್ ಅಪ್ನಾ ಅಪ್ನಾ ಮತ್ತಿತರ ಚಿತ್ರಗಳ ಮೂಲಕ ಮಿಂಚಿದ ತಾರೆ ರವೀನಾ ಟಂಡನ್ ಎಂಬುದರಲ್ಲಿ ಎರಡು ಮಾತಿಲ್ಲ.

2004ರಲ್ಲಿ ಚಿತ್ರ ವಿತರಕ ಅನಿಲ್ ತದಾನಿ ಜತೆಗೆ ಮದುವೆಯಾದ ಮೇಲೆ ಎರಡು ಮಕ್ಕಳಿಗೆ ತಾಯಿಯಾದ ರವೀನಾ ಈಗ ರಿಯಾಲಿಟಿ ಶೋಗಳಲ್ಲಿ ಕಿರುತೆರೆಯಲ್ಲಿ ಬರುತ್ತಿದ್ದಾಳೆ. ಈಗಾಗಲೇ ಕಳೆದ ವರ್ಷ ಚಕ್ದೇ ಬಚ್ನೇ ಎಂಬ ಮಕ್ಕಳ ನೃತ್ಯ ಹಾಗೂ ಹಾಡಿನ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದ ರವೀನಾ ಈಗ ಮತ್ತೊಂದು ಮಕ್ಕಳ ಕಾಮಿಡಿ ರಿಯಾಲಿಟಿ ಶೋ ಮಿಯಾನ್- ಭಾಗ 2ರ ಮೂಲಕ ಮಕ್ಕಳನ್ನು ಪ್ರತಿಭೆಯನ್ನು ಅಳೆಯಲು ಬರಲಿದ್ದಾಳೆ.

ಸಿಂಗಾಪುರದಲ್ಲಿ ರಜೆಯ ಮೋಜಿನಲ್ಲಿ ಹಿತವಾಗಿ ಪತಿಯ ಜತೆ ಕಾಲ ಕಳೆಯುತ್ತಿರುವ ರವೀನಾ ಈ ಬಗ್ಗೆ ದೂರವಾಣಿಯಲ್ಲಿ ಮಾತನಾಡುತ್ತಾ, ಈಗಿನ ಬಾಲಿವುಡ್ ನಟಿಯರ ಪೈಕಿ ನನಗೆ ಕರೀನಾ ಅಂದರೆ ತುಂಬ ಇಷ್ಟ ಎಂದು ಮನಬಿಚ್ಚಿಕೊಂಡರು.

ಹೊಸ ಮುಖಗಳ ಪೈಕಿ ನನಗೆ ಅತ್ಯಂತ ಆಕರ್ಷಣೀಯವೆನಿಸುವುದು ಕರೀನಾ. ಕರೀನಾಳ ಬಹುತೇಕ ವರ್ಚಸ್ಸು ನನಗ್ಯಾಕೋ ತುಂಬ ಆಪ್ತವೆನಿಸುತ್ತದೆ. ಯಾಕೆಂದರೆ ಆಕೆ ತುಂಬಾ ಸ್ಟ್ರಾಂಗ್, ಹೊಳೆಯುವ ಲವಲವಿಕೆಯ ಹಾಗೂ ಭಿನ್ನವಾದ ನಟಿ. ಜತೆಗೆ ಆಕೆ ಸ್ವಲ್ಪ ನನ್ನಂತೆಯೇ ಇದ್ದಾಳೆ. ಅಂದರೆ ಆಕೆ ನೋಡುವುದಕ್ಕೆ ನನ್ನಂತೆ ಇಲ್ಲದಿದ್ದರೂ, ಚಿತ್ರಗಳಲ್ಲಿ ಆಕೆಯ ಅಭಿನಯ ನೋಡಿದರೆ ನನ್ನದೇ ಅಭಿನಯದ ಕೆಲವು ತುಣುಕುಗಳನ್ನು ನೋಡಿದಂತಾಗುತ್ತದೆ.

ಈಗ ತುಂಬ ಅಷ್ಟಾಗಿ ಉದ್ದವಿಲ್ಲದ ನಟಿಯರೇ ಬಾಲಿವುಡ್ಡಿನಲ್ಲಿ ಹೆಚ್ಚಾಗುತ್ತಿದ್ದಾರೆ. ನನಗೆ ತುಂಬ ಉದ್ದದ ಹುಡುಗಿಯರೆಂದರೆ ಇಷ್ಟ. ಕರೀನಾ ಉದ್ದಕ್ಕಿದ್ದಾಳೆ. ನಟಿ ಎಂದರೆ ಕರೀನಾರ ಹಾಗಿರಬೇಕು ಎಂದರು.

Raveena Tandon
IFM
1991ರಲ್ಲಿ ಪತ್ಥರ್ ಕೇ ಫೂಲ್ ಚಿತ್ರದ ಮೂಲಕ ಬಾಲಿವುಡ್ಡಿಗೆ ಪಾದಾರ್ಪಣೆ ಮಾಡಿದ ರವೀನಾ, ಆಗಿನ ಕಾಲದ ಅತ್ಯಂತ ಮೋಹಕ ನಟಿಯರಲ್ಲಿ ಒಬ್ಬರಾಗಿದ್ದರು. ಆದರೆ 2004ರಲ್ಲಿ ಅನಿಲ್‌ರನ್ನು ಮದುವೆಯಾದ ಮೇಲೆ ಸಂಪೂರ್ಣವಾಗಿ ಕುಟುಂಬದ ಮೇಲೆಯೇ ಹೆಚ್ಚಾಗಿ ಗಮನ ಕೊಡಲು ಆರಂಭಿಸಿ ಇದೀಗ ನಟನೆಯಿಂದ ದೂರ ಉಳಿದಿದ್ದಾರೆ. ನಾಲ್ಕರ ಹರೆಯದ ರಾಶಾ ಹಾಗೂ ಎರಡರ ಹರೆಯದ ರಣ್‌ಬೀರ್ ಎಂಬ ಇಬ್ಬರು ಮಕ್ಕಳ ತಾಯಿ ರವೀನಾ, ಮಕ್ಕಳ ಕಾರ್ಯ್ರಮಗಳಲ್ಲಿಯೇ ಕಾಣಿಸಿಕೊಳ್ಳಲು ಇಷ್ಟಪಡುತ್ತಾರೆ.

ನನಗೆ ಮಕ್ಕಳ ಕಾರ್ಯಕ್ರಮಗಳಲ್ಲಿ ಕಾಣಿಸುವುದೆಂದರೆ ತುಂಬಾ ಇಷ್ಟ. ಅದು ಯಾವಾಗಲು ಸಂದಿಗ್ಧತೆಯನ್ನು ಹುಟ್ಟುಹಾಕುವುದಿಲ್ಲ. ಜತೆಗೆ, ಒಂದು ಮುಗ್ಧವಾದ ಪ್ರಪಂಚ ಅದು. ಅಲ್ಲಿ ವಿವಾದಗಳಿರುವುದಿಲ್ಲ. ನನಗೆ ಯಾರ ಹೃದಯಗಳನ್ನೂ ಒಡೆಯಲು ಇಷ್ಟವಿಲ್ಲ. ಚೆಂದಕ್ಕೆ ಕಾರ್ಯಕ್ರಮದಲ್ಲಿ ಚೈತನ್ಯ ನೀಡಿ ಮಕ್ಕಳ ಮುಂದಿನ ಕಲೆಗೆ ಒತ್ತು ನೀಡುವ ಅವಕಾಶ ಇಲ್ಲಿ ಸಿಗುತ್ತದೆ ಎನ್ನುತ್ತಾರೆ ಈ 34ರ ಹರೆಯದ ರವೀನಾ.

ಇವೆಲ್ಲವುಗಳ ಜತೆಗೇ ರವೀನಾ ಈಗ ಮತ್ತೆ ಚಿತ್ರದಲ್ಲಿ ನಟಿಸುತ್ತಿದ್ದಾಳೆ. ರೇವತಿ ವರ್ಮಾರ ಚಾಸ್ನಿ ಎಂಬ ಚಿತ್ರದಲ್ಲಿ ಜಯಾ ಬಚ್ಚನ್ ಜತೆಗೆ ಶೀಘ್ರವೇ ತೆರೆಯಲ್ಲಿ ಕಾಣಿಸಲಿದ್ದಾಳೆ.

ರವೀನಾ ಈಗಂತೂ ರಜೆಯ ಮಜಾದ ಮೂಡ್‌ನಲ್ಲೇ ಇದ್ದಾಳಂತೆ. ಹಾಂಗ್‌ಕಾಂಗ್‌ನ ಡಿಸ್ನಿಲ್ಯಾಂಡ್‌ಗೆ ಈಗಷ್ಟೇ ಹೋಗಿ ಬಂದೆವು. ನಾನು ಹಾಗೂ ಪತಿ ಅನಿಲ್ ಇಬ್ಬರೂ ಮಕ್ಕಳ ಹಿಂದೆ ಓಡುವುದೇ ಆಗಿದೆ. ಅವರಿಬ್ಬರೂ ತುಂಬ ತುಂಟರು. ಅವರ ಜತೆಗೆ ಕಾಲ ಕಳೆಯೋದೇ ಗೊತ್ತಾಗುವುದಿಲ್ಲ. ಹೀಗಾಗಿ ಯಾವುದೇ ಪರಿಶ್ರಮ ಪಡದೇ 2 ಪೌಂಡ್ ತೂಕ ಇಳಿಸಿಕೊಂಡಿದ್ದೇನೆ ಎನ್ನುತ್ತಾರೆ ರವೀನಾ.
Raveena Tandon
IFM
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರವೀನಾ ಟಂಡನ್, ಮೊಹ್ರಾ, ಅಂದಾಜ್ ಅಪ್ನಾ ಅಪ್ನಾ, ಅನಿಲ್ ತದಾನಿ, ಮಿಯಾನ್