ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಕಿರುತೆರೆ » ರಾಖಿ ಸ್ವಯಂವರದಲ್ಲಿ ಮದ್ವೆನೇ ಆಗಲ್ವಂತೆ?!! (Rakhi Ka Swayamwar | NDTV Imagine | Abhishek Awasthi | Rakhi Sawant)
ಕಿರುತೆರೆ
Feedback Print Bookmark and Share
 
Rakhi Sawant
IFM
ರಾಖಿ ಟಿವಿ ರಿಯಾಲಿಟಿ ಶೋನಲ್ಲೇ ಮದುವೆಯಾಗುತ್ತೇನೆಂದು ಹೊರಟಿದ್ದು ಈಗ ಹಳೇ ಕಥೆ. ಈ ಸಂದರ್ಭ ಒಂದು ಕುತೂಹಲಕಾರಿ ಹೊಸ ಕಥೆಯೂ ಹುಟ್ಟಿಕೊಂಡಿದೆ. ರಾಖಿ ತನ್ನನ್ನು ಮದ್ವೆಯಾಗಲು ಬಂದ ಸ್ಪರ್ಧಿಗಳನ್ನು ಮದ್ವೆನೇ ಆಗಲ್ವಂತೆ!!!

ನಂಬಿದರೆ ನಂಬಿ. ಬಿಟ್ಟರೆ ಬಿಡಿ. ಈಗ ಹೀಗೊಂದು ಗುಲ್ಲು ಹಬ್ಬಿದೆ. ಅದಕ್ಕೆ ಪೂರಕವಾಗಿ ಇತ್ತೀಚೆಗೆ ನ್ಯೂಸ್24 ಎಂಬ ಚಾನಲ್ ಕೂಡಾ ಸ್ಟಿಂಗ್ ಆಪರೇಶನ್ (ಕುಟುಕು ಕಾರ್ಯಾಚರಣೆ) ಮೂಲಕ ಹಿಡನ್ ಕ್ಯಾಮರಾಗಳನ್ನು ಬಳಸಿ ರಾಖಿಯ ಸ್ವಯಂವರ ಗುಟ್ಟನ್ನು ರಟ್ಟು ಮಾಡಿದೆ.

ರಾಖಿಯ ಸ್ವಯಂವರದಲ್ಲಿ ಮೊನ್ನೆ ಮೊನ್ನೆ ಜಮ್ಮು ಕಾಶ್ಮೀರದ ಪೋಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ 33ರ ಹರೆಯದ ಸ್ಪರ್ಧಿಗೆ ಮದುವೆಯಾಗಿ ಮೂರು ಮಕ್ಕಳ ತಂದೆಯೂ ಆಗಿದ್ದಾನೆ ಎಂಬ ವಿಷಯ ಹೊರಬಿತ್ತೋ ಅಲ್ಲಿಂದಲೇ ರಾಖಿಯ ಸ್ವಯಂವರ ವಿಚಿತ್ರ ತಿರುವು ಪಡೆಯಲು ಶುರುವಾಗಿತ್ತು. ಜತೆಗೆ ಕಾರ್ಯಕ್ರಮದಲ್ಲಿ ಆಗಬಹುದಾದ ಸಾಧ್ಯಾಸಾಧ್ಯತೆಗಳ ಗಂಭೀರತೆಯನ್ನೂ ಈ ಪ್ರಕರಣ ಹೊರಗೆಳೆದಿತ್ತು. ಈಗ ಇನ್ನಷ್ಟು ಸತ್ಯಗಳೂ ದೊಪದೊಪನೆ ಮಾಧ್ಯಮಗಳಿಂದ ಹೊರಬಿದ್ದಿದೆ.

ಮೂಲಗಳ ಪ್ರಕಾರ, ರಾಖಿ ಸ್ವಯಂವರದಲ್ಲಿ ಯಾವ ಸ್ಪರ್ಧಿಗಳೊಂದಿಗೂ ಮದುವೆಯೇ ಆಗುವುದಿಲ್ಲ! ಇದು ಕೇವಲ ನಾಟಕವಷ್ಟೆ. ತನ್ನ ಪ್ರಸಿದ್ಧಿಯ ಜತೆಜತೆಗೆ ಚಾನಲ್‌ನ ಟಿಆರ್‌ಪಿಯನ್ನು ಹೆಚ್ಚಿಸಿಕೊಳ್ಳುವ ತಂತ್ರವಿದು ಎಂದು ಹೇಳಲಾಗಿದೆ.

ರಾಖಿಯ ಪ್ರಸಿದ್ಧಿಯನ್ನು ಬಳಸಿಕೊಂಡು ಮೇಲೇರಲು ಬಯಸುವ ಗಂಡುಗಳನ್ನು ಮದುವೆಯಾಗಲು ರಾಖಿಗೇನು ಹುಚ್ಚು ಹಿಡಿದಿದೆಯೋ ಎಂದೂ ಹೇಳಲಾಗುತ್ತಿದೆ. ಒಂದು ಕಾಲದಲ್ಲಿ ರಾಖಿಯ ಬಾಯ್‌ಫ್ರೆಂಡ್ ಆಗಿದ್ದ ಅಭಿಷೇಕ್ ಅವಸ್ಥಿ ಕೂಡಾ ಇಂಥದ್ದೇ ಒಂದು ಝಿ ಚಾನಲ್‌ನಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋವೊಂದರ ಸ್ಪರ್ಧಿಯಾಗಿದ್ದ. ಆತನೊಂದಿಗೆ ಸಂಬಂಧ ಕಡಿದುಕೊಂಡ ಮೇಲೆ ರಾಖಿ, ಅಭಿಷೇಕ್ ಅವಸ್ತಿ ನನ್ನನ್ನು ಯೂಸ್ ಮಾಡಿಕೊಂಡಿದ್ದಾನೆ. ತಾನು ಮೇಲೇರಲು ನನ್ನನ್ನು ಬಳಸಿ ತಾನು ಭದ್ರವಾದ ಜಾಗಕ್ಕೆ ತಲುಪಿದ ಮೇಲೆ ನನ್ನನ್ನು ತನ್ನ ಜೀವನದಿಂದ ಹೊರಗೆಡವಿದ್ದಾನೆ. ಪ್ರೀತಿಯ ನಾಟಕವಾಡಿ ನನ್ನನ್ನು ಮೋಸ ಮಾಡಿದ್ದಾನೆ. ಆತನ ಜತೆಗಿನ ಸಂಬಂಧ ಕಡಿದ ಅನುಭವ ನನ್ನ ಜೀವನದಲ್ಲಿ ಅತ್ಯಂತ ಕೆಟ್ಟ ಗಳಿಗೆ ಎಂದು ರಾಖಿ ದೂರಿಕೊಂಡಿದ್ದಳು. ಹಾಗಾಗಿ ಆರ್ಥಿಕವಾಗಿ, ಅಥವಾ ಖ್ಯಾತಿಯನ್ನೇ ಅಳತೆಗೋಲಾಗಿ ಇಟ್ಟುಕೊಂಡು ಮೇಲೇರಲು ಬಯಸುವ ಸ್ಪರ್ಧಿಗಳನ್ನು ಖಂಡಿತವಾಗಿಯೂ ರಾಖಿ ಮದುವೆಯಾಗುವುದಿಲ್ಲ. ಅಂಥವರನ್ನು ಮದುವೆಯಾಗಲು ರಾಖಿಯೇನೂ ಮೂರ್ಖಳಲ್ಲ ಎಂಬ ಮಾತುಗಳೂ ಕೇಳಿ ಬಂದಿದೆ.

Rakhi Sawant
MOKSHA
ಜತೆಗೆ, ಈ ಇಡೀ ಕಾರ್ಯಕ್ರಮ ಮೊದಲೇ ಸಿದ್ಧವಾದ ರೂಪದಲ್ಲೇ ಹೋಗುತ್ತಿದೆ. ಸಿನಿಮೀಯ ಮಾದರಿಯಲ್ಲಿ ಪ್ರಸಾರವಾಗುತ್ತಿದ್ದು, ಎಲ್ಲವೂ ವ್ಯವಸ್ಥಿತವಾಗಿ ಮೊದಲೇ ಸ್ಕ್ರಿಪ್ಟ್ ಬರೆದು ತಯಾರಿಸಿದ ಕಾರ್ಯಕ್ರಮ. ಹಾಗಾಗಿ, ಇದು ನಾಟಕ. ಅಲ್ಲದೆ, ಅಂತಿಮವಾಗಿ ರಾಖಿ ಕಾ ಸ್ವಯಂವರ ಫೈನಲ್ ತಲುಪುತ್ತಿದ್ದಂತೆ ಖಂಡಿತವಾಗಿಯೂ ಡ್ರಾಮಾ ಕ್ವೀನ್ ಎಂದೇ ಖ್ಯಾತಿವೆತ್ತ ರಾಖಿ ಸಾವಂತ್, ತಾನು 'ಈ ಸ್ಪರ್ಧಿಗಳನ್ನು ಮದುವೆಯಾಗೋದಿಲ್ಲ' ಎನ್ನಲಿದ್ದಾಳೆ. ಇವೆಲ್ಲವೂ ಮೊದಲೇ ತಯಾರಾದ ವ್ಯೂಹ ಎಂದು ನ್ಯೂಸ್ 24 ಚಾನಲ್ ತನ್ನ ವರದಿಯಲ್ಲಿ ಬಹಿರಂಗಪಡಿಸಿದೆ.

ಇಷ್ಟೇ ಅಲ್ಲ, ಸ್ಪರ್ಧಿಗಳಿಗೂ ರಾಖಿ ಮದುವೆಯಾಗೋದಿಲ್ಲ ಅನ್ನೋದು ಗೊತ್ತಿದೆ. ಫೈನಲ್‌ನಲ್ಲಿ ಆಯೋಜಕರು ಅಂತಿಮವಾಗಿ ಆಯ್ಕೆಯಾಗುವ ಸ್ಪರ್ಧಿಗಳಿಗೆ ದೊಡ್ಡ ಮೊತ್ತದ ಹಣ ಅಥವಾ ರಾಖಿ ಎಂಬ ಎರಡು ಆಯ್ಕೆಯನ್ನು ಇಡಲಿದ್ದಾರೆ. ಈ ಆಯ್ಕೆಯಲ್ಲಿ ಗೆಲ್ಲುವ ಸ್ಪರ್ಧಿ ಹಣವನ್ನೇ ಆಯ್ಕೆ ಮಾಡುತ್ತಾನೆ ಎಂಬ ಸತ್ಯಗಳೂ ಹೊರಬಿದ್ದಿವೆ.

ಮೂಲಗಳ ಪ್ರಕಾರ ಇಂಥದ್ದೇ ಒಂದು ಕಾರ್ಯಕ್ರಮವನ್ನು ನಟ ಬಾಬಿ ಡಾರ್ಲಿಂಗ್‌ಗಾಗಿ ಇನ್ನೊಂದು ಟಿವಿ ಚಾನಲ್ ಸಿದ್ಧಪಡಿಸಿತ್ತು. ಆದರೆ ಅಂತಿಮ ಹಂತದಲ್ಲಿ ಆ ಕಾರ್ಯಕ್ರಮವನ್ನು ರದ್ದುಪಡಿಸಲಾಗಿತ್ತು.

ಹೆಸರು ಬಹಿರಂಗಪಡಿಸಲಿಚ್ಛಿಸದ ಹಿರಿಯ ಬಾಲಿವುಡ್ ನಟರೊಬ್ಬರು ಹೇಳುವ ಪ್ರಕಾರ, ಟಿಆರ್‌ಪಿಗಾಗಿ ಟಿವಿ ಮಾಧ್ಯಮಗಳು ಏನನ್ನೂ ಮಾಡುತ್ತವೆ. ಇದೂ ಅಂಥದ್ದೇ ಒಂದು ಕಾರ್ಯಕ್ರಮ ಅಷ್ಟೆ. ಇಲ್ಲಿ ಟಿವಿ ಚಾನಲ್‌ಗೆ ಲಾಭವಿರುವಷ್ಟೇ ರಾಖಿಗೂ ಇದೆ. ದೊಡ್ಡ ಮೊತ್ತದ ಹಣ ಮಾತ್ರವಲ್ಲ, ಉತ್ತಮ ವಸ್ತ್ರಾಭರಣಗಳಿಂದ ವಧುವಿನಂತೆ ಅಲಂಕರಿಸಿ ಅಷ್ಟು ಹೊತ್ತು ದಿನವೂ ಟಿವಿ ಚಾನಲ್‌ನಲ್ಲಿ ಕಾಣಿಸಿಕೊಳ್ಳುವುದು ಆಕೆಗೆ ಲಾಭವೇ ಸರಿ ಎನ್ನುತ್ತಾರೆ.

ನ್ಯೂಸ್ 24 ಟಿವಿ ಚಾನಲ್ ವರದಿಯ ಪ್ರಕಾರ, ರಾಖಿಗೆ ಮೊದಲೇ ಕಾಶ್ಮೀರಿ ಪೋಲೀಸ್ ಅಧಿಕಾರಿ ವಿವಾಹಿತ ಹಾಗೂ ಆತನಿಗೆ ಮೂರು ಮಕ್ಕಳಿದ್ದವು ಎಂದು ಗೊತ್ತಿತ್ತು ಎನ್ನಲಾಗಿದೆ. ಸ್ವಯಂವರ ಕಾರ್ಯಕ್ರಮದಿಂದ ಹೊರ ಬಿದ್ದ ಮೇಲೆ ಅಥೇರ್ ಪರ್ವೇಜ್ ಚಾನಲ್ ಜತೆಗೆ, ತಾನು ವಿವಾಹಿತನೆಂದು ರಾಖಿಗೆ ಮೊದಲೇ ಗೊತ್ತಿತ್ತು. ಆದರೂ ಕಾರ್ಯಕ್ರಮದ ಆಯೋಜಕರು ನನ್ನನ್ನು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಒಳಬಿಟ್ಟರು. ಆದರೆ ನಂತರ ಕಾರ್ಯಕ್ರಮದಿಂದ ನನ್ನನ್ನು ಹೊರಕ್ಕೆ ಕಳುಹಿಸಿದರು ಎಂದು ಹೇಳಿದ್ದಾರೆ ಎನ್ನಲಾಗಿದೆ.

ಇಷ್ಟೆಲ್ಲ ಪುಂಖಾನುಪುಂಖ ಅಂತೆ ಕಂತೆಗಳಿದ್ದರೂ, ಅಂತಿಮವಾಗಿ ಸ್ವಯಂವರದ ನಿಜವಾದ ಒಳಗುಟ್ಟು ಯಾರಿಗೂ ಗೊತ್ತಿಲ್ಲ. ಆದರೆ ಒಂದಂತೂ ಸತ್ಯ. ತನ್ನ ವಿಪರೀತ ನಡವಳಿಕೆಯಿಂದ ಸ್ವಯಂವರದ ನಾಟಕದಿಂದ ರಾಖಿಯಂತೂ ದಿನವೂ ಭರ್ಜರಿ ಪ್ರಚಾರ ಗಿಟ್ಟಿಸಿದ್ದಾಳೆ!
Rakhi Sawant
IFM
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರಾಖಿ ಸಾವಂತ್, ರಾಖಿ ಕಾ ಸ್ವಂಯಂವರ, ಎನ್ಡಿಟಿವಿ ಇಮ್ಯಾಜಿನ್