ಹೌದು. ಸ್ವಯಂವರದ ಮೂಲಕ ಮದುವೆಯಾಗುತ್ತೇನೆಂದು ಕೆನಡಾ ಮೂಲದ ಇಲೇಶ್ ಪರುಜನ್‌ವಾಲಾ ಜತೆ ಎಂಗೇಜ್‌ಮೆಂಟ್ ಮಾಡಿಕೊಂಡ ರಾಖಿ ಸಾವಂತ್‌ಗೆ ಈಗ ಒಂದು ಮಗುವೂ ಆಗಲಿದೆ. ರಾಖಿಯ ಈ ಮಗುವಿಗೆ ಅಪ್ಪ ಇಲೇಶ್!!!
ಆಶ್ಚರ್ಯವಾಯಿತೇ. ರಾಖಿ ಇಷ್ಟೊಂದು ಫಾಸ್ಟಾ... ಎಂದೆಲ್ಲಾ ಲೆಕ್ಕಾಚಾರದಲ್ಲಿ ತೊಡಗಬೇಡಿ. ವಿಷಯ ಇಷ್ಟೆ. ರಾಖಿ ಹಾಗೂ ಇಲೇಶ್ ಈಗ ಇನ್ನೊಂದು ಡ್ರಾಮಾ ಶುರು ಮಾಡಿದ್ದಾರೆ. ಅದೇ ಎನ್‌ಡಿಟಿವಿ ಇಮ್ಯಾಜಿನ್ ಚಾನಲ್‌ನಲ್ಲಿ. ಕಾರ್ಯಕ್ರಮದ ಹೆಸರು 'ಪತಿ, ಪತ್ನಿ ಔರ್ ವೋ'.
ಈ ಕಾರ್ಯಕ್ರಮದಲ್ಲಿ ರಾಖಿ ಹಾಗೂ ಇಲೇಶ್ ಅಲ್ಲದೆ ಇನ್ನೂ ನಾಲ್ಕು ಮಂದಿ ಟಿವಿ ಸೆಲೆಬ್ರಿಟಿ ಜೋಡಿಗಳೂ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಈ ಐದೂ ಮಂದಿ ತಮಗೆ ನೀಡಿದ ಮನೆಗಳಲ್ಲಿ ಮಗುವಿನೊಂದಿಗೆ ಒಂದು ತಿಂಗಳು ವಾಸವಾಗಿರಬೇಕು. ಥೇಟ್ ಅಪ್ಪ ಅಮ್ಮನ ಥರ. ಒಂದು ತಿಂಗಳ ಕಾಲ ವಾಸ ಮಾಡುವ ಮನೆಯಲ್ಲಿ 24 ಗಂಟೆಯೂ ಕ್ಯಾಮರಾ ಕೆಲಸ ಮಾಡುತ್ತಿರುತ್ತದೆ. ಅಪ್ಪ ಅಮ್ಮ ಮಗುವನ್ನು ಸರಿಯಾಗಿ ನೋಡಿಕೊಳ್ಳುತ್ತಾರೋ ಇಲ್ಲವೋ ಎಂಬುದೂ ರೆಕಾರ್ಡ್ ಆಗುತ್ತದಂತೆ.
IFM
ಹಾಗಾದರೆ ಮಗು ಎಲ್ಲಿಂದ ಅಂತೀರಾ? ವಿಷಯ ತುಂಬಾ ಸಿಂಪಲ್. ಅದೇನೆಂದರೆ ರಾಖಿ ಸಾವಂತ್ ಗರ್ಭಿಣಿಯಾಗುವ ಸನ್ನಿವೇಶವೂ ಚಿತ್ರೀಕರಿಸಲಾಗುತ್ತದೆ. ಆಕೆಯ ಹೊಟ್ಟೆಯನ್ನು ಥೇಟ್ ಗರ್ಭಿಣಿಯ ಹೊಟ್ಟೆಯಂತೆ ಮಾಡಿ ಚಿತ್ರೀಕರಣವೂ ನಡೆಯುತ್ತದೆ. ನಂತರ ಒಂದು ತಿಂಗಳ ಕಾಲ ಅವರ ಕೈಗೆ ಆಗಷ್ಟೇ ಹುಟ್ಟಿದ ಮಗುವನ್ನು ನೀಡಲಾಗುತ್ತದೆ. ಮಗುವಿಗೆ ಹಾಲುಣಿಸುವುದರಿಂದ ಹಿಡಿದು, ಉಚ್ಚೆ ಹೊಯ್ದರೆ, ಕ್ಲೀನ್ ಮಾಡುವುದು, ಅತ್ತರೆ ಸಮಾಧಾನಪಡಿಸುವುದು, ಚೆನ್ನಾಗಿ ಸ್ನಾನ ಮಾಡಿಸಿ ಎಣ್ಣೆಯಲ್ಲಿ ಮಾಲಿಶ್ ಮಾಡಿ ನಿದ್ದೆ ಮಾಡಿಸುವುದು... ಎಲ್ಲವನ್ನೂ ರಿಯಲ್ ಅಪ್ಪ ಅಮ್ಮನ ಥರ ರಾಖಿ ಇಲೇಶ್ ರೀಲ್‌ನಲ್ಲಿ 24 ಗಂಟೆಗಳಲ್ಲೂ ಒಂದು ತಿಂಗಳ ಕಾಲ ಮಾಡಬೇಕು.
IFM
ರಾಖಿ ಇಲೇಶ್‌ರಂತೆ ಟಿವಿಯ ರಾಮ-ಸೀತೆ ಖ್ಯಾತಿಯ ಜೋಡಿ ಗುರ್‌ಮೀತ್ ಚೌಧರಿ- ದೆಬಿನಾ ಬ್ಯಾನರ್ಜಿ, ಮದುವೆಯಾಗಿರುವ ಟಿವಿ ಜೋಡಿಗಳಾದ ಶಿಲ್ಪಾ ಸಕ್ಲಾನಿ-ಅಪೂರ್ವ ಅಗ್ನಿಹೋತ್ರಿ, ಸದ್ಯವಷ್ಟೆ ಮದುವೆಯಾದ ಜೂಹಿ ಪರ್ಮಾರ್- ಸಚಿನ್ ಶ್ರಾಫ್, ಮೌನಿ ರಾಯ್- ಗೌರವ್ ಛೋಪ್ರಾ ಕೂಡಾ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಇದರಲ್ಲಿ ಮಗುವಿನ ಅಗತ್ಯಗಳನ್ನು ಪೂರೈಸಿದ ನಂತರ ಮಗುವಿನೊಂದಿಗೆ ನೆಂಟರಿಷ್ಟರ ಮನೆಗೆ, ಅಥವಾ ಪಿಕ್‌ನಿಕ್‌ಗೆ ಅಥವಾ ಪಾರ್ಟಿಗೂ ತೆರಳಬಹುದು. ಈ ಕಾರ್ಯಕ್ರಮವಿಡೀ ನಿಜ ಜೀವನದಲ್ಲಿ ಅಪ್ಪ- ಅಮ್ಮ ಮಗುವಿನ ಜತೆಗೆ ಒಂದು ವನೆಯಲ್ಲಿ ಹೇಗಿರುತ್ತಾರೋ ಹಾಗೆಯೇ ಇರುವ ಕಾರ್ಯಕ್ರಮವಿದು. ಸದ್ಯದಲ್ಲೇ ಈ ಕಾರ್ಯಕ್ರಮ ಶುರುವಾಗಲಿದ್ದು ರಾಖಿಯೀಗ ಅಮ್ಮನಾಗಲು ಎಲ್ಲ ತಯಾರಿಗಳನ್ನೂ ಮಾಡುತ್ತಿದ್ದಾಳಂತೆ.
ಅಂದಹಾಗೆ, ರಾಖಿ ಇಲೇಶ್ ತಂಗಿಯ ಮದುವೆಗೆ ಕೆನಡಾಕ್ಕೆ ಹಾರುವುದಿಲ್ಲ. ಆಕೆ ಮುಂಬಯಿಯಲ್ಲೇ ಕಾರ್ಯಕ್ರಮಕ್ಕೆ ತಯಾರಾಗುತ್ತಿದ್ದಾಳಂತೆ. ಸಾಕಷ್ಟು ಶಾಪಿಂಗ್ ಮಾಡುವುದಿರುವುದರಿಂದ ಹಾಗೂ ಕಾರ್ಯಕ್ರಮಕ್ಕೆ ತಯಾರಿ ನಡೆಸಲಿರುವುದರಿಂದ ರಾಖಿ ನನ್ನ ತಂಗಿ ಮದುವೆಗೆ ಕೆನಡಾಕ್ಕೆ ಬರುವುದಿಲ್ಲ ಎನ್ನುತ್ತಾರೆ ಇಲೇಶ್. ರಾಖಿಯೂ ಶಾಪಿಂಗ್ ಮಾಡೋದರಲ್ಲೇ ತುಂಬ ಬ್ಯುಸಿಯಾಗಿದ್ದಾಳಂತೆ. ರಾಖಿಗೆ ಹಾಗೂ ಇಲೇಶ್‌ಗೆ ಇಬ್ಬರಿಗೂ ಬೇಕಾದ ವಸ್ತುಗಳ ಖರೀದಿಗೆ ಇಬ್ಬರೂ ಸೇರಿ ಖರೀದಿಸುವುದೇ ಸಾಕಷ್ಟಿದೆಯಂತೆ. ಹಾಗಾಗಿ ಮದುವೆಗೆ ಹೋದರೆ ತಯಾರಿ ಕಷ್ಟವಾಗಬಹುದು ಎಂಬುದು ರಾಖಿ ಲೆಕ್ಕಾಚಾರ.
IFM
ಇಲೇಶ್ ನನಗೆ ಹೊಂದಿಕೆಯಾಗಲ್ಲ!- ಇಷ್ಟೇ ಅಲ್ಲ. ಇನ್ನೊಂದೆಡೆ ರಾಖಿ, ನನಗೆ ಇಲೇಶ್ ಜತೆ ನನಗಿನ್ನೂ ಹೊಂದಾಣಿಕೆಯಾಗಿಲ್ಲ ಎಂದು ರಾಗವೆಳೆದಿದ್ದಾಳೆ. ಇಲೇಶ್ ತುಂಬ ಎಜುಕೇಟೆಡ್. ಆತನ ಶಿಕ್ಷಣಕ್ಕೆ ಹೋಲಿಸಿದರೆ ನನ್ನನ್ನು ಏನೂ ಅಲ್ಲ. ಹಾಗಾಗಿ ನನ್ನ ರೀತಿನೀತಿಗಳು ಹಾಗೂ ಇಲೇಶ್ ರೀತಿನೀತಿಗಳು ಪರಸ್ಪರ ಮ್ಯಾಚ್ ಆಗುತ್ತಿಲ್ಲ ಎಂದಿದ್ದಾಳೆ!
ಸ್ವಯಂವರ ಮುಗಿದ ಮೇಲೆ ನಾವಿಬ್ಬರೂ ಕೇವಲ ಎರಡು ಬಾರಿ ಭೇಟಿಯಾಗಿದ್ದೇವೆ. ಒಮ್ಮೆ ಇಬ್ಬರೂ ಕಾಫಿ ಕುಡಿಯಲು ಜತೆಯಾದೆವು. ಇನ್ನೊಮ್ಮೆ ನಾನು ಫ್ರೆಂಡ್ಸ್‌ಗಾಗಿ ಕರೆದಿದ್ದ ಪಾರ್ಟಿಯಲ್ಲಿ ಭಾಗವಹಿಸಲು ಅವರು ನನ್ನ ಮನೆಗೆ ಬಂದಿದ್ದರು. ಹೀಗೆ ಎರಡೇ ಬಾರಿ ನಾವು ಭೇಟಿಯಾಗಿದ್ದು. ಹೀಗಾಗಿ ಆತ ನನ್ನವನು ಎಂದು ನಾನು ಹೇಗೆ ಹೇಳಲಿ ಎನ್ನುತ್ತಾಳೆ ರಾಖಿ. ಇಂತಿಪ್ಪ ರಾಖಿ ಮೊನ್ನೆ ಮೊನ್ನೆಯಷ್ಟೆ ಕ್ರೈಸ್ಥ ಧರ್ಮಕ್ಕೆ ಮತಾಂತರವನ್ನೂ ಹೊಂದಿದ್ದಾಳಂತೆ.