ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಕಿರುತೆರೆ » ಇಂಟರ್ನೆಟ್ಟಿನಲ್ಲಿ ರಾಖಿ ಬೆತ್ತಲೆ! ಇಲೇಶ್ ಏನಂತಾನೆ?! (Rakhi Ka Swayamvar | Elesh, Rakhi Sawant | Nude | Rakhi Hot)
ಕಿರುತೆರೆ
Feedback Print Bookmark and Share
 
Rakhi Sawant
IFM
ಈಗ ಅಂತರ್ಜಾಲದಲ್ಲಿ ಎಲ್ಲೆಲ್ಲೂ ರಾಖಿ ಸಾವಂತಳ ಬೆತ್ತಲೆ ಚಿತ್ರಗಳೇ ಹರಿದಾಡುತ್ತಿವೆಯಂತೆ. ಹೌದು. ರಾಖಿ ಸಾವಂತ್ ಸಂಪೂರ್ಣ ಬೆತ್ತಲಾಗಿದ್ದಾಳೆ. ಬಟ್ಟೆಯೇ ಇಲ್ಲದ ಆಕೆಯ ಚಿತ್ರಗಳು ಇಂಟರ್ನೆಟ್ಟಿನಲ್ಲಿ ಹರಿದಾಡುತ್ತಿದ್ದರೆ, ಅತ್ತ ರಾಖಿ ಇದೆಲ್ಲವನ್ನು ತಿಳಿದು, ಇದಕ್ಕೆ ತನ್ನ ಹೊಸ ಸ್ವಯಂವರ ಸಂಗಾತಿ ಇಲೇಶ್ ಹೇಗೆ ಪ್ರತಿಕ್ರಿಯಿಸುತ್ತಾನೋ ಎಂಬುದೇ ಆಕೆಯ ಹೃದಯಬಡಿತ ಹೆಚ್ಚಿಸಿದೆಯಂತೆ.

ವಿಷಯ ಏನಪ್ಪಾ ಅಂದರೆ, ಪುರುಷರಿಗೆಂದೇ ಇರುವ ಮ್ಯಾಗಝಿನ್‌‌ಗೆ ರಾಖಿ ಸಂಪೂರ್ಣ ಬೆತ್ತಲಾಗಿ ಪೋಸ್ ನೀಡಿದ್ದಾಳಂತೆ. ಅದು ಕೇವಲ ಮ್ಯಾಗಝಿನ್‌ನಲ್ಲಷ್ಟೇ ಅಲ್ಲ, ಇಂಟರ್ನೆಟ್ಟಿನಲ್ಲೂ ಲೀಲಾಜಾಲವಾಗಿ ಹರಿದಾಡುತ್ತಿದೆ. ಇದಕ್ಕೆ ರಾಖಿ ಪೋಸ್ ಕೊಟ್ಟಿದ್ದು ಸ್ವಯಂವರದ ನಂತರ ಎಂದೂ ಹೇಳಲಾಗುತ್ತಿದೆ.

ಇಂಟರ್ನೆಟ್ಟಿನಲ್ಲಿ ರಾಖಿ ತನ್ನ ಬೆತ್ತಲೆ ಚಿತ್ರಗಳನ್ನು ನೋಡಿ ಹೌಹಾರಿದ್ದಾಳಂತೆ. ತಾನು ಹೀಗೆಲ್ಲಾ ಬಿಚ್ಚುವ ಕೆಲಸ ಮಾಡೇ ಇಲ್ಲ. ನಾನು ಇಷ್ಟರಮಟ್ಟಿಗೆ ಬಿಚ್ಚುವ ಧೈರ್ಯವನ್ನೂ ಮಾಡಿಲ್ಲ. ಯಾವ ಮ್ಯಾಗಝಿನ್‌ಗೂ ಈ ರೀತಿ ಸಂಪೂರ್ಣ ಬೆತ್ತಲಾಗಿ ಪೋಸ್ ಕೊಟ್ಟಿಲ್ಲ. ಇದನ್ನು ಯಾರೋ ತನಗೆ ಆಗದವರು ಮಾಡಿರುವ ತಂತ್ರ. ಬೇರೆ ಯಾರದ್ದೋ ಬೆತ್ತಲೆ ದೇಹಕ್ಕೆ, ನನ್ನ ತಲೆಯನ್ನು ಕೂರಿಸಿ ಗ್ರಾಫಿಕ್ಸ್‌ನಲ್ಲಿ ಮಾಡಿದ ಗಿಮಿಕ್ಕು ಇದು ಎಂದು ಊರೆಲ್ಲಾ ಹೇಳುತ್ತಾ ಹೋಗಿದ್ದಾಳಂತೆ.

ಅಷ್ಟೇ ಅಲ್ಲ. ತನ್ನ ಸಂಗಾತಿ ಇಲೇಶ್ ತುಂಬ ಒಳ್ಳೆಯವನು. ಜತೆಗೆ ಅಷ್ಟೇ ಓಪನ್ ಮೈಂಡೆಡ್ ಕೂಡಾ. ಆದರೆ ತನ್ನ ಹುಡುಗಿಯ ಬೆತ್ತಲೆ ಚಿತ್ರ ಇಂಟರ್ನೆಟ್ಟಿನಲ್ಲಿ ಕಂಡರೆ ಯಾವ ಹುಡುಗ ತಾನೇ ಸುಮ್ಮನಿರುತ್ತಾನೆ? ಹಾಗಾಗಿ ಇಲೇಶ್ ಇದಕ್ಕೆ ಯಾವ ರೀತಿ ಪ್ರತಿಕ್ರಿಯಿಸುತ್ತಾನೋ ಗೊತ್ತಿಲ್ಲ ಎಂದೂ ಕೈಚೆಲ್ಲಿದ್ದಾಳೆ ರಾಖಿ.

ಅತ್ತ, ರಾಖಿಯ ವ್ಯವಹಾರಗಳ ಮ್ಯಾನೇಜರ್ ಮನೋಜ್ ಕರ್ನಾವರ್ ಕೂಡಾ ರಾಖಿ ಬೆತ್ತಲೆ ಫೋಟೋ ಶೂಟ್‌ನಲ್ಲಿ ಭಾಗವಹಿಸಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ರಾಖಿ ಸಾವಂತ್ ಯಾವುದೇ ಪುರುಷರ ಮ್ಯಾಗಝಿನ್‌ಗೆ ಬೆತ್ತಲೆಯಾಗಿ ಕಾಣಿಸಿಕೊಂಡಿಲ್ಲ. ಇದು ಯಾರದೋ ಸಂಚು ಹಾಗೂ ಗ್ರಾಫಿಕ್ಸ್ ಚಮತ್ಕಾರ ಅಷ್ಟೆ ಎಂದಿದ್ದಾರೆ.

Rakhi Sawant
IFM
ಇಲೇಶ್‌ಗೆ ಸ್ವಂತ ಮನೆಯೇ ಇಲ್ಲ!- ರಾಖಿಗೆ ಈಗಷ್ಟೇ ಒಳ್ಳೆಯ ಕಾಲ ಶುರುವಾಗಿದೆಯಂತೆ. ನನ್ನ ಕಷ್ಟಗಳೆಲ್ಲ ದೂರವಾಗಿದೆ ಎಂಬುದು ರಾಖಿಯ ಎದೆಯಾಳದ ಮಾತಂತೆ. ಹಾಗಾದರೆ, ಇಲೇಶ್ ಜತೆ ಮದುವೆ ಮುಂಚಿನ ಸಂಸಾರ ಹೇಗೆ ನಡೀತಿದೆಯಮ್ಮಾ ಎಂದರೆ, ರಾಖಿ ಇಲೇಶ್ ಹಾಗೂ ನಾನು ಭೇಟಿಯಾಗೋದೇ ಅಪರೂಪ. ಅಷ್ಟೇ ಅಲ್ಲ. ಇಲೇಶ್ ಸ್ವಯಂವರದಲ್ಲಿ ಗುರುತಿಸಿಕೊಂಡ ಹಾಗೆ ನಿಜ ಜೀವನದಲ್ಲಿ ಇಲ್ಲ. ಆತನಿಗೆ ಮುಂಬೈನಲ್ಲಿ ಒಂದು ಸ್ವಂತ ಮನೆಯೂ ಇಲ್ಲ. ತನ್ನ ಗೆಳೆಯನ ಜತೆಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾನೆ. ಆತ ತುಂಬ ಎಜುಕೇಟೆಡ್ ಆಗಿದ್ದಾನೆ ನಿಜ. ಶ್ರೀಮಂತನೆಂಬುದೂ ನಿಜ. ಆದರೆ, ಆಸ್ತಿಯೆಲ್ಲವೂ ಅಪ್ಪನದು. ಇಲೇಶ್‌ದು ಏನೂ ಇಲ್ಲ ಎನ್ನುತ್ತಾಳೆ.

ನಾನು ಇನ್ನೆರಡು ವರ್ಷ ಇಲೇಶ್‌ಗೆ ಸಮಯ ನೀಡುತ್ತೇನೆ. ಆತ ಸ್ವಂತ ಮನೆ ಹೊಂದಬೇಕು. ಭಾರತದಲ್ಲಿ ಗಂಡಂದಿರ ಮನೆಯಲ್ಲಿ ಹೆಂಡತಿ ಬಾಳುವುದು ಸಂಪ್ರದಾಯ. ಆತ ನನ್ನ ಮನೆಗೆ ಬಂದು ಸಂಸಾರ ಹೂಡಿ ನನ್ನ ಹಣದಲ್ಲಿ ಜೀವನ ನಡೆಸುವುದು ನನಗೆ ಬೇಕಿಲ್ಲ. ಆತನೇ ಸಾಕಷ್ಟು ಹಣ ಸಂಪಾದಿಸಬೇಕು. ಬಾಡಿಗೆ ಮನೆಯಲ್ಲಿ ನಾನು ಅವನೊಂದಿಗೆ ಬಾಳೋದು ನನ್ನ ಕೈಯಲ್ಲಿ ಊಹೆ ಮಾಡೋದಕ್ಕೂ ಸಾಧ್ಯವಿಲ್ಲ. ಜತೆಗೆ ಆತ ರಾಖಿಯ ಗಂಡ ಎಂದು ಹೊರಗೆ ಗುರುತಿಸ್ಪಡುವುದೂ ನನಗಿಷ್ಟವಿಲ್ಲ. ಅವನಿಗೆ ಅವನದೇ ಆದ ಆರ್ಥಿಕ ವಲಯ ಸೃಷ್ಟಿಯಾಗಬೇಕು. ಅದಕ್ಕೆ ಸಾಕಷ್ಟು ಸಮಯವೂ ಬೇಕು. ಹಾಗಾಗಿ ನಾನು ಆತನಿಗೆ ಸಮಯ ನೀಡುತ್ತೇನೆ ಎನ್ನುತ್ತಾಳೆ ರಾಖಿ.

ಸ್ವಯಂವರಕ್ಕೂ ಮುಂಚೆ ತನ್ನನ್ನು ಮದುವೆಯಾಗೋನಿಗೆ ತಿಂಗಳಿಗೆ ಐದು ಸಾವಿರ ಸಂಬಳವಿದ್ದರೂ ಸಾಕು ಎನ್ನುತ್ತಿದ್ದ ರಾಖಿಯೀಗ ಪ್ಲೇಟ್ ಬದಲಾಯಿಸಿದ್ದಾಳೋ...!ಏನೋಪ್ಪಾ... ಯಾರಿಗ್ಗೊತ್ತು..!
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರಾಖಿ ಸಾವಂತ್, ಇಲೇಶ್, ಪರುಜನ್ವಾಲಾ, ಬೆತ್ತಲೆ ಚಿತ್ರ, ರಾಖಿ ಕಾ ಸ್ವಯಂವರ