ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಕಿರುತೆರೆ » ದಾರಾವಾಹಿಯಲ್ಲಿ ನಟಿಸಬೇಕಿದ್ದರೆ ಚುಂಬಿಸಿ ಎಂದ ಏಕ್ತಾ! (Ekta Kapoor | Balaji | Telefilms | Kiss | TV Serial)
ಕಿರುತೆರೆ
Feedback Print Bookmark and Share
 
Ekta Kapoor
IFM
ಕ್ಯೋಂಕಿ ಸಾಸ್ ಭೀ ಕಭೀ ಬಹೂ ಥೀ ಎಂಬ ಪ್ರಸಿದ್ಧ ದಾರಾವಾಹಿ ನೀಡಿದ ಕೀರ್ತಿ ಹೊತ್ತ ಏಕ್ತಾ ಕಪೂರ್ ಇದೀಗ ಹೊಸ ಚುಂಬನ ವಿವಾದ ಸೃಷ್ಟಿಸಿದ್ದಾರೆ. ಏಕ್ತಾರ ಹೆಸರಿಡದ ಮುಂದಿನ ದಾರಾವಾಹಿಯಲ್ಲಿ ನಟಿಸಲು ಆಯ್ಕೆಯಾಗಬೇಕಾದರೆ ನೇರವಾಗಿ ತುಟಿಗೆ ತುಟಿ ಸೇರಿಸಿ ದೀರ್ಘವಾಗಿ ಚುಂಬಿಸಬೇಕಾಗಿದೆ.

ಹೌದು. ಚುಂಬಿಸುವ ಕಾರ್ಯವೂ ಮುಗಿದಿದೆ. ಸುಮಾರು 100ಕ್ಕೂ ಹೆಚ್ಚು ಮಂದಿ ತಮಗೆ ಗೊತ್ತೇ ಇಲ್ಲದ ಮಂದಿಗೆ ಸುದೀರ್ಘವಾದ ಚುಂಬನ ನೀಡಿದ್ದಾರೆ. 83 ಮಂದಿಯನ್ನು ಏಕ್ತಾ ಕಪೂರ್ ಶಾರ್ಟ್ ಲಿಸ್ಟ್ ಮಾಡಿದ್ದೂ ಆಗಿದೆ.

ದಾರಾವಾಹಿಗೂ ಚುಂಬನಕ್ಕೂ ಏನು ಸಂಬಂಧ ಎಂದು ಇಲ್ಲಿ ಪ್ರಶ್ನೆ ಹುಟ್ಟದಿರದು. ಈವರೆಗೆ ಸಿನಿಮಾಕ್ಕಿಂತ ಸೇಫ್ ಆದ ನಟನೆಯ ಮಾಧ್ಯಮವೆಂದು ಅಂದುಕೊಂಡದ್ದೂ ಸುಳ್ಳಾಗುವ ಸಮಯ ಬಂದಿರುವಂತೆ ಕಾಣುತ್ತಿದೆ. ಬಾಲಿವುಡ್ ಹಾಗೂ ಸ್ಥಳೀಯ ಭಾಷಾ ಸಿನಿಮಾಗಳಲ್ಲಿ ತುಟಿಗೆ ತುಟಿ ಸೇರಿಸಿ ಚಪ್ಪರಿಸಿ ಚುಂಬಿಸುವ ಸಂಸ್ಕೃತಿ ಸಾಮಾನ್ಯವಾಗಿ ಬಿಟ್ಟಂತೆ, ದಾರಾವಾಹಿಗೂ ಈ ಚಟ ಅಂಟಿಕೊಳ್ಳಲಿದೆಯೇ ಎಂಬ ಪ್ರಶ್ನೆಯೂ ಹುಟ್ಟಿಕೊಂಡಿದೆ.

ನಡೆದಿದ್ದೇನು?: ಏಕ್ತಾ ಕಪೂರ್ ಅವರ ಬಾಲಾಜಿ ಟೆಲಿಫಿಲಂಸ್ ಇನ್ನೊಂದು ದಾರಾವಾಹಿ ಹೊರತರುತ್ತಿದೆ. ದಾರಾವಾಹಿ ಯಾವುದು,ಯಾವಾಗ ಎಂದೆಲ್ಲ ಬಹಿರಂಗಗೊಂಡಿಲ್ಲ. ಆದರೆ ದಾರಾವಾಹಿಯ ನಟನೆಗೆ ಪ್ರತಿಭಾಶೋಧ ಆರಂಭವಾಗಿತ್ತು. ದಾರಾವಾಹಿಯ ನಟನೆಗೆ ಅರ್ಜಿ ಹಾಕಿದ ಮಂದಿಯನ್ನು ಆಡಿಷನ್‌ಗೆ ಕರೆದ ಏಕ್ತಾ, ಎಲ್ಲರಿಗೂ ಹೇಳಿದ್ದು ಕಿಸ್ ಮಾಡಿ ಎಂದು. ಮೊದಲು ಕೆಲವು ಡೈಲಾಗ್‌ಗಳನ್ನು ಪ್ರದರ್ಶಿಸಲು ಹೇಳಿದ ಏಕ್ತಾ ನಂತರ, ಬಂದ ಹುಡುಗ ಹುಡುಗಿಯರನ್ನು ಎರಡು ಗುಂಪುಗಳಾಗಿ ಮಾಡಿ, ತನಗೆ ಜೋಡಿಯಾಗಿ ಸಿಕ್ಕಿದ ಗುರುತು ಪರಿಚಯವೇ ಇಲ್ಲದ ಹುಡುಗ ಹುಡುಗಿ ಪರಸ್ಪರ ದೀರ್ಘವಾಗಿ ತುಂಬ ರೊಮ್ಯಾಂಟಿಕ್ ಆಗಿ ತುಟಿಗೆ ತುಟಿ ಸೇರಿಸಿ ಚಪ್ಪರಿಸಿ ಚುಂಬಿಸಬೇಕು ಎಂದರಂತೆ. ಆಡಿಷನ್‌ಗೆ ಬಂದ 200ಕ್ಕೂ ಹೆಚ್ಚು ಮಂದಿಯಲ್ಲಿ ಹಲವರು ಏಕ್ತಾಳ ಈ ಸವಾಲನ್ನು ಕೇಳಿ ಹೌಹಾರಿದರಂತೆ. ಹಲವರು ನಮ್ಮಿಂದ ಸಾಧ್ಯವಿಲ್ಲ ಎಂದು ಬಿಟ್ಟು ಹೋದರಂತೆ. ಕೆಲವರು ನಿಜಕ್ಕೂ ಅದ್ಭುತವಾಗಿ ಚುಂಬಿಸಿಯೇ ಬಿಟ್ಟರಂತೆ. ಹೀಗೆ ಚುಂಬಿಸಿದವರಲ್ಲಿ ನಿಜಕ್ಕೂ ತುಂಬ ಚೆನ್ನಾಗಿ ಚುಂಬಿಸಿದ 89 ಮಂದಿಯನ್ನು ಏಕ್ತಾ ತನ್ನ ಸೀರಿಯಲ್‌ಗಾಗಿ ಶಾರ್ಟ್ ಲಿಸ್ಟ್ ಮಾಡಿದ್ದಾರಂತೆ.

ಯಾಕಪ್ಪಾ ಇಂತಹ ವಿಚಿತ್ರ ಪ್ರಯೋಗ ಎಂದರೆ ಬಾಲಾಜಿ ಟೆಲಿ ಫಿಲಂಸ್ ಅವರು, ಇಂತಹ ವಿಶೇಷ ಆಡಿಷನ್ ನಡೆಸಿದ್ದು, ಮುಂದಿನ ದಾರಾವಾಹಿಗೆ. ಮುಂದಿನ ದಾರಾವಾಹಿಯಲ್ಲಿ ಕೆಲವು ಅತ್ಯಂತ ರೊಮ್ಯಾಂಟಿಕ್ ಸನ್ನಿವೇಶಗಳಿವೆ. ಅದಕ್ಕೆ ಈಗಲೇ ಅಂತಹುಗಳಿಗೆ ತಯಾರಿರುವ ಮಂದಿಯನ್ನು ಆಯ್ಕೆ ಮಾಡುತ್ತಿದ್ದೇವೆ ಎನ್ನುತ್ತಾರೆ.

ಏಕ್ತಾರನ್ನು ಕೇಳಿದರೆ, ಮುಂದಿನ ದಾರಾವಾಹಿ ನನಗೆ ತುಂಬ ಇಷ್ಟವಿರುವ ದಾರಾವಾಹಿ. ಇದು ಎಲ್ಲ ದಾರಾವಾಹಿಗಳಂತಲ್ಲ. ಇದರಲ್ಲಿ ಕೆಲವು ರೋಚಕವಾದ ರೊಮ್ಯಾಂಟಿಕ್ ದೃಶ್ಯಗಳಿವೆ. ಆದರೆ ಇದೇನೂ ಅಶ್ಲೀಲವಾಗಿರುವುದಿಲ್ಲ. ಇಡೀ ಕುಟುಂಬ ಜತೆಗೇ ಕೂತು ನೋಡಬಹುದಾದಂತಹ ದಾರಾವಾಹಿ ಇದು ಎನ್ನುತ್ತಾರೆ. ಆದರೆ ದಾರಾವಾಹಿಯ ಹೆಸರೇನು, ಕಥಾಹಂದರವೇನು ಎಂಬುದನ್ನು ಮಾತ್ರ ಏಕ್ತಾ ಬಿಟ್ಟುಕೊಡುವುದಿಲ್ಲ.

ವಿಚಿತ್ರವೆಂದರೆ, 'ಅಶ್ಲೀಲವೆನಿಸುವ ಸನ್ನಿವೇಶಗಳಿಲ್ಲ, ಕುಟುಂಬ ನೋಡಬಹುದಾದ ದಾರಾವಾಹಿ...' ಎನ್ನುತ್ತಾ ದಾರಾವಾಹಿಗಳಲ್ಲಿ ನಟಿಸಲು ತುದಿಗಾಲಲ್ಲಿ ಆಡಿಷನ್‌ಗೆ ಬಂದ ಹದಿಹರೆಯದ ಯುವಕ ಯುವತಿಯರಿಗೆ ಈಗಲೇ ಕಿಸ್ಸಿಂಗ್ ಪ್ರಾಕ್ಟೀಸ್ ಮಾಡಿಸಿದ್ಯಾಕೆ ಎಂಬುದು ಗೊತ್ತಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಏಕ್ತಾ ಕಪೂರ್, ಬಾಲಾಜಿ ಟೆಲಿಫಿಲಂಸ್, ಕಿಸ್ಸಿಂಗ್, ಚುಂಬನ, ದಾರಾವಾಹಿ