ಮುಖ್ಯ ಪುಟಮನರಂಜನೆ » ಬಾಲಿವುಡ್ » ಕಿರುತೆರೆ » ಪ್ರೇಮ ಇತಿಹಾಸ ಬಿಚ್ಚಿಟ್ಟ ವಿವೇಕ್, ಸಲ್ಮಾನ್: ಕಣ್ಣೀರಿಟ್ಟ ಐಶ್ವರ್ಯಾ ರೈ! (Vivek Oberoi | Salman Khan | Tere Mere Beach Mein | Aishwarya Rai Bachhan)
ಪ್ರೇಮ ಇತಿಹಾಸ ಬಿಚ್ಚಿಟ್ಟ ವಿವೇಕ್, ಸಲ್ಮಾನ್: ಕಣ್ಣೀರಿಟ್ಟ ಐಶ್ವರ್ಯಾ ರೈ!
IFM
ಬಾಲಿವುಡ್ಡಿನಲ್ಲಿ ಮತ್ತೆ ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಬಚ್ಚನ್‌ಗೆ ಇರಿಸು ಮುರಿಸಾಗುವ ದಿನಗಳು ಬಂದಿವೆ. ಹಳೆಯದನ್ನು ಬಿಟ್ಟು ಹೊಸಜೀವನ ಶುರುವಾಗಿದೆ ಎಂದು ಬಿಗ್ ಬಿ ಬಚ್ಚನ್ ಬಂಗಲೆಗೆ ಯುವರಾಣಿಯಾಗಿ ಸಂತಸದಿಂದ ಕಾಲ ಕಳೆಯುತ್ತಿರುವಾಗ ಆಕೆಯ ಹಳೆಯ ದಿನಗಳ ಬಗ್ಗೆ ಈಗ ಮ್ತತೆ ಬಾಲಿವುಡ್ಡಿನಲ್ಲಿ ಚರ್ಚೆ ಶುರುವಾಗಿದೆ.
ಒಂದೆಡೆ ಆಕೆಯ ಹಳೆಯ ಪ್ರಿಯಕರ ಸಲ್ಮಾನ್ ಖಾನ್ ತಾನು ಐಶ್ವರ್ಯಾ ರೈಗೆ ಹೊಡೆದೇ ಇಲ್ಲ. ನಾನು ಆಕೆಯನ್ನು ತುಂಬ ಪ್ರೀತಿಸುತ್ತಿದ್ದೆ ಎಂದೆಲ್ಲ ಹೇಳಿಕೊಂಡರೆ ಇನ್ನೊಂದೆಡೆ ಖಾಸಗಿ ಟಿವಿ ಚಾನಲ್ ಒಂದರ ತೇರೇ ಮೇರೆ ಬೀಚ್ ಮೇ ಕಾರ್ಯಕ್ರಮದಲ್ಲಿ, ಆಕೆಯ ಇನ್ನೊಬ್ಬ ಮಾಜಿ ಪ್ರಿಯಕರ ವಿವೇಕ್ ಒಬೆರಾಯ್, 'ಐಶ್ವರ್ಯಾಳನ್ನು ಪ್ರೀತಿಸಿದ್ದರಿಂದಾಗಿ ನಾನು ನನ್ನ ಭವಿಷ್ಯವನ್ನೇ ಕಳೆದುಕೊಂಡೆ. ಈಗ ನನಗೆ ನಟನೆಗೂ ಅವಕಾಶವಿಲ್ಲದಂತಾಗಿದೆ. ಆಕೆಯನ್ನು ಪ್ರೀತಿಸಿದ್ದು ನನ್ನ ಬದುಕಿನ ಘೋರ ದುರಂತ' ಎಂದು ವಿಷಾದದಿಂದ ಹೇಳಿಕೊಂಡಿದ್ದಾನೆ.
ಹೌದು. ಆದರೆ, ಇತ್ತ ವಿವೇಕ್, ಸಲ್ಮಾನ್ ತಮ್ಮ ಮಾಜಿ ಪ್ರೇಯಸಿ ಐಶ್ ಬಗ್ಗೆ ಮೇಲಿಂದ ಮೇಲೆ ಹೇಳಿಕೆ ಕೊಡುತ್ತಿರುವಾಗ ಅತ್ತ ಐಶ್ ಗೋವಾದಲ್ಲಿ ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ಗುಝಾರಿಶ್ ಶೂಟಿಂಗ್ ವೇಳೆ ದುಃಖತಪ್ತಳಾಗಿ ಅತ್ತುಬಿಟ್ಟಿದ್ದಾಳಂತೆ.
IFM
ಅಷ್ಟಕ್ಕೂ ವಿವೇಕ್ ಒಬೆರಾಯ್ ಹೇಳಿದ್ದೇನು ಅಂತೀರಾ? ಇಷ್ಟರವರೆಗೆ ಎಲ್ಲೂ ಕಾಣಿಸಿಕೊಳ್ಳದ, ಐಶ್ ಬಗ್ಗೆ ತುಟಿಪಿಟಕ್ಕೆನ್ನದ ವಿವೇಕ್ ಈಗ ಖಾಸಗಿ ಟಿವಿ ಶೋನಲ್ಲಿ ಫರ್ಹಾ ಖಾನ್ ಜತೆಗೆ ಮಾತಾಡಿದ್ದಾನೆ. ಐಶ್ ಜತೆಗಿನ ಆತನ ಸಂಬಂಧದ ಬಗ್ಗೆ ಪ್ರಶ್ನೆ ಕೇಳಿದಾಗ ಆತ ತನ್ನ ಹಳೆಯ ನೆನಪುಗಳೆಲ್ಲವನ್ನು ಬಿಚ್ಚಿದ್ದಾನೆ. ಸಲ್ಮಾನ್ ಖಾನ್ ರಂಪ ರದ್ದಾಂತದ ನಂತರ ಆತನ ಜತೆಗೆ ಸಂಬಂಧ ಕಡಿದುಕೊಂಡ ಐಶ್ವರ್ಯಾ ರೈಗೆ ಆಗ ಆಸರೆಯಾಗಿದ್ದು ವಿವೇಕ್ ಒಬೆರಾಯ್. ಐಶ್ ಸಲ್ಮಾನ್‌ನ ತೊಂದರೆಯಿಂದ ರೋಸಿ ಹೋಗಿ ದುಃಖತಪ್ತಳಾಗಿದ್ದಾಗ ಆಕೆಯನ್ನು ಸಂತೈಸಿದ್ದು ವಿವೇಕ್. ಅಷ್ಟೇ ಅಲ್ಲ. ಇಂಥ ಸಂದರ್ಭ ವಿವೇಕ್‌ಗೆ ಸಲ್ಮಾ್‌ನಿಂದ ಬೆದರಿಕೆಯೂ ಬಂದಿತ್ತಂತೆ.
ವಿವೇಕ್ ಹೇಳುವಂತೆ, ಐಶ್ ಆ ಸಂದರ್ಭ ನನ್ನ ಎಲ್ಲವೂ ಆಗಿದ್ದಳು. ನನಗೂ ಅಷ್ಟೆ ಐಶ್ವರ್ಯಾಳೇ ನನ್ನ ಉಸಿರಾಗಿದ್ದಳು. ಅದೇ ಸಂದರ್ಭ ನನ್ನ ಐಶ್ವರ್ಯಾ ಸಂಬಂಧ ನೋಡಿ ನನಗೆ ಸಲ್ಮಾನ್ ಸಾಕಷ್ಟು ತೊಂದರೆ ಕೊಟ್ಟ. ನನಗೆ ಬೆದರಿಕೆಯನ್ನೂ ಒಡ್ಡಿದ. ಇದನ್ನು ತಡೆಯಲಾರದೆ ನಾನು ಪತ್ರಿಕಾಗೋಷ್ಠಿ ಕರೆದು ಸಲ್ಮಾನ್‌ನಿಂದ ನನಗೆ ತೊಂದರೆಯಾಗುತ್ತಿದೆ ಎಂದು ನೇರವಾಗಿ ಮಾಧ್ಯಮಗಳಿಗೆ ತಿಳಿಸಿದೆ. ನನಗಾಗಿ ಅಷ್ಟೇ ಅಲ್ಲ, ಐಶ್ ಗಾಗಿ ಇದನ್ನು ಮಾಡಿದ್ದೆ. ಆದರೆ ಐಶ್ ನನ್ನ ಜತೆ ಸಿಟ್ಟು ಮಾಡಿಕೊಂಡು ನನ್ನ ಸಂಬಂಧವನ್ನೇ ಕಡಿದುಕೊಂಡಳು ಎನ್ನುತ್ತಾರೆ ವಿವೇಕ್.
IFM
ಆಗ ನನಗಿನ್ನೂ ಚಿಕ್ಕ ವಯಸ್ಸು. ನಿರ್ಧಾರ ತೆಗೆದುಕೊಳ್ಳುವ ವಯಸ್ಸಲ್ಲ. ಜತೆಗೆ ಮುಂಬೈನಲ್ಲಿ ಆಗ ಅಪ್ಪನೂ ನನ್ನ ಜತೆ ಇರಲಿಲ್ಲ. ಹೊರದೇಶದಲ್ಲಿದ್ದರು. ಹಾಗಾಗಿ ನನಗೆ ತಪ್ಪನ್ನು ತಿದ್ದಿ ಹೇಳುವವರು ಯಾರೂ ಇರಲಿಲ್ಲ. ಐಶ್ ಮೋಹಪಾಶದಲ್ಲಿ ಸಿಲುಕಿ ಪತ್ರಿಕಾಗೋಷ್ಠಿ ಕರೆಯುವ ಮೂಲಕ ತಪ್ಪು ಮಾಡಿದೆ. ಅದರ ಪ್ರತಿಫಲ ನನ್ನ ಜೀವನದುದ್ದಕ್ಕೂ ಬೀರಿದೆ ಎನ್ನುತ್ತಾರೆ.
ಪತ್ರಿಕಾಗೋಷ್ಠಿ ಕರೆದಿದ್ದಕ್ಕಾಗಿಯೇ ನಾನು ಬಾಲಿವುಡ್ಡಿನ ಬ್ಯಾಡ್ ಬಾಯ್ ಆದೆ. ಹಲವರು ನನಗೆ ಸಲ್ಮಾನ್ ವಿರುದ್ಧ ಮಾತಾಡಿದ್ದಕ್ಕೆ ಬೆನ್ನು ತಟ್ಟಿದರು. ಆದರೆ ಆಮೇಲೆ ಅವರ್ಯಾರ ಪತ್ತೆಯೂ ಇಲ್ಲ. ಎಲ್ಲರೂ ಮರೆಯಾದರು. ನನಗೀಗ ಯಾರೂ ಇಲ್ಲ. ಬಾಲಿವುಡ್ಡಿನಲ್ಲಿ ನನಗೆ ಅವಕಾಶ ಕೊಡಲೂ ಕೆಲವು ಹಿತಾಸಕ್ತಿಗಳು ಬಿಡುತ್ತಿಲ್ಲ. ಯಾವುದೇ ಚಿತ್ರಕ್ಕೆ ಸಹಿ ಮಾಡಿದರೂ ನನಗೆ ಬೆದರಿಕೆ ಕರೆಗಳು ಬರುತ್ತವೆ. ಅಂದೊಮ್ಮೆ ನನಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಗಬೇಕಿತ್ತು. ಆದರೆ ಸಮಾರಂಭಕ್ಕೆ ಬರದಂತೆ ನನಗೆ ಬೆದರಿಕೆ ಕರೆ ಬಂತು. ನಂತರ ನನ್ನ ಪ್ರಶಸ್ತಿಯನ್ನು ಬೇರೆ ನಟನಿಗೆ ಕೊಟ್ಟರು. ಇಂಥ ಹಲವು ಘಟನೆಗಳು ನಂತರ ನಡೆದಿವೆ. ಈಗ ಹಾಗಾಗಿ ಯಾರೂ ನನಗೆ ನಟಿಸಲು ಕರೆಯುವುದಿಲ್ಲ. ಆ ಘಟನೆಯಿಂದ ನಾನು ಅತಿಯಾಗಿ ಪ್ರೀತಿಸುತ್ತಿದ್ದ ನನ್ನ ಇಡೀ ನಟನಾ ವೃತ್ತಿಯನ್ನೇ ಕಳೆದುಕೊಂಡೆ ಎಂದು ದುಃಖತಪ್ತರಾಗಿ ಹೇಳಿದರು ವಿವೇಕ್.
ಹಾಗಾದರೆ ಈಗ ಐಶ್ವರ್ಯಾಳನ್ನು ಮರೆತಿದ್ದೀರೇ? ಎಂದು ಪ್ರಶ್ನಿಸಿದರು ಫರ್ಹಾ ಖಾನ್. ಹೌದು. ಐಶ್ವರ್ಯಾಳನ್ನು ನಾನೀಗ ಸಂಪೂರ್ಣ ಮರೆತು ಬಿಟ್ಟಿದ್ದೇನೆ. ನಾನು ಆಕೆಯಿಂದ ಸಾಕಷ್ಟು ಪಾಠ ಕಲಿತಿದ್ದೇನೆ ಕೂಡಾ. ಈ ಬಾಲಿವುಡ್ ಉದ್ಯಮದಲ್ಲಿ, ಪ್ಲಾಸ್ಟಿಕ್ ಉದ್ಯಮಕ್ಕಿಂತಲೂ ಹೆಚ್ಚು ಪ್ಲಾಸ್ಟಿಕ್ ತಯಾರಾಗುತ್ತದೆ ಅನಿಸುತ್ತೆ. ಯಾಕೆಂದರೆ ಇಲ್ಲಿರುವ ಎಲ್ಲರದ್ದೂ ಪ್ಲಾಸ್ಟಿಕ್ ನಗು, ಪ್ಲಾಸ್ಟಿಕ್ ಹೃದಯ. ಇಂಥ ಪ್ಲಾಸ್ಟಿಕ್ ನಗು ಅಂದು ನನಗಾಗ ಅರ್ಥವಾಗಿರಲಿಲ್ಲ. ಈಗ ಅರ್ಥವಾಗಿದೆ ಎಂದು ಮಾರ್ಮಿಕವಾಗಿ ನುಡಿದರು ವಿವೇಕ್.
IFM
ಅಂದು ಪತ್ರಿಕಾಗೋಷ್ಠಿ ಕರೆದಾಗ ತಪ್ಪು ಅನಿಸಲಿಲ್ಲವೇ? ಎಂದು ಮರುಪ್ರಶ್ನೆ ಹಾಕಿದರು ಫರ್ಹಾ ಖಾನ್. ಅದಕ್ಕೆ ವಿವೇಕ್ ಹೇಳಿದ್ದು ಹೀಗೆ. ಅಂದು ನನ್ನ ಪಾಲಿಗೆ ರೈ ಇದ್ದಳಲ್ಲ. ಆಕೆಯೇ ಸರ್ವಸ್ವವಾಗಿತ್ತು. ಹಾಗಾಗಿ ತಪ್ಪಾ, ಸರಿಯೋ, ಅಥವಾ ಆಕೆಗಾಗಿ ನಾನು ಇಷ್ಟೆಲ್ಲಾ ಮಾಡಬೇಕಿದ್ದರೆ ಆಕೆ ಇದಕ್ಕೆ ಅರ್ಹಳೇ ಎಂದೆಲ್ಲಾ ಯೋಚಿಸಲಿಲ್ಲ. ಆಕೆಯ ಪ್ರೀತಿಯಲ್ಲಿ ಕೊಚ್ಚಿಹೋಗಿ ಜಗತ್ತು ಮರೆತಿದ್ದೆ. ಅದೇ ನನ್ನ ಇಡೀ ಬದುಕಿಗೆ ಮುಳುವಾಯಿತು ಎಂದು ಗೋಳಿಟ್ಟರು ವಿವೇಕ್.
ವೃತ್ತಿ ಬದುಕಷ್ಟೇ ಅಲ್ಲ. ಸಲ್ಮಾನ್ ಖಾನ್‌ನ ತಮ್ಮ ಸೊಹೈಲ್ ಖಾನ್ ನನ್ನ ಆತ್ಮೀಯ ಗೆಳೆಯನಾಗಿದ್ದ. ಅಂದಿನ ಘಟನೆಯಿಂದಾಗಿ ನಾನು ಅವನ ಸ್ನೇಹ ಕಳೆದುಕೊಂಡೆ. ಆತ ಆ ಘಟನೆ ನಡೆದಾಗ, ಅಣ್ಣನ ಬಳಿ ನಾನು ಮಾತಾಡುತ್ತೇನೆ ಎಂದು ನನ್ನ ಬೆನ್ನು ತಟ್ಟಿ ಹೋಗಿದ್ದ. ಆದರೆ ನಂತರ ಆತ ನನ್ನ ಜತೆ ಮಾತನಾಡಲೇ ಇಲ್ಲ. ನಾನು ಸಾಕಷ್ಟು ಪ್ರಯತ್ನಿಸಿದೆ. ಕ್ಷಮಿಸು ಎಂದೆ. ಭೇಟಿಯಾಗಿ ಕ್ಷಮೆ ಕೋರುತ್ತೇನೆಂದೆ. ಆದರೂ ಸೊಹೈಲ್ ಕೇಳಲಿಲ್ಲ. ಇಂದಿಗೂ ನಾನು ನನ್ನ ಗೆಳೆಯನನ್ನು ಮರಳಿ ಪಡೆಯಲಾಗಲಿಲ್ಲ. ಇಡೀ ಸಲ್ಮಾನ್ ಖಾನ್ ಕುಟುಂಬ ನನ್ನ ಜತೆಗೆ ಹಗೆ ಸಾಧಿಸುತ್ತಿದೆ ಎಂದರು ವಿವೇಕ್.
ಹಾಗಾದರೆ ಈ ನಿಮ್ಮ ಅಂದಿನ ಪ್ರೀತಿಯಿಂದ ಕಲಿತ ಪಾಠವೇನು? ಎಂದರು ಫರ್ಹಾ. ಅದಕ್ಕೆ ಅಷ್ಟೇ ಸಾವಧಾನದಿಂದ ಉತ್ತರಿಸಿದ ವಿವೇಕ್, ನಾನು ಇನ್ನು ಪ್ರೀತಿಸಿದ ಹುಡುಗಿಗಾಗಿ ಏನಾದರೂ ಮಾಡುತ್ತಿದ್ದರೆ, ಖಂಡಿತವಾಗಿಯೂ ಆಕೆ ಇದಕ್ಕೆ ಅರ್ಹಳೇ ಎಂದು ಯೋಚಿಸುತ್ತೇನೆ. ಇದು ನಾನು ಕಲಿತ ಪಾಠ ಎಂದರು.
ವಿವೇಕ್ ಟಿವಿ ಪರದೆಯಲ್ಲಿ ಇಷ್ಟೆಲ್ಲಾ ಜಗಜ್ಜಾಹೀರು ಮಾಡಿದ್ದನ್ನು ಅತ್ತ ಗೋವಾದಲ್ಲಿ ಚಿತ್ರೀಕರಣದ ಸಂದರ್ಭ ಐಶ್ವರ್ಯಾ ರೈ ನೋಡಿದ್ದಾಳೆ. ಹಳೆಯ ಇತಿಹಾಸವೆಲ್ಲ ಮತ್ತೆ ಗರಿಗೆದರುವುದನ್ನು ಕಂಡು ಬಂಗಾರದಂತಹ ನನ್ನ ಈಗಿನ ಜೀವನವನ್ನು ಹಾಳು ಮಾಡಲು ಇವರ್ಯಾರು ಎಂದು ಜೋರಾಗಿ ಅತ್ತಿದ್ದಾಳಂತೆ. ಶೂಟಿಂಗ್ ಸಂದರ್ಭವೂ ಅನ್ಯಮನಸ್ಕಳಾಗಿ ಕಣ್ಣೀರಿಟ್ಟಿದ್ದಾಳಂತೆ ಐಶ್.
ವಿವೇಕ್ ಒಬ್ಬ ಮರ್ಯಾದಸ್ಥನಂತೆ ನಡೆಯುತ್ತಿಲ್ಲ. ಹಳೆಯ ಇತಿಹಾಸವನ್ನು ಈಗ ಕೆದಕಿದ್ದಾನೆ. ಇದರಲ್ಲಿ ಅರ್ಥವಿಲ್ಲ. ನನ್ನ ಜೀವನದಲ್ಲಿ ನಾನು ಹೇಗೆ ಹೆಜ್ಜೆಯಿಡಬೇಕೆಂದು ನಿರ್ಧಾರ ತೆಗೆದುಕೊಳ್ಳುವ ಹಕ್ಕು ನನಗಿದೆ. ಅದನ್ನೇ ಮಾಡಿದ್ದೇನೆ. ಅವರ ಜೀವನ ಹಾಳಾಗಿದ್ದಕ್ಕೆ ನನ್ನನ್ನು ದೂರುವ, ಬಲಿಪಶುವನ್ನಾಗಿ ಮಾಡುವ ಹಕ್ಕು ಅವರಿಗಿಲ್ಲ. ಅದು ಅವರ ಹಣೆಬರಹ. ನ್ನ ಬದುಕು ನನ್ನದು. ದಯವಿಟ್ಟು ನನ್ನನ್ನು ನನ್ನಷ್ಟಕ್ಕೆ ಬದುಕಲು ಬಿಡಿ ಎಂದು ಅತ್ತಿದ್ದಾಳಂತೆ ಐಶ್.