ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಕಿರುತೆರೆ » ರಾಖಿ ಕಾ ಸ್ವಯಂವರ: ಇಲೇಶ್‌ನ ರಾಖಿ ಮದ್ವೆಯಾಗಲ್ಲ! (Rakhi Sawant | Elesh Parujanwala | Rakhi Ka Swayamwar)
ಕಿರುತೆರೆ
Feedback Print Bookmark and Share
 
Rakhi Sawant
IFM
ಅಂತೂ ರಾಖಿ ತಾನು ಎಂದೆಂದಿಗೂ ರಾಖಿಯೇ ಎಂದು ಸಾಬೀತುಪಡಿಸಿದ್ದಾಳೆ. ಅಷ್ಟೇ ಅಲ್ಲ, ಹಲವು ಭವಿಷ್ಯ ನುಡಿದವರ ಮಾತುಗಳನ್ನೂ ಸತ್ಯವಾಗಿಸಿದ್ದಾಳೆ. 'ನಾನು ಇಲೇಶ್ ಮದುವೆಯಾಗುತ್ತೇವೆ. ಈಗ ಜಸ್ಟ್ ಎಂಗೇಜ್‌ಮೆಂಟ್ ಮತ್ತೆ ಮದುವೆಯಾಗಿ ಕೆನಡಾಕ್ಕೆ ಹಾರುತ್ತೇನೆ' ಎಂದೆಲ್ಲ ಪುಂಖಾನುಪುಂಖ ಶಂಖ ಊದಿದ ರಾಖಿ ಈಗ, 'ನಾನು ಇಲೇಶ್‌ನನ್ನು ಮದುವೆ ಆಗಲ್ಲ' ಎನ್ನುವ ಮೂಲಕ ಸ್ವಯಂವರ ಕೇವಲ ಮದುವೆಯಾಟವೋ... ಅಥವಾ ಪಬ್ಲಿಸಿಟಿ ಗಿಮಿಕ್ಕೋ... ಚಾನಲ್‌ಗಳ ಟಿಆರ್‌ಪಿ ತಂತ್ರವೋ ಎಂಬೆಲ್ಲ ಪ್ರಶ್ನೆಗಳಿಗೆ ಪರೋಕ್ಷವಾಗಿ ಉತ್ತರ ನೀಡಿದ್ದಾಳೆ.

ಹೌದು. ರಾಖಿ ಎನ್‌ಡಿಟಿವಿ ಇಮ್ಯಾಜಿನ್ ಚಾನಲ್‌ನಲ್ಲಿ ರಾಖಿ ಕಾ ಸ್ವಯಂವರ್ ರಿಯಾಲಿಟಿ ಶೋ ಮೂಲಕ ಆಯ್ಕೆ ಮಾಡಿಕೊಂಡ ಕೆನಡಾ ಗಂಡು ಇಲೇಶ್ ಪರುಜನ್ವಾಲಾರನ್ನು ಮದುವೆಯಾಗೋದಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದಾಳೆ.

ರಾಖಿಯ ಪರಮಾಪ್ತ ಮೂಲಗಳ ಪ್ರಕಾರ, ರಾಖಿ ಹಾಗೂ ಇಲೇಶ್ ನಡುವೆ ಕೆಲವು ಹೊಂದಿಕೆಯಾಗದಂತಹ ವ್ಯಕ್ತಿತ್ವವಿದೆ. ಇಬ್ಬರ ಸಂಸ್ಕೃತಿಯೂ ಸಂಪೂರ್ಣ ಭಿನ್ನ. ಹಾಗಾಗಿ ಯಾರಿಗಾದರೊಬ್ಬರಿಗೆ ಮತ್ತೊಬ್ಬರು ತ್ಯಾಗ ಮಾಡಿ ಬದಲಾಗಲು ಸಾಧ್ಯವೇ ಇಲ್ಲ. ಇಲೇಶ್ ಸಂಪೂರ್ಣ ಪಾಶ್ಚಾತ್ಯ ಬದುಕಿನ ಶೈಲಿಯ ಹುಡುಗನಾದರೆ, ರಾಖಿ ಹೇಳುವಂತೆ ರಾಖಿ ಒಬ್ಬ ಪಕ್ಕಾ ಭಾರತೀಯ ಮನಸ್ಥಿತಿಯ ಹುಡುಗಿಯಂತೆ. ಹಾಗಾಗಿ ಸ್ವಲ್ಪವೂ ಭಾರತೀಯ ಮನಸ್ಥಿತಿಯೇ ಇಲ್ಲದ ಇಲೇಶ್ ಜತೆಗೆ ರಾಖಿಗೆ ಸ್ವಲ್ಪವೂ ಹೊಂದಾಣಿಕೆ ಆಗುತ್ತಿಲ್ಲವಂತೆ. ಹಾಗಾಗಿ ರಾಖಿ ಹಾಗೂ ಇಲೇಶ್ ಅವರ ಸ್ವಯಂವರ ಅಧ್ಯಾಯ ಇಲ್ಲಿಗೇ ಮುಗಿದಂತೆ ಎನ್ನಲಾಗಿದೆ.
Rakhi Sawant, Elesh Parujanwala
IFM


ಸದ್ಯ ರಾಖಿ ಹಾಗೂ ಇಲೇಶ್ ಹೊಸ ರಿಯಾಲಿಟಿ ಶೋ ಪತಿ, ಪತ್ನಿ ಔರ್ ವೋ ನಲ್ಲಿ ಬ್ಯುಸಿಯಾಗಿದ್ದಾರೆ. ಈ ರಿಯಾಲಿಟಿ ಶೋ ಮುಗಿಯುವ ಸಂದರ್ಭ ರಾಖಿಯೇ ಸ್ವತಃ ತನ್ನ ಮುರಿದ ಮದುವೆಯನ್ನು ಜಗತ್ತಿಗೇ ಅಧಿಕೃತವಾಗಿ ಸಾರಲಿದ್ದಾಳಂತೆ!!!

ಫ್ಲ್ಯಾಶ್‌ಬ್ಯಾಕ್1: ಅಂದು ರಾಖಿ ಕಾ ಸ್ವಯಂವರಕ್ಕೂ ಮೊದಲು ಪತ್ರಕರ್ತರು ರಾಖಿಯಲ್ಲಿ, 'ಮದುವೆಯೇನೋ ಸರಿ, ಡಿವೋರ್ಸ್ ಯಾವಾಗ?' ಅಂತ ಕಿಚಾಯಿಸಿದ್ದರು. ಅದಕ್ಕೆ ರಾಖಿ ಗುರ್ರ್ ಎನ್ನುತ್ತಾ ಸಿಟ್ಟು ಮಾಡಿ, 'ನೀವು ಯಾವಾಗಲೂ ಕೆಡುಕನ್ನೇ ಬಯಸುತ್ತೀರಿ. ಆ ದೇವರು ನಾನು ಹುಡುಕಿಕೊಳ್ಳುವ ಗಂಡನ್ನು ನನ್ನ ಜತೆಗೇ ಸದಾ ಇಟ್ಟಿರಲಿ' ಎಂದಿದ್ದಳು ನಾಟಕೀಯವಾಗಿ!

ಫ್ಲ್ಯಾಶ್‌ಬ್ಯಾಕ್2: ರಾಖಿಯ ಸ್ವಯಂವರಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ ಎನ್ನುವಾಗ ರಾಖಿ ಇಲೇಶ್‌ನ ಗುಣಗಾನ ಮಾಡಿದ್ದೇ ಮಾಡಿದ್ದು. 'ಕೆನಡಾದ ಇಲೇಶ್ ನನಗೆ ತುಂಬ ಇಷ್ಟವಾಗಿದ್ದಾನೆ. ಆತನ ಕಣ್ಣು ನೋಡಿದರೇ ಗೊತ್ತಾಗುತ್ತದೆ, ಆತ ನನ್ನನ್ನು ನಿಷ್ಕಲ್ಮಶವಾಗಿ ಎಷ್ಟೊಂದು ಪ್ರೀತಿಸುತ್ತಿದ್ದಾನೆ ಅಂತ. ನನ್ನ ಮನಸ್ಸು ಇಲೇಶ್ ಕಡೆಗೇ ವಾಲುತ್ತಿದೆ' ಅಂತ ನಾಚಿ ನೀರಾಗಿದ್ದಳು.
Rakhi Sawant
WD


ಫ್ಲ್ಯಾಶ್‌ಬ್ಯಾಕ್3: ಆದರೆ ಅಷ್ಟಾಗಲೇ ಹಲವರು ರಾಖಿ ಮದುವೆನೇ ಆಗಲ್ಲ. ಇದೆಲ್ಲಾ ಬರಿ ನಾಟಕ ಎಂದಿದ್ದರು. ಆದರೆ ರಾಖಿ, 'ಖಂಡಿತವಾಗಿಯೂ ಸ್ವಯಂವರದಂದೇ ಮದುವೆಯಾಗಿ ಆತನೊಂದಿಗೆ ನೂರ್ಕಾಲ ಬಾಳುತ್ತೇನೆ' ಎಂದು ಎದೆ ತಟ್ಟಿ ಹೇಳಿದ್ದಳು!

ಫ್ಲ್ಯಾಶ್‌ಬ್ಯಾಕ್4: 'ಮದುವೆಯಾಗಲ್ಲ, ಎಂಗೇಜ್‌ಮೆಂಟ್. ಇನ್ನೆರಡು ವರ್ಷದೊಳಗೆ ಒಬ್ಬರನ್ನೊಬ್ಬರು ಅರಿತುಕೊಂಡು ಖಂಡಿತವಾಗಿಯೂ ಮದುವೆಯಾಗುತ್ತೇವೆ' ಎಂದು ನಿಶ್ಚಿತಾರ್ಥ ಮಾಡಿಕೊಂಡ ರಾಖಿ ರಿಯಾಲಿಟಿ ಶೋ ಮೂಲಕ ಹುಡುಗನನ್ನು ಆಯ್ಕೆ ಮಾಡಿಕೊಂಡಳು ಅಂತ ಇತಿಹಾಸ ಬರೇದೇ ಬಿಟ್ಟಿದ್ದಳು.

ಫ್ಲ್ಯಾಶ್‌ಬ್ಯಾಕ್5: ಕೆಲದಿನಗಳ ನಂತರ, 'ಇಲೇಶ್ ಮಾತಾಡೋ ಇಂಗ್ಲೀಷ್ ನನಗೆ ಸರಿಯಾಗಿ ಅರ್ಥವೇ ಆಗಲ್ಲ. ಆತನಿಗೆ ಹಿಂದಿ ಬರಲ್ಲ. ನನಗೆ ಇಂಗ್ಲೀಷ್ ಸರಿಯಾಗಿ ಬರಲ್ಲ. ಒಮ್ಮೊಮ್ಮೆ ಆತ ಮಾತಾಡಿದ್ದೇನು ಅಂತ ಅರ್ಥ ಮಾಡಿಕೊಳ್ಳಲು ಒಂದು ಗಂಟೆ ಹಿಡಿಯುತ್ತೆ' ಅಂದಿದ್ದಳು.

ಫ್ಲ್ಯಾಶ್‌ಬ್ಯಾಕ್6: 'ಇಲೇಶ್‌ ಸ್ವಯಂವರದಲ್ಲಿ ತಾನೊಬ್ಬ ಪಕ್ಕಾ ಶ್ರೀಮಂತನಂತೆ ಕಂಗೊಳಿಸಿದ್ದು ಮಾತ್ರ. ಆತನಿಗೇನೂ ಸ್ವಂತ ಆಸ್ತಿಯೇ ಇಲ್ಲ. ಎಲ್ಲವೂ ಅವನಪ್ಪನ ಹೆಸರಿನಲ್ಲೇ ಇದೆ. ಆದರೆ, ಇಲೇಶ್‌ಗೆ ಮುಂಬೈನಲ್ಲಿ ಸ್ವಂತ ಮನೆಯೇ ಇಲ್ಲ. ರೂಂ ಮಾಡಿಕೊಂಡು ತನ್ನ ಗೆಳೆಯನ ಜತೆಗೆ ಸಾದಾ ಫ್ಲ್ಯಾಟ್‌ನಲ್ಲಿ ವಾಸಿಸುತ್ತಿದ್ದಾನೆ. ಆತ ವಿದ್ಯಾವಂತನಿರಬಹುದು. ಆದರೆ ಹಣಕ್ಕಾಗಿ ನನ್ನನ್ನು ಅವಲಂಬಿಸಬಾರದು. ಬಾಡಿಗೆ ಮನೆಯಲ್ಲಿ ಇರಲು ನನ್ನ ಕೈಯಲ್ಲಿ ಸಾಧ್ಯವಿಲ್ಲ. ಆತ ಸ್ವಂತ ಬಂಗಲೆ ಮಾಡಬೇಕು. ಆಮೇಲಷ್ಟೆ ನನಗೂ ಅವನಿಗೂ ಮದುವೆ' ಅಂತ ವರಸೆ ಬದಲಿಸಿದ್ದಳು ಈ ರಾಖಿ ಸಾವಂತ್!!!

ಆಗಲೇ ಬಹುತೇಕರಿಗೆ ಇಲೇಶ್ ಜತೆಗೆ ರಾಖಿ ಮದುವೆ ಮುಗಿದ ಅಧ್ಯಾಯ ಅನಿಸಿತ್ತು. ಅಷ್ಟಾಗಲೇ ಇಂಥದ್ದೇ ರಿಯಾಲಿಟಿ ಶೋ ಮೂಲಕ ಮದುವೆಯಾಗಲು ರಾಹುಲ್ ಮಹಾಜನ್ ರೆಡಿಯಾಗಿ ಕಾದು ನಿಂತಿದ್ದಾರೆ!
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರಾಖಿ ಕಾ ಸ್ವಯಂವರ, ರಾಖಿ ಸಾವಂತ್, ಇಲೇಶ್ ಪರುಜನ್ ವಾಲಾ, ರಿಯಾಲಿಟಿ ಶೋ