ಮುಖ್ಯ ಪುಟಮನರಂಜನೆ » ಬಾಲಿವುಡ್ » ಕಿರುತೆರೆ » ಬಿಗ್ ಬಾಸ್ 3: ಟಿವಿಯಲ್ಲಿ ಬಟ್ಟೆ ಬಿಚ್ಚಲಿದ್ದಾಳಂತೆ ಸೆಕ್ಸೀ ಶೆರ್ಲಿನ್! (Sherlyn Chopra | Rakhi Sawant | TRP | Bigg Boss season 3)
ಬಿಗ್ ಬಾಸ್ 3: ಟಿವಿಯಲ್ಲಿ ಬಟ್ಟೆ ಬಿಚ್ಚಲಿದ್ದಾಳಂತೆ ಸೆಕ್ಸೀ ಶೆರ್ಲಿನ್!
ಸೋಮವಾರ, 26 ಅಕ್ಟೋಬರ್ 2009( 15:57 IST )
IFM
ಯಾವಾಗಲೂ ಮನ್ಮಥ ಬಾಣ ನೆಟ್ಟವಳ ಹಾಗೆ ವರ್ತಿಸುತ್ತಾ, ಮಾತನಾಡುತ್ತಾ, ಬಾಲಿವುಡ್ ತುಂಬೆಲ್ಲಾ ಅಡ್ಡಾಡುವ ಶೆರ್ಲಿನ್ ಛೋಪ್ರಾ ಈಗ ಒಂದೊಂದಾಗಿ ತನ್ನ ಬಟ್ಟೆಯನ್ನು ಮಾದಕವಾಗಿ ಬಿಚ್ಚಲಿದ್ದಾಳಂತೆ. ಅದೂ ಕೂಡಾ ಒಂದು ಚಾನಲ್ಲಿನ ಟಿಆರ್‌ಪಿಗಾಗಿ!
ಹೌದು. ಶೆರ್ಲಿನ್ ಛೋಪ್ರಾ ಯಾವಾಗಲೂ ಬಟ್ಟೆ ಬಿಚ್ಚಿದ್ದಕ್ಕಿಂತ ಬಟ್ಟೆ ಹಾಕಿದ್ದೇ ಕಡಿಮೆ ಎನ್ನಬಹುದು. ಇತ್ತೀಚಿನ ದಿನಗಳಲ್ಲಂತೂ ಆಕೆಗೆ ಬಟ್ಟೆ ಹಾಕುವುದೇ ಮರೆತು ಹೋಗುತ್ತಿದೆಯಂತೆ ಎಂದೆಲ್ಲ ಗಾಸಿಪ್ಪಿಗರು ಕೀಟಲೆ ಮಾಡಿ ನಗುತ್ತಿದ್ದರು. ತನ್ನ ದೇಹದ ಯಾವುದೇ ಅಂಗಾಂಗಗಳ ಬಗ್ಗೆಯೂ, ಬಟ್ಟೆ ಬಿಚ್ಚಿದಷ್ಟೇ ಸುಲಭವಾಗಿ ನಾಚಿಕೆಯೇ ಇಲ್ಲದೆ ಎಲ್ಲಾ ವರದಿಯನ್ನೂ ಪುಂಖಾನುಪುಂಖವಾಗಿ ಹರಿದುಬಿಡುವ ಶೆರ್ಲಿನ್ ಷೋಪ್ರಾ ಎದೆಗಾರಿಕೆಯನ್ನು ಎಲ್ಲರೂ ಬಲ್ಲರು. ಇಂತಿಪ್ಪ ಹಾಟ್ ಕನ್ಯಾಮಣಿ ಈಗ ಕಲರ್ಸ್ ಟಿವಿಗಾಗಿ ಒಂದೊಂದೇ ಉಡುಪನ್ನು ಮಾದಕವಾಗಿ ನಿಧಾನವಾಗಿ ಕಳಚಲಿದ್ದಾಳಂತೆ.
IFM
ಕಲರ್ಸ್ ಟಿವಿ ವಾಹಿನಿ ನಡೆಸುವ ಲಂಡನ್ನಿನ ಬಿಗ್ ಬ್ರದರ್ ಥರಹದ್ದೇ ಕಾರ್ಯಕ್ರಮವಾದ ಬಿಗ್ ಬಾಸ್ ಈಗ ಮೂರೇ ಭಾಗವನ್ನು ತಲುಪಿದೆ. ಮೊದಲೆರಡು ಭಾಗಗಳಲ್ಲಿ ಬಿಗ್ ಬ್ರದರ್ ಶೋವನ್ನು ನಿರ್ವಹಿಸಿದ್ದು ಶಿಲ್ಪಾ ಶೆಟ್ಟಿ. ಈಗ ಆ ಸ್ಥಾನ ಬಿಗ್ ಬಿ ಅಮಿತಾಬ್ ಬಚ್ಚನ್ ಹೆಗಲೇರಿರುವುದು ಗೊತ್ತೇ ಇದೆ. ಆ ಶೋನಲ್ಲಿ ಈ ಬಾರಿ ಶೆರ್ಲಿನ್ ಛೋಪ್ರಾ ಎಂಬ ಹಾಟ್ ಬಿಕಿನಿ ಧಾರಿಣಿಗೂ ಸ್ಪರ್ಧಿಯಾಗಿ ಅವಕಾಶ ನೀಡುವಾಗಲೇ ಬಹುತೇಕರು ಅಂದುಕೊಂಡಿದ್ದರು, ಈ ಬಾರಿಯ ಬಿಗ್ ಬಾಸ್‌ನಲ್ಲಿ ಖಂಡಿತಾ ಸ್ವಲ್ಪ 'ಬಿಚ್ಚು'ನುಡಿಗಳಿವೆಯೆಂಬುದು. ಅಂದುಕೊಡವರ ಊಹನೆ ನಿಜವಾಗಿದೆ.
ಬಿಗ್ ಬಾಸ್ ಶೋನಲ್ಲಿ ಈಗಾಗಲೇ ಶೆರ್ಲಿನ್‌ಳ ಮಾದಕ ಭಂಗಿಗಳು ಬೇಕಾಬಿಟ್ಟಿಯಾಗಿ ಪ್ರದರ್ಶನಗೊಳ್ಳುತ್ತಿವೆ. ಆದರೆ ಇನ್ನು ಮುಂದಿನ ಕಂತುಗಳಲ್ಲಿ ಆಕೆ ಇನ್ನೂ ಸ್ವಲ್ಪ ಮುಂದುವರಿಲಿದ್ದಾಳೆ ಎಂಬ ಮಾತುಗಳೂ ಕೇಳಿ ಬಂದಿವೆ.
ಚಾನಲ್ ಟಿಆರ್‌ಪಿ ಹೆಚ್ಚಿಸಲು ಸ್ವಯಂವರವೇ ಆದ ಇನ್ನೊಬ್ಬ ಬಿಚ್ಚಮ್ಮ ರಾಖಿ ಸಾವಂತ್ ಹಾದಿಯನ್ನೀಗ ಶೆರ್ಲಿನ್ ತುಳಿಯುತ್ತಿದ್ದಾಳೆ. ಸ್ವಯಂವರವಾಗಿ ಅಲ್ಲ, ಟಿಆರ್‌ಪಿಗಾಗಿ ಒಂದೊಂದೇ ಬಟ್ಟೆಗಳನ್ನು ಕಳಚಿ ಪ್ರೇಕ್ಷಕರಲ್ಲಿ ಇನ್ನಷ್ಟು, ಮತ್ತಷ್ಟು ಕುತೂಹಲ ಸೃಷ್ಟಿಸಲು! ಹಾಗಾಗಿ ಈ ನವೆಂಬರ್ ಚಳಿಯಲ್ಲೂ ಎಲ್ಲರ ಮನೆಯ ಟೆಂಪರೇಚರ್ರೂ ಏರಲಿದೆಯೇನೋ... ಒಟ್ಟಾರೆ, ಚಾನಲ್‌ಗಂತೂ ಭರ್ಜರಿ ಟಿಆರ್‌ಪಿ!!