ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಕಿರುತೆರೆ » ರಾಖಿ ಸಾವಂತ್ ಹಾಗೂ ಶೆರ್ಲಿನ್‌ರ ಬಿಚ್ಚುಡುಗೆ ರಂಪಾಟ! (IshQ Bector | Rakhi Sawant | Sherlyn Chopra | Jhagde)
ಕಿರುತೆರೆ
Bookmark and Share Feedback Print
 
Rakhi Sawant
IFM
ಏನಾದರೊಂದು ಎಡವಟ್ಟು ಮಾಡಿ ಸುದ್ದಿಯಾಗುತ್ತಲೇ ಇರುವ ರಾಖಿ ಸಾವಂತ್ ಈಗ್ಗೆ ಕೆಲ ದಿನಗಳಿಂದ ಬಾಯಿ ಮುಚ್ಚಿಕೂತಿದ್ದಂತೂ ದೊಡ್ಡ ಸುದ್ದಿಯೇ ನಿಜ. ಅದೇನೇ ಇರಲಿ, ಈಗ ಮತ್ತೆ ಸುದ್ದಿ ಮಾಡುವತ್ತ ಹೊರಟಿದ್ದಾಳೆ. ಕೆನಡಾ ಮೂಲದ ಸಂಗೀತ ನಿರ್ದೇಶಕ ಇಶ್ಕ್ ಬೆಕ್ಟರ್ ಹೊರತರುತ್ತಿರುವ ಮ್ಯೂಸಿಕ್ ಆಲ್ಬಂನಲ್ಲಿ ರಾಖಿ ಸಾವಂತ್ ಸಿಕ್ಕಾಪಟ್ಟೆ ಗ್ಲ್ಯಾಮರಸ್ ಆಗಿ ಕಾಣಿಸಿಕೊಂಡಿದ್ದಾಳಂತೆ. ಆಕೆ ಈ ಪರಿ ಹಾಟ್ ಆಗಿದ್ದನ್ನು ಈವರೆಗೆ ಯಾರೂ ನೋಡಿಲ್ಲವಂತೆ!

ಅಗ್ಲಿ ಔರ್ ಪಗ್ಲಿ, ಬಿಲ್ಲು ಬಾರ್ಬರ್, ರೇಸ್ ಮುಂತಾಹದ ಚಿತ್ರಗಳಿಗೆ ರಾಕಿಂಗ್ ನಂಬರ್‍‌ಗಳನ್ನು ನೀಡಿದ ಇಶ್ಕ್ ಬೆಕ್ಟರ್ ಈಗ ಜಗ್ದೇ ಅನ್ನುವ ಆಲ್ಬಂ ತರವತ್ತ ಪ್ರಯತ್ನ ನಡೆಸುತ್ತಿದ್ದಾರೆ. ಈ ಆಲ್ಬಂನಲ್ಲಿ ಸ್ವತ- ಇಶ್ಕ್ ಅಭಿನಯಿಸಿದ್ದು, ರಾಖಿಯೂ ಇದ್ದಾಳೆ. ರಾಖಿ ಹಾಗೂ ಇಶ್ಕ್ ಇಬ್ಬರೂ ಬಾಕ್ಸಿಂಗ್ ಮಾಡುವ ಸನ್ನಿವೇಶವೂ ಹಾಡಿನೊಂದಿಗಿದೆಯಂತೆ. ಬಾಕ್ಸಿಂಗ್ ಸಂದರ್ಭ ರಾಖಿ ಸಿಕ್ಕಾಪಟ್ಟೆ ಹಾಟ್ ಉಡುಗೆ ಧರಿಸಿ, ತಲೆಕೂದಲನ್ನು ಚಿಕ್ಕದಾಗಿ ಹುಡುಗರಂತೆ ಕತ್ತರಿಸಿಕೊಂಡ ಲುಕ್‌ನಲ್ಲಿ ಕಂಗೊಳಿಸಿದ್ದಾಳಂತೆ.

Sherlyn Chopra
IFM
ಇಷ್ಟೆಲ್ಲಾ ನಡೆಯುವ ಹೊತ್ತಿನಲ್ಲಿ ಇಶ್ಕ್ ಬೆಕ್ಟರ್ ಕಣ್ಣು ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಬೇಕೋ ಬೇಡವೋ ಎಂಬಂತೆ ಪಟ್ಟಪುಟ್ಟ ತುಂಡಗಿಯನ್ನು ತೊಟ್ಟು ಬೇಕಾಬಿಟ್ಟಿಯಾಗಿ ಸ್ವಿಮ್ಮಿಂಗ್ ಪೂಲ್‌ನಲ್ಲಿ ಮುಳುಗೇಳುತ್ತಿದ್ದ ಬಿಕಿನಿ ಸುಂದರಿ ಶೆರ್ಲಿನ್ ಛೋಪ್ರಾ ಮೇಲೆ ಬಿದ್ದಿದೆ. ರಾಖಿಯಂತೆಯೇ ಆಕೆಯೂ ಪುಟ್ಟದಾಗಿ ಹುಡುಗರ ಹಾಗೆ ಕೂದಲು ಕತ್ತರಿಸಿದ್ದಳು. ಸರಿ, ರಾಖಿಯ ಹಾಡಿಗೆ ಈಕೆಯ ಪ್ರಯೋಗವನ್ನೂ ಮಾಡೋಣ ಎಂದು ಶೆರ್ಲಿನ್ ಛೋಪ್ರಾರನ್ನೂ ಕರೆಸಿದರು ಇಶ್ಕ್ ಬೆಕ್ಟರ್.

ಶೆರ್ಲಿನ್ ಕರೆಸಿದ್ದೇ ನಿಗಿನಿಗಿ ಕೆಂಡದಂತಿದ್ದ ರಾಖಿಯ ದೇಹ ಈಗ ಕೋಪದ್ಲಲಿ ಉರಿಯತೊಡಗಿದೆಂತೆ. ಶೆರ್ಲಿನ್ ಹಾಗೂ ರಾಖಿ ಇಬ್ಬರೂ ಈ ಹಿಂದೆ ಕೋತಿಗಳ ಹಾಗೆ ಕಿತ್ತಾಡಿದ್ದು ಗೊತ್ತೇ ಇದೆ. ಅಷ್ಟೇ ಅಲ್ಲ, ರಾಖಿಯನ್ನು ನ್ಯಾನೋಗೂ ತನ್ನನ್ನು ಮರ್ಸಿಡಿಸ್ ಬೆಂಝ್ ಕಾರಿಗೂ ಶೆರ್ಲಿನ್ ಹೋಲಿಸುವ ಮೂಲಕ ಚೀಪ್ ಕಮೆಂಟ್ ಮಾಡಿದ್ದಳು.

ಇದರಿಂದ ರೋಸಿದ ರಾಖಿ ತನ್ನ ಮೇಲೆ ಚೀಪ್ ಕಮೆಂಟ್ ಮಾಡಿದ ಶೆರ್ಲಿನ್ ಮೇಲೆ ಉಗ್ರ ಸ್ವರೂಪ ತಾಳಿದ್ದಾಲಂತೆ. ಆದರೂ ಅಭಿಮಾನಿಗಳು ಮಾತ್ರ ಏನಾದರೂ ರಾಖಿಗೆ ರಾಖಿಯೇ ಸಾಟಿ, ಶೆರ್ಲಿನ್ ರಾಖಿಯಾಗಲೂ ಸಾಧ್ಯವಾಗೋದೇ ಇಲ್ಲ ಎಂದಿದ್ದು ಸ್ವಲ್ಪ ಮಟ್ಟಿನ ರಾಖಿಯ ಕೋಪ ತಾಪ ತಣಿಸಲು ನೆರವಾಗಿದೆ. ಅಂತೂ ರಾಖಿಯ ಗ್ಲ್ಯಾಮರಸ್ ಬಿಚ್ಚುಡುಗೆಯ ಜಗ್ದೇ ನೋಡಲು ಇನ್ನೂ ಸ್ವಲಪ ಸಮಯ ಕಾಯಲೇಬೇಕು!
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರಾಖಿ ಸಾವಂತ್, ಶೆರ್ಲಿನ್ ಛೋಪ್ರಾ, ಜಗ್ದೇ, ಇಶ್ಕ್ ಬೆಕ್ಟರ್