ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಕಿರುತೆರೆ » ಪರಿಸರಕ್ಕಾಗಿ ಬಟ್ಟೆಬಿಚ್ಚಿದ ನೇಹಾ ಧೂಪಿಯಾಳ ಹಾಟ್ ಫೋಟೋ! (Neha Dhupia | Go Green | Bollywood | Hot Photoshoot)
ಕಿರುತೆರೆ
Bookmark and Share Feedback Print
 
Neha Dhupia
IFM
ಬಾಲಿವುಡ್ಡಿನ ಸೆಕ್ಸೀ ಹಾಟ್ ಬೆಡಗಿ ನೇಹಾ ಧೂಪಿಯಾ ಈಗ ಪ್ರಕೃತಿ ಬಗ್ಗೆ ಕಾಳಜಿ ವಹಿಸಲಾರಂಭಿಸಿದ್ದಾಳೆ. ಟಿವಿ, ಕ್ಯಾಲೆಂಡರ್, ಭಿತ್ತಿಚಿತ್ರಗಳು ಹೀಗೆ ಎಲ್ಲೆಡೆಯೂ 'ಹಸಿರು ಉಳಿಸಿ' ಎನ್ನುವ ಸಂದೇಶ ಸಾರುತ್ತಿದ್ದಾಳೆ. ಸುಮ್ಮನೆ ಹಸಿರು ಉಳಿಸಿ ಎಂದು ಆಕೆ ಬೊಬ್ಬೆ ಹೊಡೆದರೆ ಯಾರು ಕೇಳಿಯಾರು ಹೇಳಿ? ಅದಕ್ಕೇ ಆಕೆ ಹಸಿರು ಉಳಿಸಿ ಎನ್ನುತ್ತಾ ತನ್ನೆಲ್ಲ ವಸ್ತ್ರಗಳ್ನೂ ಕಳಚಿದ್ದಾಳೆ!

Neha Dhupia
IFM
ಹೌದು. ಈಗ ಆಕೆ ಹಸಿರು ಉಳಿಸಿ ಎಂದಿದ್ದಕ್ಕಿಂತಲೂ ಆಕೆ ವಸ್ತ್ರ ಬಿಚ್ಚಿದ್ದೇ ಆಕೆಯ ಪರಿಸರ ಉಳಿಸಿ ಕಾಳಜಿಗಿಂತ ದೊಡ್ಡ ಸುದ್ದಿಯಾಗಿದೆ ಎಂಬುದರಲ್ಲಿ ಆಶ್ಚರ್ಯವೇನಿಲ್ಲ. ಛಾಯಾಗ್ರಾಹಕ ಜತಿನ್ ಕೃಪಾಲಾನಿ ಪರಿಸರದ ಪ್ರಮುಖ ಅಂಶಗಳಾದ ನೀರು ಗಾಳಿ, ಮಣ್ಣು ಹಾಗೂ ಗಿಡಮರಗಳನ್ನು ಸಾಂಕೇತಿಕವಾಗಿ ನೇಹಾ ಧೂಪಿಯಾರ ಮೂಲಕ ಚೆನ್ನಾಗಿ ಸೆರೆಹಿಡಿದಿದ್ದಾರೆ. ಇವು ಗೋ ಗ್ರೀನ್ ಎಂಬ ಕ್ಯಾಲೆಂಡರ್‌ಗಾಗಿ ತೆಗಿಸಿದ ಛಾಯಾಚಿತ್ರಗಳು.

Neha Dhupia
IFM
ನೇಹಾ ಧೂಪಿಯಾ ಬಟ್ಟೆ ಬಿಚ್ಚಿದಷ್ಟೇ ಕಾಳಜಿಯಿಂದ ಪರಿಸರದ ಬಗ್ಗೆಯೂ ಮಾತನಾಡುತ್ತಾರೆ. ನಮ್ಮ ಪರಿಸರವನ್ನು ರಕ್ಷಿಸುವ ಹೊಣೆಗಾರಿಕೆ ನಮ್ಮಲ್ಲಿದೆ. ಇಂತಹ ಕಾಳಜಿಯನ್ನು ನಾನು ಈ ಕ್ಯಾಲೆಂಡರ್ ಮೂಲಕ ತೋರಿಸುತ್ತಿದ್ದೇನೆ. ನನಗನಿಸುವ ಹಾಗೆ ನಾನು ಸಿಕ್ಕಿದ ಅವಕಾಶವನ್ನು ಬಿಡದೆ, ನನ್ನಿಂದ ಸಾಧ್ಯವಾದಷ್ಟು ಚೆನ್ನಾಗಿ ಈ ಕ್ಯಾಲೆಂಡರ್‌ಗೆ ಪೋಸ್ ನೀಡಿದ್ದೇನೆ. ಛಾಯಾಗ್ರಾಹಕರೂ ಅತ್ಯಂತ ಚೆನ್ನಾಗಿ ಚಿತ್ರಗಳನ್ನು ಸೆರೆಹಿಡಿದಿದ್ದಾರೆ ಎಂದು ವಿವರಿಸುತ್ತಾರೆ ನೇಹಾ ಧೂಪಿಯಾ.

Neha Dhupia
IFM
ಕ್ಯಾಲೆಂಡರ್ ಎಕ್ಸಲೆಂಟ್ ಆಗಿ ಮೂಡಿಬಂದಿದೆ. ಇದು ಮನರಂಜನಾತ್ಮಕವಾಗಿಯೂ ಮೂಡಿಬಂದಿದ್ದು,ಮನರಂಜನೆಯನ್ನು ನೀಡುತ್ತಲೇ ಪರಿಸರದ ಬಗ್ಗೆ ಪ್ರತಿಯೊಬ್ಬರೂ ವಹಿಸಬೇಕಾದ ಕಾಳಜಿಯನ್ನು ವಿಶ್ವಕ್ಕೇ ಸಾರುತ್ತದೆ ಎಂದು ವಿವರಿಸಿದ್ದಾರೆ ನೇಹಾ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ನೇಹಾ ಧೂಪಿಯಾ, ಗೋ ಗ್ರೀನ್, ಬಾಲಿವುಡ್, ಹಾಟ್, ಸೆಕ್ಸೀ