ರಾಖಿ ಸಾವಂತ್ ಎಂಬ ಭರ್ಜರಿ ಐಟಂ ತಾರೆ ಸ್ವಯಂವರಕ್ಕೂ ಮೊದಲು ಹೆಚ್ಚಿಗೆ ಸುದ್ದಿ ಮಾಡಿದ್ದು ಮಿಕಾ ಸಿಂಗ್ ಎಂಬ ಹಿನ್ನೆಲೆ ಗಾಯಕನ ಜೊತೆಗೆ ಪಾರ್ಟಿಯಲ್ಲಿ ತುಟಿಗೆ ತುಟಿ ಸೇರಿಸಿ ಮತ್ತಿನಲ್ಲಿ ಚುಂಬಿಸಿದಾಗ! ಆಮೇಲಿನಿಂದ ರಾಖಿ ನಿಂತರೂ ಕೂತರೂ ಸುದ್ದಿಯಾಗತೊಡಗಿದಳು. ಮಿಕಾ ಸಿಂಗ್ ಎಂಬಾತ ಅದೊಂದು ದಿನ ಪಾರ್ಟಿಯಲ್ಲಿ ರಾಖಿಯನ್ನು ಹಿಡಿದೆಳೆದು ಆಕೆಯ ತುಟಿಗೆ ತುಟಿಯೊತ್ತಿದ್ದ. ಈ ಸಂದರ್ಭ ರಾಖಿ ತನ್ನನ್ನು ಮಿಕಾ ಬಲಾತ್ಕಾರದಿಂದ ಚುಂಬಿಸಿದ ಎಂದು ರಾಷ್ಟ್ರಕ್ಕೆ ರಾಷ್ಟ್ರವೇ ನಿಬ್ಬೆರಗಾಗುವ ಹಾಗೆ ಸುದ್ದಿ ಮಾಡಿದಳು.
ಅದೇನೇ ಇರಲಿ, ರಾಖಿಗೆ ಹಾಗೆ ಚುಂಬಿಸಿದ ಮಿಕಾ ಸಿಂಗ್ ಮಾತ್ರ ಅಬ್ಬರ ಪ್ರಚಾರವನ್ನೇ ಪಡೆದರು. ಇಂದಿಗೂ ಮಿಕಾ ಸಿಂಗ್ ಎಂದರೆ ರಾಖಿಗೆ ಚುಂಬಿಸಿದಾತ ಎಂದೇ ಪ್ರಸಿದ್ಧ ಎಂದರೆ ಅತಿಶಯೋಕ್ತಿಯೂ ಅಲ್ಲ ಬಿಡಿ. ಇಂತಿಪ್ಪ ಮಿಕಾ ಸಿಂಗ್ ಇದೀಗ ಬಂಗಾಳಿ ಸಿನಿಮಾವೊಂದರಲ್ಲಿ ನಟಿಸಿ ಮರಳಿದ್ದಾರೆ. ನಟಿಸಿದ್ದಕ್ಕೆ ಅವರಿಗೆ ಸಿಕ್ಕಾಪಟ್ಟೆ ಖುಷಿಯೂ ಆಗಿದೆ. ಆದರೆ ಬೇಸರದ ಸಂಗತಿಯೆಂದರೆ, ತಾನು ರಾಖಿಯ ತುಟಿಗೆ ಚುಂಬಿಸಿ ವರ್ಷಗಳೇ ಕಳೆದರೂ, ಈಗಲೂ ಮಾಧ್ಯಮದವರು, ಸುತ್ತಮುತ್ತಲ ಮಂದಿ ಎಲ್ಲರೂ, ನನ್ನ ಕೇಳುವುದು ರಾಖಿಯ ಚುಂಬನ ಪ್ರಕರಣದ ಬಗ್ಗೆಯೇ. ಆ ಘಟನೆ ನಡೆದು ವರ್ಷಗಳೇ ಕಳೆದರೂ, ನಂತರ ನಾನು ಸಾಕಷ್ಟು ಸಾಧನೆ ಮಾಡಿದರೂ, ನನ್ನ ಸಾಧನೆ ಬಗ್ಗೆ ಯಾರೂ ಮಾತಾಡೋದಿಲ್ಲ. ಎಲ್ಲರೂ ಆ ಚುಂಬನದ ಸುತ್ತಲೇ ಯಾಕೆ ಸುತ್ತುತ್ತಾರೆಂದು ನನಗರ್ಥವಾಗುತ್ತಿಲ್ಲ ಎಂದರು ಮಿಕಾ.
IFM
ಅದ್ಯಾಕೋ ಏನೋ, ಇತ್ತೀಚೆಗಷ್ಟೆ ಮಿಕಾ ಸಿಂಗ್ ಕಾಶಿಗೆ ಹೋಗಿ ಬಂದಿದ್ದಾರೆ. ತನ್ನ ಹಳೆಯ ಪಾಪಗಳೆಲ್ಲ ತೊಳೆದು ಹೋಗಲಿ ಎಂದು ಮಿಕಾ ಸಿಂಗ್ ಕಾಶಿಯಲ್ಲಿ ಗಂಗಾ ಸ್ನಾನ ಮುಗಿಸಿ ಬಂದಿದ್ದಾರೆ!!!
ಹಾಗಾದ್ರೆ, ಮಿಕಾ ಅವರೇ, ನೀವು ಕಾಶಿಗ್ಯಾಕೋ ಹೋಗಿ ಬಂದರಂತಲ್ಲ, ಪಾಪ ತೊಳೆಯಲು ಅಂತ ಸುದ್ದಿಯಿದೆ. ವಿಷ್ಯ ನಿಜಾನೋ ಎಂದರೆ, ಮಿಕಾ ಸಿಂಗ್ ಯಾವ ಅಳುಕೂ ಇಲ್ಲದೆ, ಹೌದು. ನಾನು ಕಾಶಿಗೆ ಹೋಗಿದ್ದೂ ನಿಜ. ಅಲ್ಲಿ ಗಂಗಾ ಸ್ನಾನ ಮಾಡಿ ಪಾಪ ತೊಳೆದದ್ದೂ ನಿಜ. ಮನುಷ್ಯನಾದ ಮೇಲೆ ಎಲ್ಲರೂ ಪಾಪ ಮಾಡೇ ಮಾಡುತ್ತಾರೆ. ಅದರಲ್ಲಿ ನಾನು ಕೂಡಾ ಒಬ್ಬ. ಇದೇನೂ ದೊಡ್ಡ ವಿಚಾರವೇನೂ ಅಲ್ಲವಲ್ಲ ಎನ್ನುತ್ತಾರೆ!!!