ಪ್ರಿಯಾಂಕಾ ಛೋಪ್ರಾ ಎಂಬ ಬಾಲಿವುಡ್ಡಿನ ಗ್ಲ್ಯಾಮರ್ ಬೊಂಬೆ ಇದೀಗ ಕಿರುತೆರೆಯತ್ತಲೂ ಮುಖ ಮಾಡಿದ್ದಾರೆ. ಹೌದು. ಪ್ರಿಯಾಂಕ ಛೋಪ್ರಾ ಹಿರಿತೆರೆಯಲ್ಲಿ ಬ್ಯುಸಿಯಾಗಿರುವಾಗಲೇ ಕಿರುತೆರೆಯ ಮೂಲಕವೂ ಜನರನ್ನು ಮೋಡಿ ಮಾಡಲು ಬರುತ್ತಿದ್ದಾರೆ.
ಸಾಹಸ ದೃಶ್ಯಗಳ ರಿಯಾಲಿಟಿ ಶೋಗಳ ಮೂಲಕ ಕಿರುತೆರೆಯಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದ ಕೀರ್ತಿ ಅಕ್ಷಯ್ ಕುಮಾರ್‌ಗೆ ಸಲ್ಲುತ್ತದೆ. 13 ಮಂದಿ ಸುಂದರಿಯರಿಗೆ ಸಾಹಸಗಳನ್ನು ನಡೆಸುವ ರಿಯಾಲಿಟಿ ಶೋ ಖತ್ರೋಂ ಕಾ ಖಿಲಾಡಿ.
IFM
ಹಾವು ಚೇಳುಗಳ ಜೊತೆ ಸರಸ, ಐಸ್ ನೀರಿನಲ್ಲಿ ಮುಳುಗೇಳುವುದು, ಎತ್ತರದ ಕಟ್ಟಡದಿಂದ ಧುಮುಕುವುದು... ಹೀಗೆ ಹಲವಾರು ಮೈನವಿರೇಳಿಸುವ ಸಾಹಸಗಳಲ್ಲಿ ಹೂವಿನ ಪಕಳೆಗಳಂತಿದ್ದ 13 ಹುಡುಗಿಯರು ಅಕ್ಷಯ್ ನಡೆಸುವ ಕಾರ್ಯಕ್ರಮದ್ಲಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮ ಮೂರು ಅವತರಣಿಕೆಗಳನ್ನು ಕಂಡಿತ್ತು. ಇದೀಗ ನಾಲ್ಕನೇ ಅವತರಣಿಕೆಯಲ್ಲಿ ಅಕ್ಷಯ್ ಕುಮಾರ್ ಸ್ಥಾನವನ್ನು ಪ್ರಿಯಾಂಕಾ ಛೋಪ್ರಾ ತುಂಬಲಿದ್ದಾರೆ.
ಹೌದು. ಅಂದು ಅಕ್ಷಯ್ ಕುಮಾರ್ ಸ್ಟಂಟ್‌ಗಳನ್ನು ಹುಡುಗಿಯರೆದುರು ಮಾಡುತ್ತಿದ್ದಂತೆಯೇ ಇಲ್ಲಿ ಪ್ರಿಯಾಂಕಾ ಕೂಡಾ ಕೆಲವು ಸ್ಟಂಟ್‌ಗಳನ್ನು ಮಾಡಲಿದ್ದಾರಂತೆ. ಆದರೆ ಇಲ್ಲಿ 13 ಹುಡುಗಿಯರ ಬದಲು 13 ಯುವಕರು ಇರಲಿದ್ದಾರೆ.
ಅಂದಹಾಗೆ ಈ ಕಾರ್ಯಕ್ರಮದ ಚಿತ್ರೀಕರಣ ದಕ್ಷಿಣ ಆಫ್ರಿಕಾ ಹಾಗೂ ಬ್ರೆಝಿಲ್‌ನಲ್ಲಿ ನಡೆಯಲಿದೆ. ಪ್ರಿಯಾಂಕಾಳ ಸ್ಟಂಟ್‌ಗಳನ್ನು ನೋಡಿಯೇ ಉಳಿದ 13 ಮಂದಿ ಅದೇನು ಸಾಹಸ ಮಾಡುತ್ತಾರೋ ಕಾಯಬೇಕು!