ನಿಮಿಷಗಳ ಹಾಡಿಗೆ ದಶಲಕ್ಷ ಖರ್ಚು
ಸಿನಿಮಾ ಹಾಡೊಂದರ ಚಿತ್ರೀಕರಣಕ್ಕೆ ಎಷ್ಟು ಹಣ ವ್ಯಯಿಸಬಹುದು? ಒಂದು ಲಕ್ಷ ? ಎರಡು...? ಉಹುಂ.. 19 ಲಕ್ಷ! ಸುದೀಪ್ ಅವರ 'ನಂ.73 ಶಾಂತಿನಿವಾಸ' ಚಿತ್ರದ ಹಾಡೊಂದು ಈ ರೀತಿ ಸುದ್ದಿ ಮಾಡಿದೆ.
ಹಾಡು ಕೇವಲ ಮೂರೂವರೆ ನಿಮಿಷ ಕಾಲದ್ದಾದರೆ, ವ್ಯಯಿಸಿದ ಹಣ ಮಾತ್ರ ಎರಡು ದಶಲಕ್ಷ ಅನ್ನುವ ಸುದ್ದಿ ಫಿಲ್ಮ್ ಇಂಡಸ್ಟ್ರಿಯ ಮಂದಿ ಹುಬ್ಬೇರಿಸುವಂತೆ ಮಾಡಿದೆ. ಮೇಲುಕೋಟೆಯಲ್ಲಿ ನಿರ್ಮಿಸಿದ ದೀಪಾಲಂಕೃತ ಸೆಟ್‌ನಲ್ಲಿ ಈ ಅದ್ದೂರಿ ಹಾಡನ್ನು ಚಿತ್ರೀಕರಿಸಲಾಗಿದೆ.
ನೂರಾರು ಹೆಲೋಜಿನ್ ಲೈಟುಗಳು, ಹಲವು ಜನರೇಟರ್ಗಳು, ಅರ್ಧ ಲಕ್ಷ ಬಾಡಿಗೆಯ ನಾಲ್ಕು ಕ್ರೇನ್‌ಗಳು, ಕೋಟೆಯೊಳಗಿನ ಪುಷ್ಕರಿಣಿಗೆ ಸೇತುವೆ ಕಮಾನು ಕಟ್ಟಿ, ಹೂವು, ತೋರಣ, ಸಿಂಗಾರ ಮಾಡಿ, 200ರಷ್ಟು ಮಂದಿ ಗರಡಿ ಸಾಧಕರನ್ನು ಬಳಸಿ ಜೋಕಾಲಿ ಮಧ್ಯೆ ವಾದ್ಯ ಪರಿಕರಗಳಿಂದ ಝಗಝಗಿಸುವ ಬೆಳಕಿನಲ್ಲಿ ಚಿತ್ರೀಕರಣ ನಡೆಸಲಾಗಿತ್ತು.