ಗಣೇಶ್ ನಟನೆಯ ಚೆಲುವಿನ ಚಿತ್ತಾರ
'ಮುಂಗಾರು ಮಳೆ'ಯ ಯಶಸ್ಸಿನಲ್ಲಿ ಮಿಂದೆದ್ದು ಉತ್ಸಾಹದಲ್ಲಿರುವ ಕಾಮೆಡಿ ಗಣೇಶ್ ಅವರ ಹೊಸ ಚಿತ್ರ 'ಚೆಲುವಿನ ಚಿತ್ತಾರ'ದ ಚಿತ್ರೀಕರಣ ತಿರುಮಲಕೂಡಲು ನರಸೀಪುರದಲ್ಲಿ ಮುಗಿಸಿ, ಹಾಡುಗಳ ದೃಶ್ಯೀಕರಣದ ಸಿದ್ಧತೆ ನಡೆದಿದೆ.
ಇದೀಗ ಬೆಂಗಳೂರಿನಲ್ಲಿ ಹಾಡುಗಳ ಚಿತ್ರೀಕರಣಕ್ಕೆ ತಂಡ ಸಿದ್ಧವಾಗುತ್ತಿದೆ. ಹಾಡುಗಳಿಗಾಗಿ ಸಂಗೀತ ನಿರ್ದೇಶಕ ಮನೋಮೂರ್ತಿ ಆರು ಹಾಡುಗಳನ್ನು ರಚಿಸಿದ್ದಾರೆ.
ಚಿತ್ರದಲ್ಲಿ ಗಣೇಶ್‌ರೊಂದಿಗೆ ಅಮೂಲ್ಯ, ಕೋಮಲ್ ಕೃಷ್ಣಮೂರ್ತಿ ಮುಂತಾದ ತಾರಾಗಣವಿದೆ. ಎಸ್. ನಾರಾಯಣ್ ನಿರ್ದೇಶನದ ಚಿತ್ರದಲ್ಲಿ ಜಿ. ರೇಣುಕುಮಾರ್ ಛಾಯಾಗ್ರಹಣ, ಸುಂದರಂ ಕಲಾ ನಿರ್ದೇಶನ,ಟೆನ್ಷನ್ ನಾಗರಾಜ್ ಇವರ ನಿರ್ಮಾಣ ನಿರ್ವಹಣೆ ಇರುತ್ತದೆ. ಹೊಸ ಚಿತ್ರ ಮುಂಗಾರು ಮಳೆಯಂತೆಯೇ ಹೊಸ ನಿರೀಕ್ಷೆ ಇರಿಸಿದೆ.