ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಮುಂಗಾರು ಮಳೆಗೆ ಪ್ರಶಸ್ತಿಗಳ ಸುರಿಮಳೆ
ಸುದ್ದಿ/ಗಾಸಿಪ್
Feedback Print Bookmark and Share
 
ಯಶಸ್ಸಿನ ಮೇಲೆ ಯಶಸ್ಸನ್ನು ಗಳಿಸುತ್ತಿರುವ ಮುಂಗಾರು ಮಳೆ ನಿರ್ಮಾಪಕರಿಗೆ ಹಣ, ನಟನಿಗೆ ಬ್ರೇಕ್, ಸಂಗೀತ ನಿರ್ದೇಶಕರಿಗೆ ಹೊಸ ಅವಕಾಶ ಹೀಗೆ ಮಳೆ ತಂಡಕ್ಕೆ ಈಗ ಗಾಂಧಿ ನಗರದಲ್ಲಿ ಸಖತ್ ಡಿಮಾಂಡ್. ಇತ್ತೀಚೆಗೆ ಖಾಸಗಿ ಟಿವಿ ವಾಹಿನಿಯೊಂದರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಂತೂ ಇಡೀ ಚಿತ್ರ ತಂಡವೇ ಆಗಮಿಸಿತ್ತು. ಸಮಗ್ರ ಪ್ರಶಸ್ತಿಯನ್ನೂ ಬಾಚಿಕೊಂಡಿದೆ.

ಮುಂಗಾರು ಮಳೆಯ ಅಭಿನಯಕ್ಕಾಗಿ ಗಣೇಶ್ ಅತ್ಯು ತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ. ಅತ್ಯುತ್ತಮ ನಿರ್ದೇಶಕ ಮತ್ತು ಸಂಭಾಷಣೆಕಾರ ಯೋಗರಾಜ್ ಭಟ್, ಉತ್ತಮ ಸಂಗೀತ ನಿರ್ದೇಶಕ ಮನೋಮೂರ್ತಿ, ಅತ್ಯುತ್ತಮ ನೃತ್ಯ ನಿರ್ದೇಶಕ ಹರ್ಷ, ಖಳನಾಯಕ, ನೀನಾಸಂ ಅಶ್ವಥ್ಥ್, ಗೀತ ರಚನೆ-ಜಯಂತ್ ಕಾಯ್ಕಿಣಿ, ಹಿನ್ನೆಲೆ ಗಾಯನಕ್ಕೆ ಸೋನು ನಿಗಂ ಪ್ರಶಸ್ತಿ ಪಡೆದಿದ್ದಾರೆ.

ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ಮೈ ಆಟೋಗ್ರಾಫ್ ಚಿತ್ರಕ್ಕಾಗಿ ಶ್ರೀನಿವಾಸ್ ಮೂರ್ತಿ ಪಡೆದಿದ್ದಾರೆ. ಗಂಡ ಹೆಂಡತಿ ಚಿತ್ರದ ನಟನೆಗಾಗಿ ಮಂಜುಭಾಷಿಣಿ ಫೋಷಕ ನಟಿ ಪ್ರಶಸ್ತಿ, ನೀನೆಲ್ಲೋ-ನಾನಲ್ಲೇ ಚಿತ್ರಕ್ಕಾಗಿ ಕೋಮಲ್ ಕುಮಾರ್ ಹಾಸ್ಯ ಪ್ರಶಸ್ತಿ ಪಡೆದಿದ್ದಾರೆ.