ಆರ್ಯಭಟ ಕಿರುತೆರೆ ಪ್ರಶಸ್ತಿ ಪ್ರಕಟ
ಕಿರುತೆರೆ ಶ್ರೇಷ್ಠರಿಗೆ ಆರ್ಯಭಟ ಪ್ರಶಸ್ತಿ ಪ್ರಕಟಗೊಂಡಿದೆ. ದಶಮಾನದ ಶ್ರೇಷ್ಠ ಗಾಯಕರಾಗಿ ಎಸ್.ಪಿ ಬಾಲಸುಬ್ರಹ್ಮಣ್ಯ ಹಾಗೂ ಚಿತ್ರ ಪಡೆದಿದ್ದಾರೆ. ಶ್ರೇಷ್ಠ ಗೀತ ರಚನೆಕಾರ ಪ್ರಶಸ್ತಿಯನ್ನು ಕೆ.ಕಲ್ಯಾಣ್, ಶ್ರೇಷ್ಠ ಸಂಗೀತ ನಿರ್ದೇಶಕ ಪ್ರಶಸ್ತಿಯನ್ನು ದೇವ ಪಡೆದಿದ್ದಾರೆ.
ಶ್ರೇಷ್ಠ ದಾರಾವಾಹಿ (ಪ್ರೀತಿ ಇಲ್ಲದ ಮೇಲೆ), ಮಕ್ಕಳ ಧಾರಾವಾಹಿ(ಚಿಕ್ಕ ಕಾಡಿನ ರಹಸ್ಯ), ಉತ್ತಮ ನಿರ್ದೇಶಕ ವಿನುಬಳಂಜ (ಪ್ರೀತಿ ಇಲ್ಲದ ಮೇಲೆ), ನಟ ಅನಂತನಾಗ್ (ಪ್ರೀತಿ ಇಲ್ಲದ ಮೇಲೆ) ನಟಿ ಅಪರ್ಣ (ಪ್ರೀತಿ ಇಲ್ಲದ ಮೇಲೆ) ಪೋಷಕ ನಟ ಅನಂತವೇಲು (ಮಾಂಗಲ್ಯ), ಶ್ರೇಷ್ಠ ಪೋಷಕ ನಟಿ ಬಿ.ಜಯಶ್ರೀ, ಖಳನಾಯಕ ಸುರೇಶ್ ಮಂಗಳೂರು, (ಪ್ರೀತಿ ಇಲ್ಲದ ಮೇಲೆ) ಹಾಸ್ಯನಟ ಶ್ರೀನಿವಾಸ ಗೌಡ (ಸಿಲ್ಲಿಲಲ್ಲಿ) ಕಥೆ-ಸಂಭಾಷಣೆ ಶ್ಯಾಮಸುಂದರ ಕುಲಕರ್ಣಿ( ಏರಲಿ ಹಾರಲಿ ಏಕತೆ ಸಾರಲಿ), ಉತ್ತಮ ಗಾಯಕ ಬದ್ರಿ ಪ್ರಸಾದ್ (ಸಿಲ್ಲಿಲಲ್ಲಿ), ಛಾಯಾಗ್ರಾಹಕ ನಾಗರಾಜ ಆದ್ವಾನಿ (ಪ್ರೀತಿ ಇಲ್ಲದ ಮೇಲೆ), ಉತ್ತಮ ನಿರ್ದೇಶಕ ( ಪಿ.ಶೇಷಾದ್ರಿ) ಶ್ರೇಷ್ಠ ಅಭಿನಯ ಪ್ರೀತಿ ಚಂದ್ರಶೇಖರ, ಸುಂದರ ರಾಜ್ (ಮನೆಯೊಂದು ಮೂರು ಬಾಗಿಲು), ಕಿಶೋರ್ ಕುಮಾರ್ (ತಕಧಿಮಿತ) ಆರ್.ಟಿ.ರಮಾ (ತಾಯಿ).