ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಇನ್ನೊಂದು ಚಿತ್ರದ ಸಿದ್ದತೆಯಲ್ಲಿ ಪ್ರಜ್ವಲ್
ಸುದ್ದಿ/ಗಾಸಿಪ್
Feedback Print Bookmark and Share
 
ತಮ್ಮ ಚೊಚ್ಚಲ ಚಿತ್ರ ಸಿಕ್ಸರ್ ಮೂಲಕ ಕನ್ನಡ ಚಿತ್ರರಂಗಕ್ಕೆ ಅದ್ಭುತವಾದ ಎಂಟ್ರಿ ಪಡೆದಿರುವ ಪ್ರಜ್ವಲ್ ದೇವರಾಜ್ ಅವರ ಎರಡನೇ ಚಿತ್ರಕ್ಕೆ ಅಣಿಯಾಗುತ್ತಿದ್ದಾರೆ. ಹೊಸ ಚಿತ್ರದ ಹೆಸರು ಜಯಂತ್.

ಮೂಕಾಂಬಿಕಾ ಪ್ರೊಡಕ್ಷನ್ಸ್ ನಿರ್ಮಾಣ ಸಂಸ್ಥೆಯಡಿಯಲ್ಲಿ ಚಿತ್ರ ತಯಾರಾಗಲಿದೆ.ಕನ್ನಡದ ಪ್ರತಿಭಾವಂತ ನಡ ದೇವರಾಜ್ ಪುತ್ರ ಪ್ರಜ್ವಲ್.

ಕನ್ನಡದ ಬಹಳಷ್ಟು ಚಿತ್ರಗಳಿಗೆ ನೃತ್ಯ ನಿರ್ದೇಶಕರಾಗಿ ಕೆಲಸ ಮಾಡಿರುವ ಹರ್ಷ ಹೊಸಚಿತ್ರವನ್ನು ನಿರ್ದೇಶಿಸಲಿದ್ದಾರೆ.

ಸುಂಟರಗಾಳಿ ನಿರ್ಮಿಸಿದ ಕಡೂರ್ ಉಮೇಶ್, ಸ್ವಾಮಿ ಚಿತ್ರದ ನಿರ್ಮಾಪಕ ಬಸವರಾಜ್, ಚಿತ್ರ ವಿತರಕರಾದ ಗಂಗಾಧರ್ ಮತ್ತು ವೆಂಕಟೇಶ್ ಅವರುಗಳು ಒಟ್ಟು ಸೇರಿ ನಿರ್ಮಿಸಲಿದ್ದಾರೆ.

ಚಿತ್ರದ ಮತ್ತೊಂದು ಮುಖ್ಯ ಪಾತ್ರದಲ್ಲಿ ತರುಣ್ ಅಭಿನಯಿಸಲಿದ್ದಾರೆ. ಕಥಾಲೇಖಕ ಪ್ರೀತಂ, ಛಾಯಾಗ್ರಾಹಕ ಕೃಷ್ಣ ಮತ್ತು ಸೂಪರ್ ಹಿಟ್ ಚಿತ್ರ ಮುಂಗಾರು ಮಳೆಗೆ ಸುಮಧುರ ಸಂಗೀತದ ಮಳೆಯನ್ನು ಸುರಿಸಿದ ಮನೋಮೂರ್ತಿ ಈ ಚಿತ್ರದ ಮುಖ್ಯ ತಂತ್ರಜ್ಞರಾಗಿದ್ದಾರೆ.