ಮಳೆ ನಿಂತಿಲ್ಲ, ಆಗಲೇ ಹುಡುಗಾಟದ ಸರದಿ
ಯಶಸ್ಸಿನ ಉತ್ತುಂಗಕ್ಕೇರಿರುವ ಮುಂಗಾರು ಮಳೆ ಇನ್ನೂ ಚಿತ್ರಮಂದಿರಗಳಲ್ಲಿ ಓಡುತ್ತಿದೆ. ನಟ ಗಣೇಶ್‌ಗೂ ಬೇಡಿಕೆ ಹೆಚ್ಚಿದೆ.
ನಿರ್ಮಾಪಕರು ಗಣೇಶ್ ಕಾಲ್ ಶೀಟಿಗಾಗಿ ಕಾಯುತ್ತಿದ್ದಾರೆ. ಇದೇ ವೇಳೆ ಇನ್ನೊಂದು ಚಿತ್ರ ಹುಡುಗಾಟ ಬಿಡುಗಡೆಗೆ ಸಿದ್ಧವಾಗಿದೆ. ಮುಂಗಾರು ಮಳೆ ಟ್ರೆಂಡ್ ಮುಗಿದ ತಕ್ಷಣ ಹುಡುಗಾಟವನ್ನು ರಿಲೀಸ್ ಮಾಡೋಣ ಎಂಬುದು ನಿರ್ಮಾಪಕರ ತರ್ಕ.
ಪತ್ರಕರ್ತರಿಗೆ ಹುಡುಗಾಟದ ಹಾಡುಗಳನ್ನಷ್ಟೇ ತೋರಿಸಲಾಗಿದೆ. ಪಾಪ್ ಸಂಗೀತದ ಸ್ಪರ್ಶ ಇದರಲ್ಲಿ ಹೆಚ್ಚಾಗಿದೆ. ಹಾಡು ಸೂಪರ್ ಹಿಟ್ ಆಗುತ್ತೆ ಎಂಬುದು ನಿರ್ಮಾಪಕರ ಅಭಿಪ್ರಾಯ.
ರೇಖಾ ಈ ಚಿತ್ರದ ನಾಯಕ ನಟಿ. ಗಣೇಶ್‌ನೊಂದಿಗೆ ನಟಿಸಿದ್ದ ಚೆಲ್ಲಾಟವೇನೋ ಸೂಪರ್ ಹಿಟ್ ಆಯಿತು. ಹುಡುಗಾಟವೂ ಅದೇ ಮಾದರಿಯಲ್ಲಿದೆ. ಯುವಜನರು ಇಷ್ಟ ಪಡುತ್ತಾರೆ ಎಂಬ ನಂಬಿಕೆ ಚಿತ್ರ ತಂಡದ್ದು.
ಮಂಗಳೂರು, ಕೇರಳದ ವಿವಿಧ ಭಾಗಗಳಲ್ಲಿ ಚಿತ್ರೀಕರಣ ನಡೆಸಿದ್ದೇವೆ ಎನ್ನುತ್ತಾರೆ ನಿರ್ದೇಶಕ ಸಂಜಯ್. ದುನಿಯಾ ಚಿತ್ರಕ್ಕೆ ಕ್ಯಾಮರಾ ವರ್ಕ್ ಮಾಡಿದ ಸತ್ಯ ಹೆಗಡೆ ಚುರುಕಿನ ಕ್ಯಾಮರಾ ವರ್ಕ್ ಮಾಡಿದ್ದಾರೆ. ಕವಿರಾಜ್ ಐದು ಹಾಡುಗಳನ್ನು ಬರೆದಿದ್ದಾರೆ. ಈಗಾಗಲೇ 35 ಸಾವಿರಕ್ಕೂ ಹೆಚ್ಚು ಕ್ಯಾಸೆಟ್ ಬಿಡುಗಡೆಯಾಗಿದೆ ಎನ್ನುತ್ತದೆ ಆನಂದ್ ಆಡಿಯೋ ಸಂಸ್ಥೆ.