'ಸಂತ' ಚಿತ್ರದಲ್ಲಿ ಸಾಂಗ್ಲಿಯಾನ ಮೋಡಿ
ಚಿತ್ರದ ಹೆಸರು ಸಂತ. ಆದರೆ, ಅದರ ಪ್ರಮುಖ ಪಾತ್ರದಲ್ಲಿ ರಿಯಲ್ ಕಾಪ್ ಸಾಂಗ್ಲಿಯಾನ. ಅದೊಂದು ಕಾಲದಲ್ಲಿ ಬೆಂಗಳೂರಿನ ರೌಡಿಗಳ ಪಾಲಿನ ಯಮನಾಗಿದ್ದ ಸೂಪರ್ ಕಾಪ್ ಸಾಂಗ್ಲಿಯಾನಾ ಇದೀಗ 'ಸಂತ' ಚಿತ್ರದ ಆಕರ್ಷಣೆಯಾಗಿದ್ದಾರೆ.
ರೀಲ್ ಹಾಗೂ ರಿಯಲ್ ಎರಡೂ ಮುಖಗಳನ್ನು ನೋಡಿದ್ದೀರಾ ಏನನಿಸುತ್ತೆ ಸಾರ್ ಅಂದರೆ, ಬಿಡ್ರೀ ಎರಡೂ ಒಂದೇ ಎಂದು ಕಂಗ್ಲಿಷ್ನಲ್ಲಿ ಉತ್ತರ ಕೊಡುವ ಈ ಸಾಂಗ್ಲಿಯಾನಾ, ಅಧಿಕಾರದಿಂದ ನಿವೃತ್ತರಾಗಿ ಲೋಕಸಭಾಸದಸ್ಯರಾಗಿ ಆಯ್ಕೆಯಾದವರು.
ಸಂತದಲ್ಲಿ ನಿಮ್ಮ ಪಾತ್ರವೇನು ಎಂದಿದ್ದಕ್ಕೆ ಸಾಂಗ್ಲಿಯಾನಾ ಹೇಳಿದ್ದು ಹೀಗೆ ;
ನೋಡಿ, ಬೆಂಗಳೂರು ಕ್ರೈಂ ಸಿಟಿಯಾಗಿ ಪರಿವರ್ತನೆಯಾಗುತ್ತಿದೆ. ಹಿಂದೆಲ್ಲಾ ರೌಡಿಗಳ ಅಟ್ಟಹಾಸ ರಾತ್ರಿ ನಡೆಯುತ್ತಿತ್ತು. ಆದರೆ, ಈಗ ಹಗಲು ಹೊತ್ತಿನಲ್ಲೇ ರೌಡಿಗಳು ತಮ್ಮ ಅಟ್ಟ ಹಾಸ ಮರೆಯುತ್ತಿದ್ದಾರೆ. ಮಚ್ಚು, ಲಾಂಗ್ ಹಿಡಿದುಕೊಂಡು ಹಗಲು ಹೊತ್ತಿನಲ್ಲೇ ಕಚ್ಚಾಡುತ್ತಿದ್ದಾರೆ. ಪೊಲೀಸ್ ಅಧಿಕಾರಿಯಾಗಿ ಸಮಾಜದಲ್ಲಿ ಅಶಾಂತಿ ಮಾಡುವವರನ್ನು ಮಟ್ಟ ಹಾಕುವುದು ನನ್ನ ಪ್ರಮುಖ ಪಾತ್ರ ಎನ್ನುತ್ತಾರೆ ಈ ಮಾಜಿ ಪೊಲೀಸ್ ಅಧಿಕಾರಿ.
ಶಿವರಾಜ್ ಕುಮಾರ್ ನಾಯಕ ನಟನಾಗಿ ಅಭಿನಯಿಸುವ ಈ ಚಿತ್ರದಲ್ಲಿ, ಶಿವಣ್ಣ ಮಚ್ಚು ಹಿಡಿದಿದ್ದಾರೆ. ಬೆಂಗಳೂರಿನ ದೈನಂದಿನ ಘಟನೆಗಳನ್ನು ಚಿತ್ರವಾಗಿ ಮಾಡಲಾಗುತ್ತಿದೆ. ಬೆಂಗಳೂರು ಕ್ರೈ ಸಿಟಿಯಾಗಿ ಬದಲಾಗುತ್ತಿರುವುದನ್ನು ಚಿತ್ರದಲ್ಲಿ ಎತ್ತಿಹಿಡಿಯಲಾಗಿದೆ. ವಾಸ್ತವಾಂಶವನ್ನು ಮರೆಮಾಚಿಲ್ಲ ಎನ್ನುತ್ತಾರೆ ನಿದೇ್ಶಕ ಮುರಳಿ ಮೋಹನ್. ಚಿತ್ರಕ್ಕೆ ಗುರುಕಿರಣ್ ಸಂಗೀತ ಸ್ಪರ್ಶವಿದೆ